ಉಡುಪಿ ತಾಲೂಕು ಕಚೇರಿ ಕಟ್ಟಡ ಸಂಕೀರ್ಣದಲ್ಲಿ ಲಿಫ್ಟ್ ಸ್ತಬ್ಧ : ಆತಂಕದ ಕ್ಷಣಗಳನ್ನು ಎದುರಿಸಿದ ಜನತೆ..!?!?



ವಿದ್ಯುತ್ ಸಂಪರ್ಕ ಕಡಿತಗೊಂಡು ನಾಲ್ಕು ಮಂದಿ ಲಿಫ್ಟ್ ನಲ್ಲಿ ಸಿಕ್ಕಿಹಾಕಿಕೊಂಡು, ಅಸಹಾಯಕತೆಯಿಂದ ಅರ್ಧ ಗಂಟೆಗಳ ಕಾಲ ಪರದಾಡಿದ ಆತಂಕಕಾರಿ ಘಟನೆ ಜೂನ್ 6 ಗುರುವಾರದಂದು ಬೆಳಿಗ್ಗೆ 10:30 ಗಂಟೆಗೆ ಬನ್ನಂಜೆ ಯಲ್ಲಿರುವ ಉಡುಪಿ ತಾಲೂಕು ಕಚೇರಿ ಕಟ್ಟಡ ಸಂಕೀರ್ಣದಲ್ಲಿ ನಡೆದಿದೆ.
ಜನರೇಟರಿಗೆ ಇಂಧನ ಇಲ್ಲದೆ, ತುರ್ತು ನಿರ್ಗಮನ ವ್ಯವಸ್ಥೆಯು ಇಲ್ಲದೆ ಜನತೆ ತಾಲೂಕು ಆಡಳಿತಕ್ಕೆ ಹಿಡಿ ಶಾಪ ಹಾಕುವಂತಾಗಿದೆ.
ಸರಕಾರಿ ಕೆಲಸ ಕಾರ್ಯಗಳಿಗೆಂದು ಬರುವ ಜನತೆ ಬೆಳಿಗ್ಗೆನಿಂದ ಸಾಯಂಕಾಲದ ವರೆಗೆ ಲಿಫ್ಟ್ ವ್ಯವಸ್ಥೆ ಯನ್ನು ಬಳಸುತ್ತಿದ್ದು, ಆಕಸ್ಮಿಕವಾಗಿ ಏನಾದರೂ ತಾಂತ್ರಿಕ ತೊಂದರೆ ಅಥವಾ ವಿದ್ಯುತ್ ಸಂಪರ್ಕ ಕಡಿತಗೊಂಡಾಗ ಲಿಫ್ಟ್ ನ ಒಳಗಿದ್ದ ವರಿಗೆ ಏನೂ ಮಾಡಲೂ ತೋಚದೆ ಭಯಭೀತರಾಗಿ ಕಾಲ ಕಳೆಯುವ ಸನ್ನಿವೇಶ ಸೃಷ್ಟಿಯಾಗುತ್ತದೆ.
ಲಿಫ್ಟನ ನಿರ್ವಹಣೆಯನ್ನು ಸರಿಯಾಗಿ ನಡೆಸದೆ, ಲಿಫ್ಟ್ ನ ಮೇಲುಸ್ತುವಾರಿಯ ಜವಾಬ್ದಾರಿ ಸರಿಯಾಗಿ ನಿರ್ವಹಿಸದೆ ಇರುವುದೇ ಇಂತಹ ಘಟನೆಗಳಿಗೆ ಕಾರಣವಾಗುತ್ತದೆ ಎಂದು ಜನರಾ ಡಿಕೊಳ್ಳುತ್ತಿದ್ದಾರೆ.


ಈ ಬಗ್ಗೆ ಉಡುಪಿ ತಾಲೂಕು ತಹಶೀಲ್ದಾರ್ ರವರು ಕೂಡಲೇ ಲಿಫ್ಟ್ ನಿರ್ವಹಣೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ ಮುಂದೆ ಎಂದೂ ಇಂತಹ ದುರ್ಘಟನೆ ನಡೆಯದ ಹಾಗೆ ಎಚ್ಚರಿಕೆ ವಹಿಸುವುದು ತೀರಾ ಅಗತ್ಯ ಎಂದು ಲಿಫ್ಟ್ನಿಂದ ತೊಂದರೆಗಳಾದ ಮೂಡಬಿದ್ರೆಯ ವಿಶ್ವಕುಮಾರ್ ಭಟ್ರವರು ಉಡುಪಿ ತಹಶೀಲ್ದಾರ್ ಅವರಿಗೆ ಲಿಖಿತ ದೂರು ನೀಡಿ ಪತ್ರಿಕಾ ಮಾಧ್ಯಮಕ್ಕೆ ತಿಳಿಸಿರುತ್ತಾರೆ.






































