ಇರುವೈಲು ಎಲಿಯ ಜುಮಾ ಮಸೀದಿ ಉರೂಸ್
ಮೂಡುಬಿದಿರೆ : ಇರುವೈಲು ಗ್ರಾಮದ ಎಲಿಯ ಪುಚ್ಚಮೊಗರು ಪ್ರದೇಶದ ಮನಾರುಲ್ ಹುದಾ ಜುಮಾ ಮಸೀದಿಯ ಉರೂಸ್ ಸಮಾರಂಭ ಏಪ್ರಿಲ್ 9-10 ರಂದು ನಡೆಯಲಿದೆ.
ಡಾ.ಸಯ್ಯಿದ್, ಡಾ.ಅಬೂಬಕ್ಕರ್ ವಲಿಯುಲ್ಲಾಹಿ ಅಸ್ತಮಿಸಿದ ಈ ಸ್ಥಳಕ್ಕೆ ಮತ ಭೇದವಿಲ್ಲದೆ ಎಲ್ಲರೂ ಕಷ್ಟ ಪರಿಹಾರಕ್ಕಾಗಿ ಬರುತ್ತಾರೆ. ಪ್ರತೀ ಎರಡು ವರ್ಷಕ್ಕೊಮ್ಮೆ ಈ ಉರೂಸ್ ನಡೆಯುತ್ತದೆ.
9 ರಂದು ಸಂಜೆ ಮಸೀದಿಯ ಅಧ್ಯಕ್ಷರು ಧ್ವಜಾರೋಹಣ ನೆರವೇರಿಸಿ ದಪ್ಪು ಕಾರ್ಯಕ್ರಮ ಹಾಗೂ ನಮಾಜ್, ಸಭಾ ಕಾರ್ಯಕ್ರಮ ದ.ಕ.ಜಿಲ್ಲಾ ಖಾಜಿ ಶೈಖುನಾ ತ್ವಾಖ ಅಹ್ಮದ್ ಮುಸ್ಲಿಯಾರ್ ರಿಂದ ಉದ್ಘಾಟನೆ ನಡೆಯಲಿದೆ.
ಏಪ್ರಿಲ್ 10 ರಂದು ಸಂಜೆ ಸರ್ವ ಧರ್ಮ ಸೌಹಾರ್ದ ಕೂಟವನ್ನು ಡಾ.ಮೋಹನ ಆಳ್ವ ಉದ್ಘಾಟಿಸಲಿದ್ದಾರೆ.
ಇದರಲ್ಲಿ ಇರುವೈಲು ದೇವಳದ ಪ್ರಧಾನ ಅರ್ಚಕ ರಾಘವೇಂದ್ರ ಅಸ್ರಣ್ಣ, ಹೊಸಬೆಟ್ಟು ಚರ್ಚ್ ನ ರೆ.ಫಾ.ಗ್ರೆಗರಿ ಡಿಸೋಜ ಹಾಗೂ ಸರ್ಕಾರದ, ಸಮಾಜದ ಗಣ್ಯರು ಭಾಗವಹಿಸಲಿದ್ದಾರೆ. ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಮಸೀದಿ ಜಮಾತ್ ಸಮಿತಿಯ ಅಧ್ಯಕ್ಷ ಜಿ.ಅಬ್ದುಲ್ ಮಜೀದ್, ಪ್ರಧಾನ ಕಾರ್ಯದರ್ಶಿ ಜ.ಇಮ್ರಾನ್, ಕೋಶಾಧಿಕಾರಿ ಜ. ಮುಹಮ್ಮದ್ ಇಕ್ಬಾಲ್, ಮಹಮ್ಮದ್ ಆಶಿಫ್, ಇಸ್ಮಾಯಿಲ್ ಹಾಜರಿದ್ದರು.
ವರದಿ : ರಾಯಿ ರಾಜಕುಮಾರ ಮೂಡುಬಿದಿರೆ





































