ಉಚಿತ ಕಣ್ಣು ಹಾಗೂ ಆರೋಗ್ಯ ತಪಾಸಣಾ ಶಿಬಿರ

Picture of RB NEWS

RB NEWS

Bureau Report

ಮೂಡುಬಿದ್ರೆ: ಸ್ಥಳೀಯ ಪವರ್ ಫ್ರೆಂಡ್ಸ್ ಬೆದ್ರ ಹಾಗೂ ಇನ್ನರ್ ವೀಲ್ ಕ್ಲಬ್ ಇವರ ಜಂಟಿ ಆಶ್ರಯದಲ್ಲಿ ಎ ಜೆ ವೈದ್ಯಕೀಯ ಮಹಾವಿದ್ಯಾಲಯ ಮಂಗಳೂರು ಇವರ 35 ಮಂದಿ ತಂಡದಿಂದ ಉಚಿತ ಕಣ್ಣು ಹಾಗೂ ಆರೋಗ್ಯ ತಪಾಸಣಾ ಶಿಬಿರ ಆಗಸ್ಟ್ 18ರಂದು ಬೆಳಗ್ಗೆ 9:00 ಗಂಟೆಯಿಂದ ಮೂಡುಬಿದಿರೆ ಕನ್ನಡ ಭವನದಲ್ಲಿ ನಡೆಯಲಿದೆ. ಆಯ್ದ ಫಲಾನುಭವಿಗಳಿಗೆ ಕನ್ನಡಕವನ್ನು ಒದಗಿಸಲಾಗುವುದು. ಕಣ್ಣಿನ ತಪಾಸಣೆ, ಕಿವಿ, ಮೂಗು, ಗಂಟಲು, ಸಾಮಾನ್ಯ ಆರೋಗ್ಯ, ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆ, ದಂತ ತಪಾಸಣೆ, ಮತ್ತು ಎಲ್ಲ ರೀತಿಯ ರೋಗ ತಪಾಸಣೆಗಳನ್ನು ಉಚಿತವಾಗಿ ನಡೆಸಿ ಸೂಕ್ತ ಪರಿಹಾರವನ್ನು ಒದಗಿಸಲು ಪ್ರಯತ್ನಿಸಲಾಗುವುದು ಎಂದು ಪವರ್ ಫ್ರೆಂಡ್ಸ್ ನ ಅಧ್ಯಕ್ಷ ವಿನಯ್ ಕುಮಾರ್, ಉಪಾಧ್ಯಕ್ಷ ಜಯಪ್ರಸಾದ್ ಭಂಡಾರಿ ಹಾಗೂ ಇನ್ನರ್ ವೀಲ್ ಅಧ್ಯಕ್ಷ ಬಿಂದಿಯ ಶರತ್ ಶೆಟ್ಟಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹಿಂದಿನ ವರ್ಷಗಳಲ್ಲಿ ಸುಮಾರು ರೂ.700ಕ್ಕೂ ಹೆಚ್ಚು ಫಲಾನುಭವಿಗಳಿಗೆ ಪರಿಹಾರವನ್ನು ಒದಗಿಸಲಾಗಿದೆ. ಈ ವರ್ಷವೂ ನಾಗರಿಕರು ಈ ಉಚಿತ ತಪಾಸಣೆ ಹಾಗೂ ಪರಿಹಾರದ ಶಿಬಿರದ ಸದುಪಯೋಗವನ್ನು ಮಾಡಿಕೊಳ್ಳಬೇಕೆಂದು ಸಂಘಟಕರು ವಿನಂತಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top