ಇಸ್ಮಾಯಿಲ್ ಮೃತದೇಹದ ಗುರುತು ಪತ್ತೆ ಹಚ್ಚಿದ ಸಾಕ್ಷಿದಾರರು
ಭಾಗ-10
ಕಲ್ಲಡ್ಕ ಇಸ್ಮಾಯಿಲ್ ಹತ್ಯಾ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ಸಿಓಡಿ ಡಿಎಸ್ಪಿ ಭಾಸ್ಕರ ರಾವ್ ನ್ಯಾಯಾಲಯದಲ್ಲಿ ಸಾಕ್ಷö್ಯ ನುಡಿಯುತ್ತಾ ಈ ರೀತಿ ಹೇಳಿದರು.
ನಾನು 5-9-76ರಂದು ಉಪ್ಪಿನಂಗಡಿ ಬಂಗ್ಲೆಯಲ್ಲಿರುವ ಸಮಯ ಮಧ್ಯಾಹ್ನದ ನಂತರ ಬಂಟ್ವಾಳ ಸಬ್ಇನ್ಸ್ಪೆಕ್ಟರ್ ಅಲ್ಲಿಗೆ ಬಂದು, ಮೊದಲಿನ ದಿನ ರಾತ್ರಿ ಪೊಲೀಸ್ ಜೀಪಿನಲ್ಲಿ ಹೋದ ಇಸ್ಮಾಯಿಲ್ ಮರಳಿ ಬಾರದ ವಿಷಯವನ್ನು ತಿಳಿಸಿದರು. ಅನಂತರ ನಾನು ಪುತ್ತೂರಿಗೆ ಹೋಗಿ ಅಲ್ಲಿಂದ ಕಲ್ಲಡ್ಕಕ್ಕೆ ಬಂದು ಇಸ್ಮಾಯಿಲ್ ಅವರನ್ನು ಮತ್ತು ಅವರನ್ನು ಕರೆದೊಯ್ದ ಜೀಪನ್ನು ಹುಡುಕಲು 5 ಮತ್ತು 6ನೇ ತಾರೀಕುಗಳಂದು ಅಧಿಕಾರಿಗಳನ್ನು ಕಳುಹಿಸಿದೆ. ತಾ. 7- 9-76ರಂದು ನಾನೇ ಸ್ವತ: ತನಿಖೆ ಆರಂಭಿಸಿದೆ’ ಎಂದು ಹೇಳಿದರು. ಹೆಣವನ್ನು ಗುರುತಿಸಿದರು ತಾ. 8- 9-76ರಂದು ಬಂಟ್ವಾಳ ಪೊಲೀಸ್ ಸ್ಟೇಶನ್ನಲ್ಲಿ ಪೊಲೀಸ್ ಜೀಪುಗಳನ್ನು ಒಂದನೇ ಸಾಕ್ಷಿ ನರಸಿಂಹ ಮಡಿವಾಳರಿಗೆ ತೋರಿಸಲಾಯಿತು ಎಂದು ಹೇಳಿದ ಅವರು, ಆ ದಿನವೂ ಸಂಜೆ ಹಲವು ಗ್ರಾಮಗಳಲ್ಲಿ ಇಸ್ಮಾಯಿಲ್ ಮತ್ತವರು ಹೋದ ಜೀಪಿನ ಶೋಧನೆ ಮುಂದುವರಿಯಿತು. ಆ ದಿನ ರಾತ್ರಿ ಸುಮಾರು 9.30ಕ್ಕೆ ನಾನು ಕಲ್ಲಡ್ಕ ಜಂಕ್ಷನ್ಗೆ ಬಂದಾಗ ಸರಪಾಡಿಯ ಬಳಿ ನೇತ್ರಾವತಿ ನದಿಯಲ್ಲಿ ಕಲ್ಲಿಗೆ ಸಿಲುಕಿ ಒಂದು ಹೆಣವಿದೆ ಎಂದು ತಿಳಿಯಿತು. ಕೂಡಲೇ ನಾನು ಇಸ್ಮಾಯಿಲ್ ಅವರ ಪರಿಚಯದವರನ್ನು ಕೂಡಿಕೊಂಡು ಹೊಳೆಯ ಬದಿಗೆ ಹೋದೆ. ಆಮೇಲೆ ದೋಣಿಯ ಮೂಲಕ ಹೆಣವಿದ್ದ ಸ್ಥಳಕ್ಕೆ ಹೋದಾಗ ಅಲ್ಲಿ ಇಸ್ಮಾಯಿಲ್ ಅವರ ಸ್ನೇಹಿತ ಇಬ್ರಾಹಿಂ ಹಾಗೂ ಇತರರು ಅದನ್ನು ಇಸ್ಮಾಯಿಲ್ ಅವರ ಹೆಣವೆಂದು ಗುರುತಿಸಿದರು’ ಎಂದು ಹೇಳಿದರು. ಕೂಡಲೇ ತನ್ನ ರಿಪೋರ್ಟನ್ನು ಸಬ್ಇನ್ಸ್ಪೆಕ್ಟರ್ ಕೋಲ್ಕರ್ ಅವರ ಮೂಲಕ ಬಂಟ್ವಾಳ ಪೊಲೀಸ್ ಸ್ಟೇಶನ್ಗೆ ಕಳುಹಿಸಿರುವುದಾಗಿ ಹೇಳಿದ ಭಾಸ್ಕರ ರಾವ್ ಅವರು ಅವರ ಹತ್ತಿರವೇ ಸ್ಥಳದಲ್ಲಿಯೇ ಶವದ ಮರಣೋತ್ತರ ಶಸ್ತç ಪರೀಕ್ಷೆ ನಡೆಸಲು ಬಂಟ್ವಾಳ ವೈದ್ಯರು ಬರುವಂತೆ ಇಂಟಿಮೇಶನ್ ಕೂಡಾ ಕಳುಹಿಸಿದೆ’ ಎಂದರು.
ಅನತರ ದಡಕ್ಕೆ ಬಂದ ತಾವು ಮರುದಿನ ಬೆಳಿಗ್ಗೆ 6 ಗಂಟೆಯ ಸಮಯ ಪುನ: ಹೆಣವಿದ್ದ ಸ್ಥಳಕ್ಕೆ ಹೋದುದಾಗಿ ತಿಳಿಸಿದ ಅವರು ಬಂಟ್ವಾಳ ಸರಕಾರಿ ಆಸ್ಪತ್ರೆಯ ಡಾಕ್ಟರರು ಮತ್ತು ಫೊಟೋಗ್ರಾಫರರು ಸ್ಥಳಕ್ಕೆ ಬಂದರು. ನಾನು ಹೆಣದ ಕುರಿತುಇನ್ಕ್ವೆಸ್ಟ್ ಪ್ರೊಸೀಡಿಂಗ್’ ಮಾಡಿದೆ. ಈ ಸಂದರ್ಭದಲ್ಲಿ ಫೊಟೋಗ್ರಾಫರರು ಹೆಣದ ಫೊಟೊಗಳನ್ನು ತೆಗೆದರು. ಶವ ಪರೀಕ್ಷೆಯ ಸಮಯದಲ್ಲಿ ಶವದ ಮೇಲೆ ಕಂಡು ಬಂದ ನೈಲಾನ್ ಹಗ್ಗ ಮತ್ತು ಹುರಿ ಹಗ್ಗದ ವಿಷಯವನ್ನು ಇನ್ಕ್ವೆಸ್ಟ್ ರಿಪೋರ್ಟ್’ನಲ್ಲಿ ಬರೆದಿದ್ದೇನೆ. ಇನ್ಕ್ವೆಸ್ಟ್ನ ಸಮಯದಲ್ಲಿ ಮೃತ ಇಸ್ಮಾಯಿಲ್ ಅವರ ಸಂಬAಧಿಕ ಕೆ.ಎಚ್. ಅಬ್ದುಲ್ ಹಮೀದ್ ಮತ್ತು ಇಬ್ರಾಹಿಂ ಅವರ ಹೇಳಿಕೆಗಳನ್ನು ಪಡೆದುಕೊಂಡೆ. ಅನಂತರ ಡಾಕ್ಟರರು ಇಸ್ಮಾಯಿಲ್ ಅವರ ಶವದ ಮರಣೋತ್ತರ ಶಸ್ತç ಪರೀಕ್ಷೆ ನಡೆಸಿದ ಬಳಿಕ ಸುಮಾರು ಪೂರ್ವಾಹ್ನ 11 ಗಂಟೆಯ ಸಮಯ ಮೃತ ದೇಹವನ್ನು ಸಂಬA ಧಿಕರಿಗೆ ಬಿಟ್ಟುಕೊಡಲಾಯಿತು’ ಎಂದು ವಿವರಿಸಿದರು. ನಾನು ಕೂಡಲೆ ಬಂಟ್ವಾಳ ಮತ್ತು ಕಲ್ಲಡ್ಕಕ್ಕೆ ಹೋದೆ. ಆಗ ಕಲ್ಲಡ್ಕದಲ್ಲಿ ಸುಮಾರು 5 ಸಾವಿರಕ್ಕೂ ಮಿಕ್ಕಿ ಜನರು ಸೇರಿದ್ದುದರ ಕಾರಣದಿಂದ ಬಂದೋಬಸ್ತ್ ಕಾರ್ಯದಲ್ಲಿ ನಿರತನಾಗಬೇಕಾಯಿತು. ಅನಂತರ ಸಂಜೆ ಕಲ್ಲಡ್ಕದ ಹಲವು ಸಾಕ್ಷಿದಾರರನ್ನು ವಿಚಾರಣೆ ಮಾಡಿದೆ’ ಎಂದು ವಿವರಿಸಿದ ಭಾಸ್ಕರ ರಾವ್ ಅವರು ತಾ. 10-9-76ರಂದು ಮೇಲಧಿಕಾರಿಗಳ ಅದೇಶದ ಮೇರೆಗೆ ತನಿಖೆಯ ಜವಾಬ್ದಾರಿಯನ್ನು ಸಿಓಡಿ ಡಿಎಸ್ಪಿ ಸಿದ್ದಲಿಂಗಪ್ಪ ಅವರು ತೆಗೆದುಕೊಂಡರು ಎಂದು ಹೇಳಿದರು.
ಕೆ. ಸಂಜೀವ ರಾವ್ ಸಾಕ್ಷಿ
ಅನಂತರ ಪ್ರಕರಣದ 22ನೇ ಸಾಕ್ಷಿ ಕೆ. ಸಂಜೀವ ರಾವ್ ಅವರು ಹೇಳಿಕೆ ನೀಡುತ್ತಾ ನಾನು ಸುಳ್ಯ ಪೋಸ್ಟ್ ಆಫೀಸಿನಲ್ಲಿ ಪೋಸ್ಟ್ ಮಾಸ್ಟರ್ ಕೆಲಸ ಮಾಡುತ್ತಿದ್ದೇನೆ. ತಾ. 7-2-77ರಲ್ಲಿ ಕೆ.ಎಸ್. ನಾರಾಯಣ ಭಟ್ ತೋಡಿಕಾನ ಅವರ ವಿಳಾಸಕ್ಕೆ ಒಂದು ಇನ್ಲ್ಯಾಂಡ್ ಕವರ್ ಬಂತು. ಆ ಕವರಿನ ಮೇಲೆ ನಮ್ಮ ಪೋಸ್ಟ್ ಆಫೀಸಿನಲ್ಲಿ 7-2-77ರ ಸೀಲನ್ನು ಹಾಕಿದೆ. ಅದನ್ನು ಅರಂತೋಡು ಪೋಸ್ಟ್ ಆಫೀಸಿಗೆ ಕಳುಹಿಸಿದೆ. ಅದು ಪುನ: 8-2-77ರಂದು ಸುಳ್ಯ ಪೋಸ್ಟ್ ಆಫೀಸಿಗೆ ಮರಳಿ ಬಂತು. ಅದನ್ನು ವಾಪಸ್ 9-2-77ರಂದು ತೋಡಿಕಾನ ಪೋಸ್ಟ್ ಆಫೀಸಿಗೆ ಕಳುಹಿಸಿದೆ. ಅದರ ಮೇಲೆ 9-2-77ರ ತೋಡಿಕಾನ ಪೋಸ್ಟ್ ಆಫೀಸಿನ ಸೀಲು ಕಾಣುತ್ತದೆ’ ಎಂದರು. ಆಗ ಆರೋಪಿ ಪರ ವಕೀಲರು ಸಿಓಡಿಯವರು ಹೇಳಿ ಮತ್ತೆ ಸೀಲು ಹಾಕಿದುದು ಎಂಬ ವಿಚಾರ ನಿಜವೇ? ಎಂದು ಪ್ರಶ್ನಿಸಿದಾಗ ಅದು ಸರಿಯಲ್ಲವೆಂದು ಸಂಜೀವ ರಾವ್ ಉತ್ತರ ನೀಡಿದರು.
ಮೋಟಾರು ಸೈಕಲ್ ರಿಪೇರಿ
ಅನಂತರ 23ನೇ ಸಾಕ್ಷಿ ಬಿ. ಮೋಹನ್ ಅವರು ಕೋರ್ಟಿನಲ್ಲಿ ಹೇಳಿಕೆ ನೀಡುತ್ತಾ ನಾನು ಬಳ್ಳಾರಿ ಜಿಲ್ಲೆಯ ಹೊಸಪೇಟೆ ಎಂಬಲ್ಲಿ ಒಂದು ಗ್ಯಾರೇಜ್ ನಡೆಸಿಕೊಂಡು ಬರುತ್ತಿದ್ದೇನೆ. 8 ಅಥವೇ 9 ತಿಂಗಳ ಹಿಂದೆ ಒಬ್ಬ ಡ್ರೆöÊವರನು ಕಾರಿನಲ್ಲಿ ಎರಡು ಜನರನ್ನು ಕರೆದುಕೊಂಡು ರಾತ್ರಿ 10 ಅಥವಾ 11 ಗಂಟೆಗೆ ಬಂದರು. ಅವರಲ್ಲಿ ಓರ್ವರು ಮೋಟಾರು ಸೈಕಲ್ ಹಾಳಾಗಿದೆ ಎಂದು ತಿಳಿಸಿದರು. ಆ ಪ್ರಕಾರ ನಾನು ಮೋಟಾರು ಸೈಕಲನ್ನು ರಿಪೇರಿ ಮಾಡಿದೆ. ಹಾಗೆ ಬಂದವರಲ್ಲಿ ಒಂದನೇ ಆರೋಪಿ ಶ್ರೀಧರ ಭಟ್ಟರೂ ಇದ್ದರು ಎಂದು ಹೇಳಿದರು. ಆರೋಪಿ ಪರ ವಕೀಲರು ಶ್ರೀಧರ ಭಟ್ಟರು ಬಂದಿದ್ದರು ಎಂದು ನೀವು ಹೇಳುವುದು ಸುಳ್ಳು’ ಎಂದಾಗ ಸಾಕ್ಷಿದಾರರು ಅದನ್ನು ನಿರಾಕರಿಸಿದರು.
24ನೇ ಸಾಕ್ಷಿ ಕರುಣಾಕರನ್ ಅವರು ತಮ್ಮ ಹೇಳಿಕೆ ನೀಡುತ್ತಾ ನಾನು ಒಬ್ಬ ಆಯುರ್ವೇದ ವೈದ್ಯ. ನನ್ನ ಮಗನಾದ ಜನಾರ್ದನನಿಗೆ ಬೆಳ್ತಂಗಡಿಯಲ್ಲಿ ಒಂದು ಸ್ಪೇರ್ಪಾರ್ಟ್ಸ್ ಅಂಗಡಿ ಇತ್ತು. ಅದು ಈಗ ಸುಮಾರು ಒಂದು ವರ್ಷದ ಹಿಂದೆ ಮುಚ್ಚಲ್ಪಟ್ಟಿದೆ. ಕಳೆದ ಒಂದು ವರ್ಷದಲ್ಲಿ ಯಾರಿಗೂ ಮೋಟಾರು ಸೈಕಲ್ ಬಲ್ಬ್ ಮಾರಿದ್ದಿಲ್ಲ’ ಎಂದು ತಿಳಿಸಿದರು. ಅಷ್ಟು ಮಾತ್ರವಲ್ಲದೆ ಬೆಳ್ತಂಗಡಿಯಲ್ಲಿ ತನ್ನ ಮಗ 15ನೇ ಸಾಕ್ಷಿ ಎಸ್. ಎಸ್. ಕೊರ್ನಾಯ ಮತ್ತು 19ನೇ ಸಾಕ್ಷಿ ನಿರಂಜನ ನಾರಾಯಣ ಕಾಮತ್ ಎಂಬವರಿಗೆ ಮಾತ್ರ ಸ್ಪೇರ್ಪಾರ್ಟ್ಸ್ ಅಂಗಡಿ ಇರುವುದೆಂದೂ ಅವರು ಹೇಳಿದರು. ಅಡ್ಡ ವಿಚಾÀರಣೆಯ ವೇಳೆ ಬೆಳ್ತಂಗಡಿಯಲ್ಲಿ ಇತರ ಅಂಗಡಿಗಳಲ್ಲಿ ಸ್ಪೇರ್ಪಾರ್ಟ್ಸ್ ಮಾರುತ್ತಾರೋ ಇಲ್ಲವೋ ಎಂದು ತನಗೆ ಹೇಳಲು ಸಾಧ್ಯವಿಲ್ಲವೆಂದೂ ಅವರು ತಿಳಿಸಿದರು. ಮೋಟಾರು ಸೈಕಲ್ ಸ್ವಾಧೀನ ಆನಂತರ ಪ್ರಕರಣದ 25ನೇ ಸಾಕ್ಷಿ ಕೆ.ಯು. ಭಂಡಾರಿ ಅವರು ಹೇಳಿಕೆ ನೀಡುತ್ತಾ ನನಗೆ ಸುಳ್ಯದಲ್ಲಿ ಒಂದು ಕ್ಷೌರದ ಅಂಗಡಿಯಿದೆ. ತಾ 24-2-77ರಂದು ಸಿಓಡಿ ಪೊಲೀಸರು ನನ್ನನ್ನು ಕರೆದರು. ಆಗ ಅವರ ಜತೆಯಲ್ಲಿ 2ನೇ ಆರೋಪಿ ಪುರಂದರ ಭಟ್ಟರೂ ಇದ್ದರು. ಪುರಂದರ ಭಟ್ಟರು ಅವರನ್ನೆಲ್ಲಾ ತೊಡಿಕಾನದಲ್ಲಿರುವ ಕೆ.ಎಸ್. ನಾರಾಯಣ ಭಟ್ಟರ ಮನೆಗೆ ಕರೆದುಕೊಂಡು ಹೋದರು. ಅಲ್ಲಿದ್ದ ಜಾವಾ ಮೋಟಾರು ಸೈಕಲ್ ಎಂವೈಜಿ 3976ನ್ನು ಪೊಲೀಸರು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡರು’ ಎಂದು ವಿವರಿಸಿದರು.
ಅಡ್ಡ ವಿಚಾರಣೆಯ ವೇಳೆ ಕೆ.ಎಸ್.ಎನ್ ಭಟ್ ಅವರು ಪುರಂದರ ಭಟ್ ಅವರ ಸಹೋದರ ಎಂಬುದನ್ನು ಸಾಕ್ಷಿ ಒಪ್ಪಿಕೊಂಡರು.
26ನೇ ಸಾಕ್ಷಿ ಭಾಸ್ಕರ್ ಅವರು ನ್ಯಾಯಾಲಯದ ಮುಂದೆ ತಮ್ಮ ಹೇಳಿಕೆ ನೀಡುತ್ತಾ ತನಗೆ ಸುಳ್ಯದಲ್ಲಿಐಡಿಯಲ್ ಆಟೋವರ್ಕ್ಸ್’ ಎಂಬ ಒಂದು ಸಣ್ಣ ಅಂಗಡಿಯಿದೆ. ನನ್ನ ಅಂಗಡಿಗೆ ಕೆಲವು ಬಾರಿ ಒಂದನೇ ಆರೋಪಿ ಶ್ರೀಧರ ಭಟ್ಟರು ಮೋಟಾರು ಸೈಕಲ್ ರಿಪೇರಿ ಮಾಡಿಸಲು ಬರುತ್ತಿದ್ದರು. ಸುಮಾರು 10 ಅಥವಾ 11 ತಿಂಗಳ ಹಿಂದೆ ಶ್ರೀಧರ ಭಟ್ಟರು ಮಧ್ಯಾಹ್ನದ ವೇಳೆ ಮೋಟಾರು ಸೈಕಲ್ನ ಟಯರನ್ನು ರಿಪೇರಿಗಾಗಿ ತಂದಿದ್ದರು. ಆಗ ನನ್ನ ಕೆಲಸದವರಾದ ವೀರಪ್ಪ ಅಂಗಡಿಯಲ್ಲಿರಲಿಲ್ಲ. ಮರು ದಿನ ಆದಿತ್ಯವಾರವಾಗಿದ್ದು ಸಾಧಾರಣ ಮಧ್ಯಾಹ್ನದ ಹೊತ್ತಿಗೆ ಒಂದನೇ ಆರೋಪಿ ಶ್ರೀಧರ ಭಟ್ಟರು ನನ್ನ ಮನೆಗೆ ಬಂದರು. ಅವರೊಡನೆ ನಾನು ಅಂಗಡಿಗೆ ಹೋಗಿ ಅಲ್ಲಿಂದ ರಿಪೇರಿ ಮಾಡಿದ ಮೋಟಾರ್ ಸೈಕಲ್ ಟಯರನ್ನು ಅವರಿಗೆ ಕೊಟ್ಟೆ. ಅದರ ಬಗ್ಗೆ ಅವರು ರೂ. 5 ಕೊಟ್ಟರು ಎಂದು ಹೇಳಿದರು.
ಮೊಹಮ್ಮದ್ ಸಾಕ್ಷಿ
ಆಮೇಲೆ 27ನೇ ಸಾಕ್ಷಿ ವೈ. ಮೊಹಮ್ಮದ್ ಅವರು ತಮ್ಮ ಹೇಳಿಕೆಯಲ್ಲಿ ನನಗೆ ನಾಲ್ಕನೇ ಆರೋಪಿ ಮಹಾಬಲ ದೇವಾಡಿಗರ ಪರಿಚಯ ಸಣ್ಣಂದಿನಿAದಲೇ ಉಂಟು. ಅವರು ನನ್ನ ಮನೆಯ ಹತ್ತಿರವೇ ವಾಸಿಸುವುದು. ನಾನು ಯಾವಾಗಲೂ ಬಂಟ್ವಾಳದ ಹೊಸ ಪೇಟೆಯಲ್ಲಿ ಕಾರು ತೊಳೆಯುವ ಕೆಲಸ ಮಾಡುತ್ತೇನೆ. ನಾನು ಹೆಚ್ಚಾಗಿ ರಾತ್ರಿ 7 ಗಂಟೆಯಿAದ 11 ಗಂಟೆಯವರೆಗೆ ಕಾರು ತೊಳೆಯುವ ಕೆಲಸ ಮಾಡುತ್ತೇನೆ’ ಎಂದು ಹೇಳಿದರು. ತಾನು ಕಾರು ತೊಳೆಯುವ ಸ್ಥಳದ ಸಮೀಪ ಸುಮತಿ ಬಾಯಿ, ದೇವರಾಯ ಮತ್ತಿತರರ ಮನೆಗಳಿವೆ ಎಂದು ಹೇಳಿದ ಮೊಹಮ್ಮದ್ ಅವರುಸುಮಾರು ಹತ್ತೂವರೆ ತಿಂಗಳ ಹಿಂದೆ ರಾತ್ರಿ 8.30ರ ವೇಳೆಗೆ ನಾನು ಕಾರು ತೊಳೆಯುತ್ತಿದ್ದಾಗ ಒಂದು ಮೋಟಾರು ಸೈಕಲ್ ಬಂದು ಸುಮತಿ ಬಾಯಿಯವರ ಮನೆಯ ಎದುರಿನಲ್ಲಿ ನಿಂತಿತು. ಆಗ ಮಹಾಬಲ ದೇವಾಡಿಗರು ಸುಮತಿ ಬಾಯಿಯ ಮನೆಯ ಒಳಗಿನಿಂದ ಹೊರಗೆ ಬಂದರು. ಮೋಟಾರು ಸೈಕಲ್ನಲ್ಲಿ ಬಂದವರು ಎಡದ ಕೈಯ ಹೆಬ್ಬೆರಳು ತೋರಿಸಿ ಸನ್ನೆ ಮಾಡಿದರು. ಕೂಡಲೇ ಮಹಾಬಲ ದೇವಾಡಿಗರು ಮೋಟಾರು ಸೈಕಲ್ನ ಹಿಂದೆ ಕುಳಿತುಕೊಂಡು ಅವರಿಬ್ಬರೂ ಬಡ್ಡಕಟ್ಟೆಯ ಕಡೆಗೆ ಹೋದರು. ಅಂದಿನವರೆಗೆ ಪ್ರತಿದಿನವೂ ಮಹಾಬಲ ದೇವಾಡಿಗರು ಸುಮತಿ ಬಾಯಿಯ ಮನೆಗೆ ಬರುತ್ತಿದ್ದುದನ್ನು ನೋಡುತ್ತಿದ್ದ ನಾನು ಆಮೇಲೆ ಮಹಾಬಲ ದೇವಾಡಿಗರನ್ನು ನೋಡಲಿಲ್ಲ’ ಎಂದು ವಿವರಿಸಿದರು.
ಅಡ್ಡ ಸವಾಲಿಗೆ ಉತ್ತರಿಸುತ್ತಾ ಮೊಹಮ್ಮದ್ ಯರ್ಯಾರು ಯರ್ಯಾರ ಮನೆಗೆ ಹೋಗುತ್ತಾರೆಂಬುದನ್ನು ನೀವು ನೋಡುತ್ತಿದ್ದೀರೆ? ಎಂಬ ಪ್ರಶ್ನೆಗೆಹಾಗೇನೂ ಇಲ್ಲ’ ಎಂದರು.
ಮುಂದುವರಿಯುವುದು….

































