ಇಲಾಖೆಗಳ ನಡುವೆ ಸಮನ್ವಯ ಕೊರತೆ : ಬೇಕಾಬಿಟ್ಟಿ ಪೋಲಾಗುತ್ತಿರುವ ನೀರು!

Picture of RB NEWS

RB NEWS

Bureau Report

ಏನಿದು ಸಮಸ್ಸೆ?


ಕಾರ್ಕಳದಲ್ಲಿ ಕಳೆದ ಕೆಲ ತಿಂಗಳುಗಳಿAದ ಪ್ರಮುಖ ರಸ್ತೆ ಹಾಗೂ ಒಳ ರಸ್ತೆಗಳಲ್ಲಿ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಭರದಿಂದ ಸಾಗುತ್ತಿದೆ. ರೂ.65 ಕೋಟಿ ವೆಚ್ಚದಲ್ಲಿ ಅಮೃತಯೋಜನೆಯಡಿಯಲ್ಲಿ ಕರ್ನಾಟಕ ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಈ ಕಾಮಗಾರಿ ನಡೆಯುತ್ತಿದೆ.


ನಗರದ ನ್ಯಾಯಾಲಯ ರಸ್ತೆಯ ಮಧ್ಯೆಭಾಗದಲ್ಲಿ ಭಾರೀ ಹೊಂಡವನ್ನು ತೋಡಿ ಪೈಪ್ ಅಳವಡಿಸಿಲಾಗಿದೆ. ಕಾಮಗಾರಿ ಕೈಗೊಂಡ ಸಂದರ್ಭದಲ್ಲಿ ಅಗತ್ಯವಾಗಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ವಹಿಸದ ಪರಿಣಾಮವಾಗಿ ನಾಗರಿಕರು ನಾನಾ ಸಮಸ್ಸೆಗಳನ್ನು ಎದುರಿಸುವಂತಾಗಿದೆ.
ಪೈಪ್ ಲೈನ್ ಅಳವಡಿಸುವ ಕಾಮಗಾರಿ ಪೂರ್ಣಗೊಳಿಸಿ ತೋಡಲಾದ ಹೊಂಡವನ್ನು ಮುಚ್ಚುವÀ ಕಾವiಗಾರಿ ಇನ್ನೂ ಮುಗಿಸಿಲ್ಲ. ಹೊಂಡ ಮುಚ್ಚಿರುವ ಭಾಗಗಳಿಗೆ ಜಲ್ಲಿಕಲ್ಲು ತುಂಬಿಸುವ ಕಾರ್ಯ ನಡೆಸಿಲ್ಲ. ಇದರಿಂದಾಗಿ ರಸ್ತೆ ಪೂರ್ಣ ಧೂಳು ಅವರಿಸಿಕೊಂಡಿದೆ. ಪರಿಸರದ ಕಚೇರಿ, ವ್ಯಾಪಾರಿಗಳ ಬಹುಕಿನ ಮೇಲೆ ಮಾತ್ರವಲ್ಲದೇ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವಂತೆ ಮಾಡಿದೆ. ಶ್ವಾಸಕೋಶದ ಸಮಸ್ಸೆಯಿಂದ ಬಳಲುತ್ತಿರುವವರ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರುವಂತೆ ಮಾಡಿದೆ.

ನೀರು… ನೀರು… ನೀರು….

ಪ್ರಾಕೃತಿಕವಾಗಿ ದೊರಕುವ ಸಪತ್ಭರಿತ ನೀರನ್ನು ಸದ್ಭಾಳಕೆ ಮಾಡಿಕೊಂಡಲ್ಲಿ ಕಾರ್ಕಳ ಪರಿಸರದಲ್ಲಿ ನೀರಿನ ಸಮಸ್ಸೆ ಎದುರಾಗಲಾರದು. ಹೊಸ ಹೊಸ ಯೋಜನೆಗಳು ಕಾರ್ಕಳದಲ್ಲಿ ಅನುಷ್ಠಾನಗೊಳ್ಳುತ್ತಿವೆ. ಅದರಲ್ಲಿ ಎಣ್ಣೆಹೊಳೆ ನೀರಾವರಿ ಯೋಜನೆಯು ಒಂದಾಗಿದೆ.


108 ಕೋಟಿ ವೆಚ್ಚದಲ್ಲಿ ಏತನೀರಾವರಿ ಯೋಜನೆಯನ್ನು ಎಣ್ಣಿಹೊಳೆಯಲ್ಲಿ ಅನುಷ್ಠಾನಗೊಳಿಸಲಾಗಿದೆ.


2022 ಜೂನ್ 1ರಂದು ಆಗಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಎಣ್ಣೆಹೊಳೆ ಏತನೀರಾವರಿ ಯೋಜನೆಯನ್ನು ಲೋಕಾರ್ಪಣೆಗೈದಿದ್ದರು.
1,500 ಹೆಕ್ಟೇರ್ ಕ್ಥಷಿ ಭೂಮಿಗೆ ಈ ಯೋಜನೆಯಿಂದ ನೀರು ಹರಿಸಲಾಗುತ್ತಿದೆ. ಎಣ್ಣೆಹೊಳೆ, ಅಜೆಕಾರು, ಮರ್ಣೆ, ಹಿರ್ಗಾನ, ಕುಕ್ಕುಂದೂರು, ಕಾರ್ಕಳ ಪುರಸಭೆ ಒಳಗೊಂಡಿದೆ.
ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಇರುವ ರಾಮಸಮುದ್ರಕ್ಕೆ ನ್ಯಾಯಾಲಯ ರಸ್ತೆಯಲ್ಲಿ ಮೂಲಕವಾಗಿ ಬೃಹತ್ ಪೈಪ್‌ಲೈನ್ ಅಳವಡಿಸಿ ಎಣ್ಣೆಹೊಳೆಯ ಏತನೀರಾವರಿ ಯೋಜನೆಯಿಂದ ನೀರು ಹರಿದು ಬಿಡಲಾಗಿದೆ.
ಹೀಗಾಗಲೇ ಪೈಪ್ ಲೈನ್ ಪೂರ್ಣಗೊಳಿಸಿ ಪರೀಕ್ಷಾರ್ಥವಾಗಿ ನೀರು ಹರಿಯ ಬಿಟ್ಟು ಯಶಸ್ಸು ಕಾಣಲಾಗಿದೆ ಎಂಬ ವರದಿಯೂ ಇಲಾಖೆಯದಾಗಿದೆ.

ಎಣ್ಣೆಹೊಳೆ ಏತ ನೀರಾವರಿ ಯೋಜನೆಯಡಿಯಲ್ಲಿ ಅಳವಡಿಸಲಾಗಿರುವ ಪೈಪ್ ಲೈನ್‌ನಿಂದಾಗಿ ಪುರಸಭೆಯಿಂದ ಸರಬರಾಜು ಆಗುತ್ತಿರುವ ಪೈಪ್‌ಗಳ ಚೇಂಬರ್‌ಗಳು ಅಲ್ಲಲ್ಲಿ ಹಾನಿ ಉಂಟಾಗಿದೆ. ರಸ್ತೆಯ ಕೇವಲ ಅಡಿಗಳ ಆಳದಲ್ಲಿ ಆ ಪೈಪ್ ಲೈನ್ ಹಾದುಹೋಗಿರುವುದು ಕಂಡುಬರುತ್ತಿವೆ.

ಅಮೃತಯೋಜನೆಯಡಿಯಲ್ಲಿ ಸಮಗ್ರ ಕುಡಿಯುವ ನೀರು ಸರಬರಾಜಿಗಾಗಿ ಪುರಸಭಾ ವ್ಯಾಪ್ತಿಯಲ್ಲಿ ಪೈಪ್‌ಲೈನ್ ಅಳವಡಿಸಲಾಗುತ್ತಿದೆ. ರಾಮಸಮುದ್ರದಿಂದ ನ್ಯಾಯಾಯಲಯ ರಸ್ತೆ, ತೆಳ್ಳಾರು ರಸ್ತೆಯಾಗಿ ಪೈಪ್ ಅಳವಡಿಸಲು ಹೊಂಡ ತೋಡಲಾಗಿದೆ. ಇದೇ ರಸ್ತೆಯಾಗಿ ಎಣ್ಣೆಹೊಳೆ ಏತ ನೀರಾವರಿ ಯೋಜನೆಯ ಪೈಪ್ ಹಾದು ಹೋಗಿದೆ.
ಅಮೃತ ಯೋಜನೆಯಡಿಯಲ್ಲಿ ಪೈಪ್‌ಲೈನ್ ಅಳವಡಿಸಿದ ಸಂದರ್ಭದಲ್ಲಿ ಎಣ್ಣೆಹೊಳೆ ಏತನೀರಾವರಿ ಯೋಜನೆಯ ಪೈಪ್‌ಲೈನ್‌ಗೆ ಕೆಲವೊಂದು ಕಡೆ ಹಾನಿಯಾಗಿದೆ.
ಅದನ್ನು ಸರಿಪಡಿಸದೇ ಇತರೆಡೆಗಳಲ್ಲಿ ಕಾಮಗಾರಿ ನಡೆಸುತ್ತಿರುವ ಅಮೃತಯೋಜನೆಯ ಇಲಾಖಾಧಿಕಾರಿಗಳ ವರ್ತನೆಗೆ ಎಣ್ಣೆಹೊಳೆ ಏತ ನೀರಾವರಿ ಯೋಜನೆಯ ಇಲಾಖಾಧಿಕಾರಿಗಳು ತಕ್ಕ ಉತ್ತರ ನೀಡಿದಂತೆ ಕಂಡುಬರುತ್ತಿದೆ.

ಎಣ್ಣೆಹೊಳೆ ಏತನೀರಾವರಿ ಯೋಜನೆಯಿಂದ ನೇರವಾಗಿ ರಾಮಸಮುದ್ರಕ್ಕೆ ಕಳೆದ ಒಂದು ವಾರದಿಂದ ಸತತವಾಗಿ ನೀರು ಹರಿಯಬಿಡಲಾಗಿದೆ.
ಇದರಿಂದ ಹಾನಿಗೊಳಗಾದ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ನೀರು ಪೋಲಾಗುತ್ತಿದೆ. ಇಷ್ಟಾದರೂ ಕ್ಯಾರೇ ಅನ್ನದೇ ಅಮೃತಯೋಜನೆಯಡಿಯಲ್ಲಿ ಇತರೆಡೆಗಳಲ್ಲಿ ಕಾಮಗಾರಿಯನ್ನು ಮುಂದುವರಿಸಲಾಗುತ್ತಿದೆ.
ಈ ಎಲ್ಲಾ ಅವಾಂತರವು ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ನಡೆದಿದ್ದು, ಪುರಸಭಾ ಮುಖ್ಯಾಧಿಕಾರಿ ಮಾತ್ರ ಕಾದು ನೋಡುವ ತಂತ್ರಕ್ಕೆ ಮುಂದಾಗಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top