ಈಶ್ವರ್ ಕ್ರಿಕೆಟರ್ಸ್ ತಂಡದ ಬಗಲಿಗೆ ಪ್ರಶಸ್ತಿ
ಕಾರ್ಕಳ : ಗಾಂಧಿಮೈದಾನದಲ್ಲಿ ನಡೆದ,”ಕಾಬೆಟ್ಟು ಬ್ರದರ್ಸ್ ಟ್ರೋಫಿ ಕಾರ್ಕಳ ” ಇವರ ವತಿಯಿಂದ ನಡೆದ ಕ್ರಿಕೆಟ್ ಟೂರ್ನಮೆಂಟಲ್ಲಿ, ಪ್ರಥಮ ಪ್ರಶಸ್ಥಿಯನ್ನು “ಈಶ್ವರ್ ಕ್ರಿಕೆಟರ್ಸ್ ಪೆರ್ವಾಜೆ ಕಾರ್ಕಳ”, ಹಾಗೂ ದ್ವಿತೀಯ ರನ್ನರ್ಸ್ ಅಪ್ “ಅಂಭಾಭವಾನಿ ಕಾರ್ಕಳ”, ತಂಡವು ಮುಡಿಗೇರಿಸಿರುತ್ತಾರೆ .
ಫೈನಲ್ ಪಂದ್ಯದ ಮ್ಯಾನ್ ಆಫ್ ಧಿ ಮ್ಯಾಚ್ ಸಚಿನ್ ಈಶ್ವರ್ ಕ್ರಿಕೆಟರ್ಸ್, ಮ್ಯಾನ್ ಆಫ್ ದ ಸೀರಿಸ್ ಈಶ್ವರ್ ಕ್ರಿಕೆಟರ್ಸ ತಂಡದ ಯೋಗೀoದ್ರ, ಬೆಸ್ಟ್ ಬ್ಯಾಟ್ಸಮನ್ ಪ್ರಸಾದ್ ಅಂಚನ್ ಅಂಬಾಭವಾನಿ, ಬೆಸ್ಟ್ ಬೌಲರ್ ನಿಖಿಲ್ ಅಂಬಾಭವಾನಿ,ಹಾಗೂ ಬೆಸ್ಟ್ ಕೀಪರ್ ಪ್ರಶಸ್ತಿಯನ್ನು ಪ್ರಶಾಂತ್ ಈಶ್ವರ್ ಕ್ರಿಕೆಟರ್ಸ್ ಇವರುಗಳು ಪಡೆದು ಕೊಂಡಿರುತ್ತಾರೆ.
ಈ ಒಂದು ಪ್ರಶಸ್ತಿ ವಿತರಣವು ಕಾರ್ಕಳ ಕ್ರಿಕೆಟ್ ಅಸೋಸಿಯೇಷನ್ ಇದರ ಅಧ್ಯಕ್ಷರು ಹಾಗೂ ಕಾರ್ಕಳ ಟೌನ್ ಪೊಲೀಸ್ ಇಲಾಖಾ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಯಿತು.





















