ಭಾಗ-17
ಈಶ್ವರ ಭಟ್ ಮನೆಯ ಕೆಲಸಗಾರನನ್ನು ಪತ್ತೆ ಹಚ್ಚಿದ ಸಿಓಡಿ!
ಕಲ್ಲಡ್ಕ ಇಸ್ಮಾಯಿಲ್ ಕೊಲೆ ಪ್ರಕರಣದ ವಿಚಾರಣೆಯು ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಮುಂದುವರಿಯುತ್ತಿದ್ದoತೆಯೇ ಸಿಓಡಿ ಪೊಲೀಸರು ತನಿಖಾ ಸಂದರ್ಭದಲ್ಲಿ ಸಂಗ್ರಹಿಸಿದ್ದ ಸಾಕ್ಷö್ಯಗಳು ಕುತೂಹಲವನ್ನು ಸೃಷ್ಠಿಸಿತ್ತು. ಅದರಲ್ಲಿ ಮುಖ್ಯವಾದದ್ದು ಆರೋಪಿಗಳಲ್ಲೊಬ್ಬರಾದ ಈಶ್ವರ ಭಟ್ ಅವರ ಮನೆಯಲ್ಲಿ ಇಸ್ಮಾಯಿಲ್ ಹತ್ಯೆಯಾದ ಸಂದರ್ಭದಲ್ಲಿ ಕೆಲಸಕ್ಕಿದ್ದಂತಹ ಉತ್ತರಭಾರತ ಮೂಲದ ಕೆಲಸಗಾರನನ್ನು ಹುಡುಕಿ ಸಾಕ್ಷಿಯನ್ನಾಗಿಸಿದ್ದು ಸಿಓಡಿ ಪೊಲೀಸರ ತನಿಖಾ ಜಾಣ್ಮೆಗೆ ಸಾಕ್ಷಿ. ಅಲ್ಲದೆ ಆ ಪ್ರಕರಣಕ್ಕೆ ಸಂಬoಧಪಟ್ಟ ಇನ್ನಿತರ ಸಾಕ್ಷಿಗಳೂ ಸಹ ನ್ಯಾಯಾಲಯದಲ್ಲಿ ಸಾಕ್ಷಿ ನುಡಿದಿದ್ದರು. ಅವರ ಹೇಳಿಕೆಗಳು ಈ ರೀತಿ ಇದೆ.
70ನೇ ಸಾಕ್ಷಿ ರಮಾಕಾಂತ ದುಬೆಯವರು ಸಾಕ್ಷಿ ಹೇಳುತ್ತಾ ನಾನು ಉತ್ತರಪ್ರದೇಶದ ಸುಲ್ತಾನಪುರ ಜಿಲ್ಲೆಯ ನಾರಾಯಣಪುರ ಎಂಬಲ್ಲಿನ ನಿವಾಸಿ. ನಾನು ದಕ್ಷಿಣ ಕನ್ನಡಕ್ಕೆ 6 ವರ್ಷಗಳ ಹಿಂದೆ ಬಂದೆ. ನನಗೆ ಈ ಕೇಸಿನ 3ನೇ ಆರೋಪಿ ಈಶ್ವರ ಭಟ್ಟರ ಪರಿಚಯ ಒಂದೂವರೆ ವರ್ಷಗಳಿಂದ ಇದೆ. ನಾನು ಅವರ ಮನೆಯಲ್ಲಿ ಹಾಲು ಕರೆವ ಕೆಲಸ ಮಾಡುತ್ತಿದ್ದೆ. ನಾನು ಅವರ ಮನೆಯಲ್ಲಿ 1976 ನವೆಂಬರ್ ತನಕ ಕೆಲಸ ಮಾಡಿಕೊಂಡಿದ್ದೆ. ಅದರಿಂದ ಮೊದಲು 4 ತಿಂಗಳ ಹಿಂದೆ 1 ತಿಂಗಳ ಕಾಲವೂ ಅದೇ ಕೆಲಸವನ್ನು ಅಲ್ಲೇ ಮಾಡಿದ್ದೆ. ಫೆಬ್ರವರಿಯಿಂದ ನವೆಂಬರ್ ತನಕ ಇರುವಾಗ 3ನೇ ಆರೋಪಿ ಈಶ್ವರ ಭಟ್ಟರ ಮನೆಯಲ್ಲಿಯೇ ಊಟ ತಿಂಡಿ ಮಾಡುತ್ತಿದ್ದೆ. ರಾತ್ರಿ ಅಲ್ಲಿಯೇ ಮಲಗುತ್ತಿದ್ದೆ. ನನಗೆ ತಿಂಗಳಿಗೆ ಖರ್ಚು ಕಳೆದು 115 ರೂ. ಸಂಬಳ ಕೊಡುತ್ತಿದ್ದರು’ ಎಂದು ವಿವರಿಸಿದರು. ಆ ಸಮಯದಲ್ಲಿ ಅನೇಕ ಮಂದಿ ಈಶ್ವರ ಭಟ್ಟರ ಮನೆಗೆ ಬರುತ್ತಿದ್ದರು. ಹಾಗೆ ಬರುತ್ತಿದ್ದವರಲ್ಲಿ ವಸಂತ ಬಂಗೇರ, ರಾಜರಾಮ ಅಧಿಕಾರಿ, ನೇಮಿರಾಜ ಶೆಟ್ಟಿ, ಚಂದ್ರು, ಶೇಖರ ಪೂಜಾರಿ, ಪುರಂದರ ಭಟ್ಟ, ಸೇಮಿತ, ಮಹಾಬಲ ದಾಸಪ್ಪ ಮಾಸ್ತರ್, ಸೋಮಶೇಖರ್ ಮತ್ತು ವೆಂಕಟ್ರಮಣ ಭಟ್ಟರು ಮೊದಲಾದವರ ಪರಿಚಯ ನನಗಿದೆ. ಅವರಲ್ಲಿ ಈ ಕೇಸಿನ 2ನೇ ಆರೋಪಿ ಮಹಾಬಲ ದೇವಾಡಿಗರ , 5ನೇ ಆರೋಪಿ ಭೊಜರಾಜ ಸೇಮಿತರ ಪರಿಚಯ ನನಗಿದೆ’ ಎಂದು ಹೇಳಿದರು.
ಬಾಗಿಲಿಗೆ ಕಿವಿ ಕೊಟ್ಟಾಗಮೇಲೆ ಹೇಳಿದವರೆಲ್ಲ ಕಳೆದ ಸೆಪ್ಟಂಬರ್ ತಿಂಗಳಲ್ಲಿ ಈಶ್ವರ ಭಟ್ಟರ ಮನೆಗೆ ರಾತ್ರಿ 8 ಗಂಟೆಯ ಸಮಯ ಬಂದರು. ಅವರೆಲ್ಲರೂ ಈಶ್ವರ ಭಟ್ಟರ ಮನೆಯ ಒಂದು ಕೋಣೆಗೆ ಹೋಗಿ ಬಾಗಿಲು ಹಾಕಿ ಏನನ್ನೋ ಮಾತನಾಡುತ್ತಿದ್ದರು. ನಾನು ಬಾಗಿಲಿನ ಹತ್ತಿರ ಹೋಗಿ ಕಿವಿ ಕೊಟ್ಟಾಗ ಇಸ್ಮಾಯಿಲ್ ಮತ್ತು ರುಕ್ಮಯ ಪೂಜಾರಿ ಎಂದು ಮಾತಾಡುವುದು ಕೇಳಿಸಿತು. ಆಗ ಈ ಕೇಸಿನ 5ನೇ ಆರೋಪಿಯಾಗಿರುವ ಭೊಜರಾಜ ಸೇಮಿತರು ಬಾಗಿಲು ತೆಗೆದು ಹೊರಗೆ ಬರುವುದನ್ನು ಕಂಡೆ. ಹಾಗೆ ಕೂಡಲೇ ನಾನು ಹೊರಗೆ ಹೋದೆ. ಸುಮಾರು ರಾತ್ರಿ 12 ಗಂಟೆ ಸಮಯಕ್ಕೆ ಎಲ್ಲರೂ ಊಟ ಮುಗಿಸಿದ ನಂತರ ಚಂದ್ರು, ಶೇಖರ ಮತ್ತು ವೆಂಕಟ್ರಮಣ ಭಟ್ಟರು ಮನೆಯಲ್ಲೇ ಉಳಿದುಕೊಂಡು ಬಾಕಿಯವರೆಲ್ಲ ಮನೆಯಿಂದ ಹೋದರು’ ಎಂದು ಸಾಕ್ಷಿ ದುಬೆ ವಿವರಿಸಿದರು. ಆ ಬಳಿಕ ಎರಡು ದಿನ ಕಳೆದ ಮೇಲೆ ರಾತ್ರಿ 1 ಗಂಟೆಯ ಸಮಯ ನಾನು ಚಾವಡಿಯಲ್ಲಿ ಮಲಗಿಕೊಂಡಿದ್ದಾಗ ಜೀಪು ಬರುವ ಶಬ್ದ ಕೇಳಿ ನಾನು ಎಚ್ಚೆತ್ತೆ. ಎದ್ದು ನೋಡಿದಾಗ ಜೀಪು ಈಶ್ವರ ಭಟ್ಟರ ಅಂಗಳದಲ್ಲಿ ನಿಂತಿತ್ತು. ಜೀಪು ನಿಂತ ಸ್ಥಳದಲ್ಲಿಯೇ ವಿದ್ಯುತ್ ದೀಪ ಇತ್ತು. ಜೀಪಿನಲ್ಲಿ ಈ ಕೇಸಿನ 2ನೇ ಆರೋಪಿ ಪುರಂದರ ಭಟ್ಟ, 3ನೇ ಆರೋಪಿ ಈಶ್ವರ ಭಟ್ಟ, 5ನೇ ಆರೋಪಿ ಭೊಜರಾಜ ಸೇಮಿತ, ಚಂದ್ರ್ರು ಮತ್ತು ಪರಿಚಯ ಸಿಗದ ಒಬ್ಬರು ಇದ್ದರು. ಈಶ್ವರ ಭಟ್ಟರು, ಭೊಜರಾಜ ಸೇಮಿತರು ಮತ್ತು ಚಂದ್ರು ಜೀಪಿನಿಂದ ಕೆಳಗಿಳಿದರು. ಆಗ ಚಂದ್ರು ಕೈಯ್ಯಲ್ಲಿ ಒಂದು ಕಟ್ಟು ಇತ್ತು. ಅವರು ಪುರಂದರ ಭಟ್ಟರಲ್ಲಿ ಐದು ನಿಮಿಷ ಮಾತನಾಡಿದರು. ಆ ಬಳಿಕ ಜೀಪು ಅಲ್ಲಿಂದ ಹೋಯಿತು. ಜೀಪನ್ನು ಪುರಂದರ ಭಟ್ಟರೇ ಡ್ರೆöÊವ್ ಮಾಡುತ್ತಿದ್ದರು. ಇನ್ನೊಬ್ಬರು ಜೀಪಿನಲ್ಲಿ ಕುಳಿತಿದ್ದರು. ಈಶ್ವರ ಭಟ್ಟರು, ಭೊಜರಾಜ ಸೇಮಿತರು ಹಾಗೂ ಚಂದ್ರು ಮನೆಯ ಹಿಂದುಗಡೆ ಹೋದರು. ನನ್ನನ್ನು ಮಲಗುವಂತೆ ಹೇಳಿದರು’ ಎಂದು ಸಾಕ್ಷಿ ಹೇಳಿದರು.
ಬಟ್ಟೆ ಹೊತ್ತುವ ವಾಸನೆನಾನು ಮಲಗಲು ತಯಾರು ಮಾಡುವ ಸಮಯ ಬಟ್ಟೆ ಹೊತ್ತುವ ವಾಸನೆ ಬಂತು. ನಾನು ಕೂಡಲೇ ಮನೆಯ ಹೊರಗೆ ಬಂದು ಬಚ್ಚಲು ಕೊಟ್ಟಿಗೆ ಕಡೆಗೆ ಹೋದಾಗ ಅಲ್ಲಿ ಬೂದಿ ರಾಶಿಯ ಹತ್ತಿರ ಬೆಂಕಿ ಕಂಡೆ. ಅಲ್ಲೇ ಹತ್ತಿರದಲ್ಲಿ ಈಶ್ವರ ಭಟ್ಟರು, ಭೊಜರಾಜ ಸೇಮಿತರು ಹಾಗೂ ಚಂದ್ರು ನಿಂತಿದ್ದರು. ನನ್ನನ್ನು ಕಂಡೊಡನೆ ಆ ಬೆಂಕಿ ಮೇಲೆ ಬೂದಿಯನ್ನು ಹಾಕುವಂತೆ ಹೇಳಿದರು. ಈಶ್ವರ ಭಟ್ಟರು ನನ್ನನ್ನು ನೋಡಿ ಹೋಗಿ ಮಲಗುವಂತೆ ಗದರಿಸಿದರು. ಸ್ವಲ್ಪ ಹೊತ್ತಿನಲ್ಲಿ ಅವರೆಲ್ಲರೂ ಮನೆಯೊಳಕ್ಕೆ ಬಂದು ಮನೆಯೊಳಗೆ ಮಲಗಿದರು. ಮಾರನೇ ದಿನ ಬೆಳಿಗ್ಗೆ ಟಿಫಿನ್ ಆದ ಮೇಲೆ ಎಲ್ಲರೂ ಹೋದರು’ ಎಂದು ಸಾಕ್ಷಿ ರಮಾಕಾಂತ ದುಬೆ ವಿವರಿಸಿದರು. ಆ ಬಳಿಕ ತಾನು ನವೆಂಬರ್ ತಿಂಗಳಲ್ಲಿ ಈಶ್ವರ ಭಟ್ಟರಲ್ಲಿಂದ ಕೆಲಸ ಬಿಟ್ಟು ಹೋಗುವವರೆಗೆ ಈಶ್ವರ ಭಟ್ಟರು ಯಾವಾಗಲೂ ರಾತ್ರಿ 11-12 ಗಂಟೆಗೆ ಬರುತ್ತಿದ್ದರು. ಬೆಳಿಗ್ಗೆ ಬೇಗನೆ ಹೋಗುತ್ತಿದ್ದರೆಂದೂ ಸಾಕ್ಷಿ ಹೇಳಿದರು. ಬಟ್ಟೆ ಹೊತ್ತಿಸಿದುದನ್ನು ನೋಡಿದ 2 ದಿನಗಳ ನಂತರ ನಾನು ಬೆಳ್ತಂಗಡಿಗೆ ಬಂದಾಗ ಹೊಟೇಲಿನಲ್ಲಿ ಜನರು ಇಸ್ಮಾಯಿಲ್ ಎಂಬವರನ್ನು ಜೀಪಿನಲ್ಲಿ ಅಪಹರಿಸಿಕೊಂಡು ಹೋದುದನ್ನು ಕೇಳಿ ತಿಳಿದೆ. ಆಮೇಲೆ 4 ದಿನಗಳ ನಂತರ ಇಸ್ಮಾಯಿಲ್ರವರ ಮೃತದೇಹ ನೇತ್ರಾವತಿ ಹೊಳೆಯಲ್ಲಿ ಸಿಕ್ಕಿದುದು ತಿಳಿದುಬಂತು’ ಎಂದವರು ಹೇಳಿದರು.
ಆ ಬಳಿಕ ತಾನು ಈಗ ಅಳದಂಗಡಿ ಎಂಬಲ್ಲಿ ಒಂದು ಮಿಲ್ಕ್ ಡೈರಿಯಲ್ಲಿ ಕೆಲಸ ಮಾಡಿಕೊಂಡಿರುವುದಾಗಿಯೂ ಸಾಕ್ಷಿ ತಿಳಿಸಿದರು.
ಅಡ್ಡ ವಿಚಾರಣೆಯಲ್ಲಿ ನಾನು ನನ್ನ 17ನೇ ವಯಸ್ಸಿನಲ್ಲಿ ನನ್ನ ಊರನ್ನು ಬಿಟ್ಟೆ. ಆ ಬಳಿಕ ನಾನು ಕೊಲ್ಕತ್ತಾ, ಬೊಂಬಾಯಿ, ಗೋವಾ ಮೊದಲಾದ ಕಡೆಗಳಲ್ಲಿ ಕೆಲಸ ಮಾಡುತ್ತಿದ್ದೆ. ನನ್ನ ಹೆಂಡತಿ ಮಕ್ಕಳು ಉತ್ತರಪ್ರದೇಶದಲ್ಲಿ ಊರಲ್ಲೇ ಇದ್ದಾರೆ. ನಾನು ಒಂದೂವರೆ ಎರಡು ವರ್ಷಗಳಿಗೊಮ್ಮೆ ಊರಿಗೆ ಹೋಗುತ್ತಿದ್ದೇನೆ’ ಎಂದು ಸಾಕ್ಷಿ ಹೇಳಿದರು. ದ.ಕ. ಜಿಲ್ಲೆಗೆ ಸುಮಾರು 6 ವರ್ಷಗಳ ಹಿಂದೆ ಬಂದ ಮೇಲೆ 5-6- ಕಡೆಗಳಲ್ಲಿ ಕೆಲಸ ಮಾಡಿದುದಾಗಿ ಹೇಳಿದ ಅವರು, ಈ ಕೇಸಿನಲ್ಲಿ ಸಿಓಡಿ ಪೊಲೀಸರು ನಾಲ್ಕುವರೆ ತಿಂಗಳ ಮೊದಲು ನನ್ನನ್ನು ವಿಚಾರಿಸಿದರೆಂದೂ, ಅದರ ಮೊದಲು 7-8 ತಿಂಗಳುಗಳ ಹಿಂದೆ ಮೇಲೆ ಹೇಳಿದವರೆಲ್ಲರೂ ಈಶ್ವರ ಭಟ್ಟರ ಮನೆಯಲ್ಲಿ ರಾತ್ರಿ 8 ಗಂಟೆಗೆ ಕೂಡಿರುವುದಾಗಿಯೂ, ಈಶ್ವರ ಭಟ್ಟರ ಮನೆಯಲ್ಲಿ ಇತರ ಕೆಲಸದವರೂ ಇದ್ದಾರೆಂದು ಹೇಳಿದ ಸಾಕ್ಷಿಯವರು, ಅವರ ಹೆಸರು ಮಾಲಿಂಗ ನಾಯ್ಕ, ಬಾಬು ಪೂಜಾರಿ ಮತ್ತು ಹೊನ್ನಮ್ಮ ಎಂಬುದಾಗಿಯೂ, ಅವರೆಲ್ಲರೂ ಪ್ರತ್ಯೇಕ ಮನೆಯಲ್ಲಿ ವಾಸ್ತವ್ಯ ಇರುವರೆಂದು ಆರೋಪಿ ಪರ ವಕೀಲರ ಪ್ರಶ್ನೆಗೆ ಉತ್ತರ ನೀಡಿದರು. ಅದು ನನಗೆ ತಿಳಿಯದು ಅಂದು ರಾತ್ರಿ ಕೋಣೆಗೆ ಬಾಗಿಲು ಹಾಕಿ ಒಳಗೆ ಧನಿಗಳು ಮತ್ತು ಇತರರು ಮಾತಾಡುವುದನ್ನು ಗುಟ್ಟಾಗಿ ಕೇಳುವುದು ಅಸಭ್ಯತನವಲ್ಲವೇ? ಎಂಬ ಪ್ರಶ್ನೆಗೆಅದು ನನಗೆ ತಿಳಿಯದು’ ಎಂದು ಉತ್ತರಿಸಿದರು.
ಆ ಬೆಂಕಿಯನ್ನು ತಾನು ಕಂಡುದು ಬಚ್ಚಲು ಕೊಟ್ಟಿಗೆಯ ಹೊರ ಬದಿಯಲ್ಲಿ ಎಂದೂ, ಮತ್ತೆ ಆ ಹೊತ್ತಿಸಿದ ಸ್ಥಳದಲ್ಲಿ ಬೂದಿಯು ತಾನು ನವಂಬರ ತಿಂಗಳಲ್ಲಿ ಕೆಲಸ ಬಿಡುವವರೆಗೆ ಹಾಗೆಯೇ ಇತ್ತೆಂದೂ ಸಾಕ್ಷಿ ಹೇಳಿದರು.
`ಈಶ್ವರ ಭಟ್ಟರಲ್ಲಿ ನೀನು ಕೆಲಸಕ್ಕೇ ಇರಲಿಲ್ಲ. ನೀನು ಈಗ ಹೇಳಿದುದೆಲ್ಲ ಸುಳ್ಳು’ ಎಂದು ಆರೋಪಿ ಪರ ವಕೀಲರು ಹೇಳಿದಾಗ ಸಾಕ್ಷಿ ಅದನ್ನು ನಿರಾಕರಿಸಿದರು.
ಈಗ ನಾಲ್ಕು ನಾಲ್ಕುವರೆ ತಿಂಗಳಿoದ ನೀನು ಸಿಓಡಿ ಪೊಲೀಸರ ಜತೆ ಬೆಂಗಳೂರಲ್ಲಿ ಇರುವುದೆಂಬುದು ನಿಜವೇ” ಎಂಬ ಪ್ರಶ್ನೆಯನ್ನು ಸಾಕ್ಷಿ ನಿರಾಕರಿಸಿ ತಾನು ಇಷ್ಟರವರೆಗೆ ಬೆಂಗಳೂರಿಗೆ ಹೋಗಿಯೇ ಇಲ್ಲವೆಂದು ಉತ್ತರ ನೀಡಿದರು.
ತಾನು ತನ್ನ ಅಣ್ಣನೊಡನೆ ವೈಮನಸ್ಸಿದ್ದುದರಿಂದ ತನ್ನ ಊರನ್ನು ಸಣ್ಣವನಿರುವಾಗಲೇ ಬಿಟ್ಟುದೆಂದೂ ಈಗ ಒಂದೂವರೆ ವರ್ಷದ ಹಿಂದೆ ತಾನು ತನ್ನ ಊರಿಗೆ ಹೋಗಿರುವುದಾಗಿಯೂ ತನ್ನ ಕೊನೆಯ ಮಗನಿಗೆ 10 ವರ್ಷ ಪ್ರಾಯವೆಂದೂ ಸಾಕ್ಷಿ ತಿಳಿಸಿದ್ದಾರೆ.
ಈ ಕೇಸಿನ 3ನೇ ಆರೋಪಿಯ ಮನೆಯು ಮೂಡು ಮುಖವಾಗಿದೆಯೆಂದೂ, ಬಚ್ಚಲು ಕೊಟ್ಟಿಗೆ ಮನೆಯ ಹಿಂಬದಿಯ ಒಂದು ಪಕ್ಕದಲ್ಲಿದ್ದು ಅದರಲ್ಲಿ ಒಂದು ಒಲೆಯಿದೆಯೆಂದೂ ಆ ಒಲೆಯ ಮೇಲೆ ನೀರು ಬಿಸಿ ಮಾಡಲು ಒಂದು ಗುಡಾಣ ಇದೆಯೆಂದೂ ಅದರ ಹತ್ತಿರವೇ ಒಂದು ದನದ ಕೊಟ್ಟಿಗೆಯಿದ್ದು ತಾನು ಹಾಲು ಕರೆವ ಕೆಲಸ ಮಾಡುವುದು ಅದೇ ಕೊಟ್ಟಿಗೆಯಲ್ಲಿಯೇ ಎಂದು ಸಾಕ್ಷಿ ಹೇಳಿದರು.
ಬೆಂಕಿ ಹೊತ್ತಿದುದು ದನದ ಕೊಟ್ಟಿಗೆಯಲ್ಲಿ ಅಲ್ಲವೆಂದು ಹೇಳಿದ ಅವರು, ತಾನು ಹಾಗೆ ಪೊಲೀಸರಲ್ಲಿ ಹೇಳಿಲ್ಲವೆಂದು ಉತ್ತರಿಸಿದರು.
ತಾನು ಹೊತ್ತಿದ ವಾಸನೆ ತಿಳಿದು ಅಲ್ಲಿಗೆ ಹೋದಾಗ ಬೆಂಕಿ ಮಾತ್ರ ನೋಡಿದ್ದಲ್ಲದೆ ಯಾವ ವಸ್ತುವಿಗೆ ಬೆಂಕಿ ಹಿಡಿದಿದೆ ಎಂಬುದನ್ನು ಕಂಡಿರುವುದಿಲ್ಲವೆoದೂ, ಮೇಲೆ ಹೇಳಿದ ಜನರ ವಿಳಾಸ ಹಾಗೂ ತಂದೆಯ ಹೆಸರುಗಳನ್ನು ಹೇಳಲು ಸಾಧ್ಯವಿಲ್ಲವೆಂದೂ ಹೇಳಿದ ಅವರು, ಆದರೆ 2-3- ಜನರ ವಿಳಾಸಗಳನ್ನು ಕೊಡಬಲ್ಲೆ ಎಂದರು.
ಮುಂದುವರಿಯುವುದು….






































