ಈದು ಬೊಳ್ಳೊಟ್ಟು ಶ್ರೀ ಬ್ರಹ್ಮ ಮುಜಿಲ್ನಾಯ ಸ್ಥಾನದ ಶಿಲಾನ್ಯಾಸ






ಕಾರ್ಕಳ : ಈದು ಬೊಳ್ಳೊಟ್ಟು ಶ್ರೀ ಬ್ರಹ್ಮ ಮುಜಿಲ್ನಾಯ ಸ್ಥಾನದ ಶಿಲಾನ್ಯಾಸವು ಧಾರ್ಮಿಕ ವಿಧಿ ವಿಧಾನದಲ್ಲಿ ನೆರವೇರಿತು.
ಸಾಮಾರಂಭದ ಅಧ್ಯಕ್ಷತೆಯನ್ಬು ಶಾಸಕ ವಿ.ಸುನೀಲ್ ಕುಮಾರ್ ವಹಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇದರ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಅವರು ಕಾರ್ಯಕ್ರಮಕ್ಕೆ ಅಮಿಸಲು ಅಸಾಧ್ಯವಾಗಿದ್ದು, ಅವರು ಕಳುಹಿಸಿಕೊಟ್ಟ ಶುಭ ಸಂದೇಶವನ್ನು ಸಭೆಯಲ್ಲಿ ತಿಳಿಸಲಾಯಿತು.
ಗೌರವಾಧ್ಯಕ್ಷ ಭಾಸ್ಕರ್ ಕೊಟ್ಯಾನ್ ಇರ್ವತ್ತೂರು, ಮಾಜಿ ಸಚಿವ ಅಭಯ ಚಂದ್ರ ಜೈನ್, ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಮುನಿಯಾಲು,ಉದ್ಯಮಿಗಳಾದ ಶ್ರೀಕಾಂತ್ ಭಟ್ ನಂದಳಿಕೆ, ವಸಂತ್ ಭಟ್, ಗ್ರಾಮ ಪಂಚಾಯತ್ ಅಧ್ಯಕ್ಷ ಸದಾನಂದ ಪೂಜಾರಿ, ದೇವೇಂದ್ರ ಹೆಗ್ಡೆ, ಪ್ರಕಾಶ್ ಶೆಟ್ಟಿ ಪೂನಾ, ಎಪಿಎಂಸಿ ಮಾಜಿ ಅಧ್ಯಕ್ಷ, ನೆಲ್ಲಿಕಾರು ಸಹಕಾರಿ ಸಂಘದ ಅಧ್ಯಕ್ಷ ಜಯವರ್ಮ ಜೈನ್ ಮಾಪಲು, ಉದಯ ಶೆಟ್ಟಿ ಪೊಲ್ಲೊಡಿಬೀಡು,ಗಣೇಶ್ ನಾರಾಯಣ ಪಂಡಿತ್ ಮೂಡುಕೋಡಿ, ರತೀಶ್ ಹೊಸ್ಮಾರ್,ಸುರೇಶ್ ಶೆಟ್ಟಿ ಈದು,ಪದ್ಮರಾಜ್ ಜೈನ್, ಎಂ ವಿಜಯ್ ಕುಮಾರ್ ಜೈನ್ ಈದು ಉಪಸ್ಥಿತರಿದ್ದರು.
ಈದು ಮುಜ್ನಿಲಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಈದು ಅಶೋಕ್ ಕುಮಾರ್ ಸ್ವಾಗತಿಸಿದರು. ಸತೀಶ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು,
ಪುರುಷೋತ್ತಮ ಅವರು ಧನ್ಯವಾದ ಸಲ್ಲಿಸಿದರು. ಪ್ರಶಾಂತ್ ಚಿತ್ತಾರ ಕ್ಷೇತ್ರದ ಮಹಿಮೆಯನ್ನು ಸಂಕ್ಷಿಪ್ತವಾಗಿ ವಿವರಿಸಿದರು.
ಅಭಿವೃದ್ದಿ ಪಥದತ್ತ ಈದು ಗ್ರಾಮ
ಇಲ್ಲಿನ ಸೇತುವೆಗೆ ರಾಜ್ಯ ಸರಕಾರದಿಂದ ರೂ. 4 ಕೋಟಿ ಅನುದಾನ ಮಂಜೂರು ಆಗಿದೆ. ಇಲ್ಲಿನ ಸಂಪರ್ಕ ರಸ್ತೆಗೆ ಕಾಂಕ್ರೀಟ್ ಹಾಕುವ ವ್ಯವಸ್ಥೆ ಮಾಡಲಾಗುತ್ತದೆ. ಅದಕ್ಕೆ ಬೇಕಾದ ಜಾಗವನ್ನು ವಸಂತ್ ಭಟ್ ರವರು ನೀಡಿ ಸಹಕರಿಸುವಂತೆ ಶಾಸಕ ಸುನೀಲ್ ಕುಮಾರ್ ವಿನಂತಿಸಿದರು.





































