ಈಜು ಮನುಷ್ಯನ ಏಕಾಗ್ರತೆ ಮತ್ತು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ : ಶಾಸಕರು ಸುನಿಲ್ ಕುಮಾರ್

Picture of RB NEWS

RB NEWS

Bureau Report

ಕಾರ್ಕಳ : ಈಜು ಮನುಷ್ಯನ ಏಕಾಗ್ರತೆ ಮತ್ತು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಪ್ರಾಕೃತಿಕ ವಿಕೋಪ ಸೇರಿದಂತೆ ತುರ್ತು ಸಂದರ್ಭದಲ್ಲಿ ಮತ್ತೊಬ್ಬ ಜೀವ ರಕ್ಷಣೆಯಲ್ಲಿ ಈಜು ಮಹತ್ವ ಪಾತ್ರವಹಿಸುತ್ತದೆ. ಪ್ರತಿಯೊಬ್ಬ ಈಜು ಕಲಿಯುವುದು ಅವಶ್ಯಕವಾಗಿದೆ ಎಂದು ಶಾಸಕ ವಿ.ಸುನೀಲ್ ಕುಮಾರ್ ಅಭಿಮತ ವ್ಯಕ್ತಪಡಿಸಿದರು.

ಕಾರ್ಕಳದ ತಾಲೂಕು ಕ್ರೀಡಾಂಗಣದ ಬಳಿ ಇರುವ ಈಜುಕೊಳದಲ್ಲಿ ಅಕ್ವಾ ಸೆಂಟರ್ ಕಾರ್ಕಳ ಇವರ ವತಿಯಿಂದ ನಡೆದ ಅಕ್ವಾ ಅಮಿಗೋಸ್ ಸ್ವಿಮ್ಮಿಂಗ್ ಫೆಸ್ಟ್ -2025 ಕಾರ್ಯಕ್ರಮದ ಉದ್ಘಾಟನೆಯನ್ನು ಕಾರ್ಕಳದ ಶಾಸಕರಾಗಿರುವ ವಿ. ಸುನಿಲ್ ಕುಮಾರ್ ಅವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ಕಾರ್ಕಳದ ಮಣ್ಣಿಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಬೇರೆ ಬೇರೆ ತಾಲೂಕಿನ ಮಕ್ಕಳನ್ನು ಕರೆಸಿಕೊಂಡ ಸಂಸ್ಥೆಯ ಕಾರ್ಯವನ್ನು ಶ್ಲಾಘನಯಿಸಿದರು.

ವೇದಿಕೆಯಲ್ಲಿ ಅಕ್ವಾ ಸೆಂಟರ್ ಕಾರ್ಕಳ ದಿಂದ ತರಬೇತು ಪಡೆದು ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅಂತರಾಷ್ಟ್ರೀಯ ಈಜು ಕ್ರೀಡಾಪಟು ಶ್ರೀಮತಿ ವಿದ್ಯಾ ಪೈಯವರು ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆಗೆ ಪೋಷಕರ ಸಹಕಾರ ಇದ್ದಲ್ಲಿ ಉನ್ನತ ಮಟ್ಟ ಏರಲು ಸಾಧ್ಯವೆಂದು ಶುಭನುಡಿದರು.

ವೀ ಒನ್ ಅಕ್ವಾ ಸೆಂಟರ್ ಡೈರೆಕ್ಟರ್ ರೂಪ ಮತ್ತು ನವೀನ್ ಹಾಗೂ ಪುರಸಭಾ ಅಧ್ಯಕ್ಷ ಯೋಗೀಶ್ ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ 250ಕ್ಕೂ ಹೆಚ್ಚು ವಿದ್ಯಾರ್ಥಿ, ಮತ್ತು ಪುರುಷರು, ಮಹಿಳೆಯರು ವಿವಿಧ ವಿನ್ಯಾಸ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು ಪ್ರಮಾಣ ಪತ್ರ ಮತ್ತು ಪದಕಗಳನ್ನು ಪಡೆದರು.
ಶಾರ್ವರಿ ಪ್ರಾರ್ಥನೆಗೈದರು. ರಮಿತಾ ಶೈಲೇಂದ್ರ ನಿರೂಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top