[t4b-ticker]

ಉಡುಪಿ ಜಿಲ್ಲಾ ಬಿ.ಜೆ.ಪಿ ವಕ್ತಾರರಾಗಿ ಮುಟ್ಲುಪಾಡಿ ಸತೀಶ್‌ ಶೆಟ್ಟಿ ಆಯ್ಕೆ

Picture of RB NEWS

RB NEWS

Bureau Report

ಉಡುಪಿ ಜಿಲ್ಲಾ ಬಿ.ಜೆ.ಪಿ ವಕ್ತಾರರಾಗಿ ಮುಟ್ಲುಪಾಡಿ ಸತೀಶ್‌ ಶೆಟ್ಟಿ ಆಯ್ಕೆಯಾಗಿದ್ದಾರೆ.

ಇವರು ರೈತ ಮೋರ್ಚಾ ಬಿ.ಜೆ.ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ರೈತ ಮೋರ್ಚಾ ಬಿ.ಜೆ.ಪಿ ಉಡುಪಿ ಜಿಲ್ಲಾ ಅಧ್ಯಕ್ಷರಾಗಿ, ಜಿಲ್ಲೆಯಲ್ಲಿ ಮತ್ತು ರಾಜ್ಯ ವ್ಯಾಪ್ತಿಯಲ್ಲಿ ರೈತ ಪರ ಹೋರಾಟದ ಮುಂಚೂಣಿ ನಾಯಕರಾಗಿಯಾಗಿ ಗುರುತಿಸಿಕೊಂಡಿದ್ದಾರೆ.
ಕಾರ್ಕಳ ಎ.ಪಿ ಎಂ.ಸಿ ಯ ಅಧ್ಯಕ್ಷರಾಗಿ ಕರ್ನಾಟಕ ರಾಜ್ಯ ಎ.ಪಿ.ಎಂ.ಸಿ ಮಂಡಳಿಯ ನಿರ್ದೇಶಕರಾಗಿ ರಾಜ್ಯದ ಹಲವಾರು ಪ್ರಮುಖ ಹೋರಾಟಗಳಲ್ಲಿ ಭಾಗವಹಿಸಿದರು.

ರಾಜ್ಯದ ಹಲವಾರು ಸಂಘ ಸಂಸ್ಥೆ ಗಳಲ್ಲಿ ಮತ್ತು ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಮುಂಚೂಣಿ ನಾಯಕರಾಗಿ ಹೆಸರುಗಳಿಸಿರುವ ಮುಟ್ಟುಪಾಡಿ ಸತೀಶ್‌ ಶೆಟ್ಟಿ ಯವರು ಈ ಬಾರಿ ಉಡುಪಿ ಜಿಲ್ಲಾ ಬಿ.ಜೆ. ಪಿ. ವಕ್ತಾರರಾಗಿ ಆಯ್ಕೆಯಾಗಿದ್ದಾರೆ.‌

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top