ಉಡುಪಿ -ಕಾಸರಗೋಡು 400 ಕೆವಿ ವಿದ್ಯುತ್ ಲೈನ್ ವಿರೋಧಿಸಿ ನಡೆಯುವ ಹೋರಾಟಕ್ಕೆ ಭಾ.ಕಿ.ಸಂ ಬೆಂಬಲ

Picture of RB NEWS

RB NEWS

Bureau Report

ಕಾರ್ಕಳ: ಉಡುಪಿ ಕಾಸರಗೋಡು ನಡುವೆ 400 ಕೆವಿ ವಿದ್ಯುತ್ ಲೈನ್ ವಿರೋಧಿಸಿ ನಡೆಯುವ ಹೋರಾಟಕ್ಕೆ ಬಾರತೀಯ ಕಿಸಾನ್ ಸಂಘ ಸಂಪೂರ್ಣ ಬೆಂಬಲ ನೀಡಿಲಿದೆ. ಈ ಕುರಿತು ಭಾರತೀಯ ಕಿಸಾನ್ ಸಂಘ ಕಾರ್ಕಳ ತಾಲೂಕು ಸಮಿತಿಯ ಮಾಸಿಕ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಯಿತು.

ಸಂಘದ ಉಪಾಧ್ಯಕ್ಷ ಮೋಹನದಾಸ ಅಡ್ಯಂತಾಯರವರ ಅಧ್ಯಕ್ಷತೆವಹಿಸಿದ್ದರು.

ಭಾ,ಕಿ,ಸಂ ಜಿಲ್ಲಾಧ್ಯಕ್ಷ ನವೀನ್‌ಚಂದ್ರ ಜೈನ್‌ರವರು ಮಾತನಾಡಿ ಮೆಸ್ಕಾಂ ವಿದ್ಯುತ್‌ದರ ಏರಿಕೆ ಪ್ರಸ್ತಾವನೆಯನ್ನು ಭಾ.ಕಿ.ಸಂ ತೀವ್ರವಾಗಿ ವಿರೋಧಿಸುತ್ತದೆ. ಈ ಬಗ್ಗೆ ವ್ಯಾಪಕವಾಗಿ ಆಕ್ಷೇಪಣಾ ಅರ್ಜಿ ಸಲ್ಲಿಸುವಂತೆ ಎಲ್ಲಾ ಗ್ರಾಮಸಮಿತಿ ಪದಾಧಿಕಾರಿಗಳಿಗೆ ವಿನಂತಿಸಿದರು.

ಹವಾಮಾನ ವೈಪರೀತ್ಯ ಮತ್ತು ಅಕಾಲಿಕ ಮಳೆಯಿಂದಾಗುವ ಬೆಳೆ ನಷ್ಟದ ಬಗ್ಗೆ ಸೂಕ್ತ ಪರಿಹಾರ ಮಂಜೂರಾತಿಗಾಗಿ ಸರಕಾರಕ್ಕೆ ಹಕ್ಕೊತ್ತಾಯ ನಡೆಸಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು.

ಪಡಿತರ ಚೀಟಿ ತಿದ್ದುಪಡಿ, ಸೇರ್ಪಡೆಯಲ್ಲಿ ಆಗುತ್ತಿರುವ ಗೊಂದಲಗಳ ಬಗ್ಗೆ ಸಭೆಯಲ್ಲಿ ಉಪಸ್ಥಿತರಿದ್ದ ರೈತರು ಪ್ರಸ್ತಾಪಿಸಿ ಈ ಬಗ್ಗೆ ಸಂಬAಧಿತ ಇಲಾಖೆಯೊಂದಿಗೆ ವಕಾಲತ್ತು ನಡೆಸಲು ನಿರ್ಧರಿಸಲಾಯಿತು.

ಸುಂದರ ಶೆಟ್ಟಿ ಮುನಿಯಾಲು, ಕೆ.ಪಿ.ಭಂಡಾರಿ ಕೆದಿಂಜೆ, ಉಪೇಂದ್ರ ನಾಯಕ್ ಮರ್ಣೆ, ಹರೀಶ್ ಕಲ್ಯಾ, ನಿರ್ಮಲ ಮಿಯ್ಯಾರು, ರೇವತಿ ಕಡ್ತಲ, ಕರುಣಾಕರ ಶೆಟ್ಟಿ ಬೋಳಾ, ಮಂಜುನಾಥ ನಾಯಕ್ ಹಿರ್ಗಾನ, ಶೇಖರ್ ಶೆಟ್ಟಿ ನೀರೆ ಮತ್ತು ಗ್ರಾಮ ಹಾಗೂ ತಾಲೂಕು ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ಇನ್ನಾ ನಿರ್ವಹಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top