ಇಲಾಖೆಗಳ ನಡುವಿನ ಸಮನ್ವಯ ಕೊರತೆಗೆ ತಾತ್ಕಾಲಿಕ ಶಮನ
ರಾಮಸಮುದ್ರದ ಮಡಿಲು ಸೇರುತ್ತಿರುವ ಎಣ್ಣೆಹೊಳೆ-ಸ್ವರ್ಣನದಿ ನೀರು
“ಆರ್.ಬಿ.ನ್ಯೂಸ್ “ವರದಿಯ ಫಲಶ್ರುತಿ
ಕಾರ್ಕಳ: ಕಾರ್ಕಳ ಪುರಸಭೆ, ಕರ್ನಾಟಕ ಕುಡಿಯುವ ನೀರು ಹಾಗೂ ಒಳಚರಂಡಿ ಮಂಡಳಿ ಹಾಗೂ ಎಣ್ಣೆಹೊಳೆ ಏತ ನೀರಾವರಿ ಯೋಜನೆ ನಡುವೆ ಸಮನ್ವಯದ ಕೊರತೆಯಿಂದಾಗಿ ನ್ಯಾಯಾಲಯ ರಸ್ತೆಯಲ್ಲಿ ಬೃಹತ್ ಪೈಪ್ ಒಡೆದು ಹೋಗಿ ಬೇಕಾಬಿಟ್ಟಿ ಕುಡಿಯುವ ನೀರು ವ್ಯರ್ಥವಾಗಿದ್ದು, ಈ ಕುರಿತು ಆರ್.ಬಿ.ನ್ಯೂಸ್ ಸಚಿತ್ರ ವರದಿ ಪ್ರಕಟಿಸಿದ ಬಳಿಕ ಬೃಹತ್ ಆಕಾರದ ಪೈಪ್ ದುರಸ್ಥಿ ಕಾರ್ಯ ನಡೆದಿದ್ದು, ಇದೀಗ ಐತಿಹಾಸಿಕ ರಾಮಸಮುದ್ರಕ್ಕೆ ಅಜೆಕಾರು ಎಣ್ಣೆಹೊಳೆಯಲ್ಲಿ ಸ್ಥಾಪಿಸಿಲಾಗಿರುವ ಏತನೀರಾವರಿ ಯೋಜನೆಯಿಂದ ಸ್ವರ್ಣ ನದಿಯ ನೀರು ಹರಿದು ಬರುತ್ತಿದೆ.
ಜನವರಿ ತಿಂಗಳ ಅಂತ್ಯದಲ್ಲಿ ಕಾರ್ಕಳ ನ್ಯಾಯಾಲಯ ರಸ್ತೆಯಲ್ಲಿ ಅಮೃತಯೋಜನೆಯಡಿಯಲ್ಲಿ ಕುಡಿಯುವ ನೀರಿನ ಪೈಪ್ನ್ನು ಕರ್ನಾಟಕ ನೀರು ಮತ್ತು ಒಳಚರಂಡಿ ಮಂಡಳಿ ಮುಖೇನಾ ಅಳವಡಿಸಿದ ಸಂದರ್ಭದಲ್ಲಿ ಎಣ್ಣೆಹೊಳೆ ಏತ ನೀರಾವರಿ ಯೋಜನೆಯಿಂದ ಹರಿದು ಬರುವ ಸ್ವರ್ಣ ನದಿಯ ನೀರಿ ಬೃಹತ್ ಗಾತ್ರದ ಪೈಪ್ ಲೈನ್ ಒಡೆದು ಹೋಗಿತ್ತು.
ದುರಸ್ಥಿ ಕಾರ್ಯ ನಡೆಸದೇ ಮಣ್ಣುಮುಚ್ಚಿ ಹಾಕಿ ಪ್ರಕರಣ ಹೊರಬರದಂತೆ ಕರ್ನಾಟಕ ಕುಡಿಯುವ ನೀರು ಹಾಗೂ ಒಳಚರಂಡಿ ಮಂಡಳಿ ಮುಂದಾಗಿತ್ತು. ಆದರೆ ನೀರಿನ ಒತ್ತಡದಿಂದ ಹಾಕಲಾದ ಮಣ್ಣು ಸರಿದು ಧಾರಾಕಾರ ನೀರು ಪರಿಸರ ಪೂರ್ತಿ ಆವರಿಸಿಕೊಂಡಿತ್ತು.
ವಾರ ಕಳೆಯುತ್ತಾ ಬಂದಿದ್ದರೂ ದುರಸ್ಥಿ ಕಾರ್ಯ ನಡೆಸದೇ ಮತ್ತೊಂದು ಇಲಾಖೆಯತ್ತ ಬೊಟ್ಟು ಮಾಡುತ್ತಾ ಕಾಲ ಕಳೆಯುತ್ತಿದ್ದ ಕರ್ನಾಟಕ ಕುಡಿಯುವ ನೀರು ಹಾಗೂ ಒಳಚರಂಡಿ ಮಂಡಳಿಯ ಇಲಾಖಧಿಕಾರಿಗಳ ವರ್ತನೆಗೆ ನಾಗರಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಆರ್.ಬಿ. ಮೂರು ಇಲಾಖೆಗೆ ಮುಖಸ್ಥರನ್ನು ಸಂಪರ್ಕಿಸಿ ಅಗತ್ಯ ಮಾಹಿತಿ ಕಲೆ ಹಾಕಿ ಸಮಗ್ರ ವರದಿ ಪ್ರಕಟಿಸಿತು.
ಈ ಎಲ್ಲಾ ಬೆಳವಣಿಗೆಯ ಬಳಿಕ ದುರಸ್ಥಿ ಕಾರ್ಯ ನಡೆದಿದ್ದು, ಇದೀಗ ಐತಿಹಾಸಿಕ ರಾಮಸಮುದ್ರಕ್ಕೆ ಎಣ್ಣೆಹೊಳೆಯ ಏತನೀರಾವರಿ ಯೋಜನೆಯ ನೀರು ಹರಿದು ಬಂದಿದೆ.
ಸ್ವಚ್ಚoದವಾದ ರಾಮಸಮುದ್ರ


ಕಾರ್ಕಳವನ್ನಾಡಳಿತ ವೀರ ಬೈರವರಸನಿಗೆ ಇಬ್ಬರು ಮಕ್ಕಳು. ವೀರಪಾಂಡ್ಯ ಹಾಗೂ ರಾಮನಾಥ. ತಂದೆಯ ಜೀವಿತಾವಧಿಯಲ್ಲಿ ರಾಮನಾಥ ಇಹಲೋಕ ತ್ಯಜಿಸಿದ್ದು, ಮಗನ ಸ್ಮರಣಾರ್ಥವಾಗಿ ಪ್ರಾಕೃತಿಕವಾಗಿ ನಿರ್ಮಿಸಿದ ಬೃಹತ್ ಕರೆಯೇ ರಾಮಸಮುದ್ರ. 47 ಎಕರೆ ಪ್ರದೇಶ ವ್ಯಾಪ್ತಿಹೊಂದಿದ್ದ ಈ ಕೆರೆಯಲ್ಲಿ ಶೇಖರಣೆಗೊಳ್ಳುವ ನೀರು(ಮಳೆನೀರು ಹಾಗೂ ಅಂತರ್ ಜಲ) ಸಮಗ್ರ ಕಾರ್ಕಳ ಪುರಸಭೆ ವ್ಯಾಪ್ತಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.
ಐತಿಹಾಸಿಕ ಹಿನ್ನಲೆಯ ರಾಮಸಮುದ್ರದ ನೀರು ಕಳೆದ ಕೆಲವು ವರ್ಷಗಳಿಂದ ಕಲುಷಿತಗೊಳ್ಳುತ್ತಿದ್ದು, ಪರಿಸರದ ಕೆಲ ಸಂಸ್ಥೆ, ಮನೆಗಳಿಂದ ಹಾಗೂ ಇತರೆಡೆಗಂದ ಹರಿದು ಬರುತ್ತಿದ್ದ ತ್ಯಾಜ್ಯ ಮಿಶ್ರಣಗೊಳ್ಳುತ್ತಿತ್ತು. ಪರಿಣಾಮವಾಗಿ ರಾಮಸಮುದ್ರದ ನೀರಿನಲ್ಲಿ ತೈಲಾಂಶ ಕೂಡಿಕೊಂಡಿದ್ದು, ಈ ಕುರಿತು ಪುರಸಭೆಯ ಸಾಮಾನ್ಯ ಸಭೆಯಲ್ಲಿ ವಿಚಾರ ಪ್ರಸ್ತಾಪವಾಗಿತ್ತು.
ಈ ನಡುವೆ ಕೆಲವರು ರಾಮಸಮುದ್ರಕ್ಕೆ ಹರಿದು ಹರಿದು ಬರುತ್ತಿದ್ದ ತ್ಯಾಜ್ಯದ ಕೊಳವೆಗೆ ಮಣ್ಣುರಾಶಿ ತುಂಬಿಸಿ ತ್ಯಾಜ್ಯ ನೀರು ರಾಮಸಮುದ್ರಕ್ಕೆ ವಿಲೀನವಾಗದಂತೆ ಜಾಗೃತಿ ವಹಿಸಿದ್ದರು.
ಇದೇ ರಾಮಸಮುದ್ರದಲ್ಲಿ ಮಳೆಗಾಲದ ಸಂದರ್ಭದಲ್ಲಿ ಹೆಚ್ಚುವರಿ ನೀರು ಹರಿದು ಎಣ್ಣೆಹೊಳೆಗೆ ಸೇರುತ್ತದೆ. ಅದೇ ಎಣ್ಣೆಹೊಳೆಯ ನೀರು ಇದೀಗ ಏತನೀರಾವರಿ ಯೋಜನೆಯ ಮೂಲಕ ರಾಮಸಮುದ್ರದ ಮಡಿಲು ಸೇರುತ್ತಿದೆ.
ಫೆ.2ರಂದು ಆರ್.ಬಿ.ನ್ಯೂಸ್ ನಲ್ಲಿ ಪ್ರಕಟಗೊಂಡ ವರದಿ….
ಇಲಾಖೆಗಳ ನಡುವೆ ಸಮನ್ವಯ ಕೊರತೆ : ಬೇಕಾ ಬಿಟ್ಟಿಯಾಗಿ ಪೋಲಾಗುತ್ತಿರುವ ನೀರು
ಕಾರ್ಕಳ: ಕಡುಬೇಸಿಗೆಯ ದಿನಗಳು ಎದುರಾಗುತ್ತಿದೆ. ಕುಡಿಯುವ ನೀರಿಗಾಗಿ ಹಾತೊರೆಯುತ್ತಿರುವುದು ಕಂಡುಬರುತ್ತಿದೆ.
ಇಲಾಖೆಗಳ ನಡುವಿನ ಸಮನ್ವಯ ಕೊರತೆಯಿಂದಾಗಿ ಕಳೆದ ಐದು ದಿನಗಳಿಂದ ನ್ಯಾಯಾಲಯ ರಸ್ತೆಯ ಒಂದು ಪಾರ್ಶ್ವದಲ್ಲಿ ಭಾರೀ ಪ್ರಮಾಣದಲ್ಲಿ ಕುಡಿಯುವ ನೀರು ಪೋಲಾಗುತ್ತಿದ್ದರೂ, ಇಲಾಖಾಧಿಕಾರಿಗಳು ಮಾತ್ರ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವುದು ಇವರ ದಕ್ಷತೆಗೆ ಹಿಡಿದ ಕೈಗನ್ನಡಿಯಾಗಿದೆ.





ಏನಿದು ಸಮಸ್ಸೆ?
ಕಾರ್ಕಳದಲ್ಲಿ ಕಳೆದ ಕೆಲ ತಿಂಗಳುಗಳಿAದ ಪ್ರಮುಖ ರಸ್ತೆ ಹಾಗೂ ಒಳ ರಸ್ತೆಗಳಲ್ಲಿ ಪೈಪ್ಲೈನ್ ಅಳವಡಿಸುವ ಕಾಮಗಾರಿ ಭರದಿಂದ ಸಾಗುತ್ತಿದೆ. ರೂ.65 ಕೋಟಿ ವೆಚ್ಚದಲ್ಲಿ ಅಮೃತಯೋಜನೆಯಡಿಯಲ್ಲಿ ಕರ್ನಾಟಕ ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಈ ಕಾಮಗಾರಿ ನಡೆಯುತ್ತಿದೆ.
ನಗರದ ನ್ಯಾಯಾಲಯ ರಸ್ತೆಯ ಮಧ್ಯೆಭಾಗದಲ್ಲಿ ಭಾರೀ ಹೊಂಡವನ್ನು ತೋಡಿ ಪೈಪ್ ಅಳವಡಿಸಿಲಾಗಿದೆ. ಕಾಮಗಾರಿ ಕೈಗೊಂಡ ಸಂದರ್ಭದಲ್ಲಿ ಅಗತ್ಯವಾಗಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ವಹಿಸದ ಪರಿಣಾಮವಾಗಿ ನಾಗರಿಕರು ನಾನಾ ಸಮಸ್ಸೆಗಳನ್ನು ಎದುರಿಸುವಂತಾಗಿದೆ.
ಪೈಪ್ ಲೈನ್ ಅಳವಡಿಸುವ ಕಾಮಗಾರಿ ಪೂರ್ಣಗೊಳಿಸಿ ತೋಡಲಾದ ಹೊಂಡವನ್ನು ಮುಚ್ಚುವÀ ಕಾವiಗಾರಿ ಇನ್ನೂ ಮುಗಿಸಿಲ್ಲ. ಹೊಂಡ ಮುಚ್ಚಿರುವ ಭಾಗಗಳಿಗೆ ಜಲ್ಲಿಕಲ್ಲು ತುಂಬಿಸುವ ಕಾರ್ಯ ನಡೆಸಿಲ್ಲ. ಇದರಿಂದಾಗಿ ರಸ್ತೆ ಪೂರ್ಣ ಧೂಳು ಅವರಿಸಿಕೊಂಡಿದೆ. ಪರಿಸರದ ಕಚೇರಿ, ವ್ಯಾಪಾರಿಗಳ ಬಹುಕಿನ ಮೇಲೆ ಮಾತ್ರವಲ್ಲದೇ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವಂತೆ ಮಾಡಿದೆ. ಶ್ವಾಸಕೋಶದ ಸಮಸ್ಸೆಯಿಂದ ಬಳಲುತ್ತಿರುವವರ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರುವಂತೆ ಮಾಡಿದೆ.
ನೀರು… ನೀರು… ನೀರು….
ಪ್ರಾಕೃತಿಕವಾಗಿ ದೊರಕುವ ಸಪತ್ಭರಿತ ನೀರನ್ನು ಸದ್ಭಾಳಕೆ ಮಾಡಿಕೊಂಡಲ್ಲಿ ಕಾರ್ಕಳ ಪರಿಸರದಲ್ಲಿ ನೀರಿನ ಸಮಸ್ಸೆ ಎದುರಾಗಲಾರದು. ಹೊಸ ಹೊಸ ಯೋಜನೆಗಳು ಕಾರ್ಕಳದಲ್ಲಿ ಅನುಷ್ಠಾನಗೊಳ್ಳುತ್ತಿವೆ. ಅದರಲ್ಲಿ ಎಣ್ಣೆಹೊಳೆ ನೀರಾವರಿ ಯೋಜನೆಯು ಒಂದಾಗಿದೆ.
108 ಕೋಟಿ ವೆಚ್ಚದಲ್ಲಿ ಏತನೀರಾವರಿ ಯೋಜನೆಯನ್ನು ಎಣ್ಣಿಹೊಳೆಯಲ್ಲಿ ಅನುಷ್ಠಾನಗೊಳಿಸಲಾಗಿದೆ.
2022 ಜೂನ್ 1ರಂದು ಆಗಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಎಣ್ಣೆಹೊಳೆ ಏತನೀರಾವರಿ ಯೋಜನೆಯನ್ನು ಲೋಕಾರ್ಪಣೆಗೈದಿದ್ದರು.
1,500 ಹೆಕ್ಟೇರ್ ಕ್ಥಷಿ ಭೂಮಿಗೆ ಈ ಯೋಜನೆಯಿಂದ ನೀರು ಹರಿಸಲಾಗುತ್ತಿದೆ. ಎಣ್ಣೆಹೊಳೆ, ಅಜೆಕಾರು, ಮರ್ಣೆ, ಹಿರ್ಗಾನ, ಕುಕ್ಕುಂದೂರು, ಕಾರ್ಕಳ ಪುರಸಭೆ ಒಳಗೊಂಡಿದೆ.
ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಇರುವ ರಾಮಸಮುದ್ರಕ್ಕೆ ನ್ಯಾಯಾಲಯ ರಸ್ತೆಯಲ್ಲಿ ಮೂಲಕವಾಗಿ ಬೃಹತ್ ಪೈಪ್ಲೈನ್ ಅಳವಡಿಸಿ ಎಣ್ಣೆಹೊಳೆಯ ಏತನೀರಾವರಿ ಯೋಜನೆಯಿಂದ ನೀರು ಹರಿದು ಬಿಡಲಾಗಿದೆ.
ಹೀಗಾಗಲೇ ಪೈಪ್ ಲೈನ್ ಪೂರ್ಣಗೊಳಿಸಿ ಪರೀಕ್ಷಾರ್ಥವಾಗಿ ನೀರು ಹರಿಯ ಬಿಟ್ಟು ಯಶಸ್ಸು ಕಾಣಲಾಗಿದೆ ಎಂಬ ವರದಿಯೂ ಇಲಾಖೆಯದಾಗಿದೆ.
ಎಣ್ಣೆಹೊಳೆ ಏತ ನೀರಾವರಿ ಯೋಜನೆಯಡಿಯಲ್ಲಿ ಅಳವಡಿಸಲಾಗಿರುವ ಪೈಪ್ ಲೈನ್ನಿಂದಾಗಿ ಪುರಸಭೆಯಿಂದ ಸರಬರಾಜು ಆಗುತ್ತಿರುವ ಪೈಪ್ಗಳ ಚೇಂಬರ್ಗಳು ಅಲ್ಲಲ್ಲಿ ಹಾನಿ ಉಂಟಾಗಿದೆ. ರಸ್ತೆಯ ಕೇವಲ ಅಡಿಗಳ ಆಳದಲ್ಲಿ ಆ ಪೈಪ್ ಲೈನ್ ಹಾದುಹೋಗಿರುವುದು ಕಂಡುಬರುತ್ತಿವೆ.
ಮತ್ತೊಂದು ಯೋಜನೆಯ ಮೂಲಕ ಬೃಹತ್ ಪೈಪ್ ಲೈನ್ ಅಳವಡಿಕೆ
ಅಮೃತಯೋಜನೆಯಡಿಯಲ್ಲಿ ಸಮಗ್ರ ಕುಡಿಯುವ ನೀರು ಸರಬರಾಜಿಗಾಗಿ ಪುರಸಭಾ ವ್ಯಾಪ್ತಿಯಲ್ಲಿ ಪೈಪ್ಲೈನ್ ಅಳವಡಿಸಲಾಗುತ್ತಿದೆ. ರಾಮಸಮುದ್ರದಿಂದ ನ್ಯಾಯಾಯಲಯ ರಸ್ತೆ, ತೆಳ್ಳಾರು ರಸ್ತೆಯಾಗಿ ಪೈಪ್ ಅಳವಡಿಸಲು ಹೊಂಡ ತೋಡಲಾಗಿದೆ. ಇದೇ ರಸ್ತೆಯಾಗಿ ಎಣ್ಣೆಹೊಳೆ ಏತ ನೀರಾವರಿ ಯೋಜನೆಯ ಪೈಪ್ ಹಾದು ಹೋಗಿದೆ.
ಅಮೃತ ಯೋಜನೆಯಡಿಯಲ್ಲಿ ಪೈಪ್ಲೈನ್ ಅಳವಡಿಸಿದ ಸಂದರ್ಭದಲ್ಲಿ ಎಣ್ಣೆಹೊಳೆ ಏತನೀರಾವರಿ ಯೋಜನೆಯ ಪೈಪ್ಲೈನ್ಗೆ ಕೆಲವೊಂದು ಕಡೆ ಹಾನಿಯಾಗಿದೆ.
ಅದನ್ನು ಸರಿಪಡಿಸದೇ ಇತರೆಡೆಗಳಲ್ಲಿ ಕಾಮಗಾರಿ ನಡೆಸುತ್ತಿರುವ ಅಮೃತಯೋಜನೆಯ ಇಲಾಖಾಧಿಕಾರಿಗಳ ವರ್ತನೆಗೆ ಎಣ್ಣೆಹೊಳೆ ಏತ ನೀರಾವರಿ ಯೋಜನೆಯ ಇಲಾಖಾಧಿಕಾರಿಗಳು ತಕ್ಕ ಉತ್ತರ ನೀಡಿದಂತೆ ಕಂಡುಬರುತ್ತಿದೆ.
ಎಣ್ಣೆಹೊಳೆ ಏತನೀರಾವರಿ ಯೋಜನೆಯಿಂದ ನೇರವಾಗಿ ರಾಮಸಮುದ್ರಕ್ಕೆ ಕಳೆದ ಒಂದು ವಾರದಿಂದ ಸತತವಾಗಿ ನೀರು ಹರಿಯಬಿಡಲಾಗಿದೆ.
ಇದರಿಂದ ಹಾನಿಗೊಳಗಾದ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ನೀರು ಪೋಲಾಗುತ್ತಿದೆ. ಇಷ್ಟಾದರೂ ಕ್ಯಾರೇ ಅನ್ನದೇ ಅಮೃತಯೋಜನೆಯಡಿಯಲ್ಲಿ ಇತರೆಡೆಗಳಲ್ಲಿ ಕಾಮಗಾರಿಯನ್ನು ಮುಂದುವರಿಸಲಾಗುತ್ತಿದೆ.
ಈ ಎಲ್ಲಾ ಅವಾಂತರವು ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ನಡೆದಿದ್ದು, ಪುರಸಭಾ ಮುಖ್ಯಾಧಿಕಾರಿ ಮಾತ್ರ ಕಾದು ನೋಡುವ ತಂತ್ರಕ್ಕೆ ಮುಂದಾಗಿದ್ದಾರೆ.
“ದುರಸ್ಥಿ ಕಾರ್ಯಕ್ಕೆ ಸಹಕಾರ”
-ಪ್ರೀತಂ, ಉಪಅಭಿಯಮತರರು, ಎಣ್ಣೆಹೊಳೆ ಏತನೀರಾವರಿ ಯೋಜನೆ
ಅಮೃತಯೋಜನೆ ಅನುಷ್ಠಾನ ನೆಪದಲ್ಲಿ ಏತನೀರಾವರಿ ಯೋಜನೆಯ ಪೈಪ್ಲೈನ್ ಕೆಡವಿ ಹಾಕಿರುವ ಅಂಶ ಬೆಳಕಿಗೆ ಬಂದಿದೆ. ದುರಸ್ಥಿ ಕಾಮಗಾರಿ ಅವರಿಂದಲೇ ಆಗಬೇಕು. ಆ ಸಂದರ್ಭದಲ್ಲಿ ಹರಿಯ ಬಿಡಲಾಗುವ ನೀರನ್ನು ನಿಲ್ಲಿಸಿ ಸಹಕರಿಸಲು ಬದ್ಧ.
“ನಾವು ಹೊಣೆ ಅಲ್ಲ”
-ರಕ್ಷಿತ್,ಉಪಅಭಿಯಂತರರು, ಕರ್ನಾಟಕ ಕುಡಿಯುವ ನೀರು ಹಾಗೂ ಒಳಚರಂಡಿ ಮಂಡಳಿ ಏತನೀರಾವರಿ ಯೋಜನೆಯ ಪೈಪ್ ಲೈನ್ ಅಳವಡಿಸಿದ ಸಂದರ್ಭದಲ್ಲಿ ಪೈಪ್ ಹಾನಿಗೊಳಗಾಗಿದೆ. ಕಳೆದ ಐದು ದಿನಗಳಿಂದ ಎಣ್ಣೆಹೊಳೆಯಿಂದ ರಾಮಸಮುದ್ರಕ್ಕೆ ನೀರು ಹರಿಯಬಿಡಲಾಗಿದೆ. ಆ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ನೀರು ಸೋರಿಕೆಯಾಗಿದೆ. ಈ ಘಟನೆಗೂ, ಅಮೃತಾಯೋಜನೆಯಡಿ ಅಳವಡಿಸಿದ ಪೈಪ್ ಲೈನ್ ಕಾಮಗಾರಿಗೆ ಯಾವುದೇ ಸಂಬಂಧ ಇಲ್ಲ.




















