



ಇನ್ನಾ ವಿದ್ಯುತ್ ಪವರ್ ಲೈನ್ ಸಮಸ್ಯೆ: ವಿಧಾನ ಮಂಡಲದಲ್ಲಿ ಧ್ವನಿ ಎತ್ತಿದ ಎಂ ಎಲ್ ಸಿ ಮಂಜುನಾಥ ಭಂಡಾರಿ
ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ತಿನ ಶಾಸಕ ಮಂಜುನಾಥ ಭಂಡಾರಿ ಅವರು ನಂದಿಕೂರು- ಕಾಸರಗೋಡು ವಿದ್ಯುತ್ ಲೈನ್ ಕಾಮಗಾರಿಯ ಅವೈಜ್ಞಾನಿಕ ಯೋಜನೆ ಕುರಿತಂತೆ ಹಾಗೂ ಇದರಿಂದ ರೈತರಿಗೆ ಆಗುವ ಅನಾನುಕೂಲವನ್ನು ವಿವರಿಸಿದರು.

ಕೂಡಲೇ ಟವರ್ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಿ ವೈಜ್ಞಾನಿಕವಾಗಿ ನೆಲದಡಿಯಲ್ಲಿ ವಿದ್ಯುತ್ ಲೈನ್ ನಿರ್ಮಾಣ ಮಾಡುವ ಕುರಿತಂತೆ ಶೂನ್ಯ ವೇಳೆಯಲ್ಲಿ ಇಂಧನ ಸಚಿವರನ್ನು ಒತ್ತಾಯಿಸಿದರು.
ಉದಯ ಶೆಟ್ಟಿ ಸಂತಸ : ವಿಧಾನ ಪರಿಷತ್ ನಲ್ಲಿ ಇಂದು ಮಂಜುನಾಥ ಭಂಡಾರಿಯವರು ವಿದ್ಯುತ್ ಪವರ್ ಲೈನ್ ಬಗ್ಗೆ ಮಾಡಿರುವ ಪ್ರಸ್ತಾಪ ಇನ್ನಾದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಸಿಕ್ಕ ಮೊದಲ ಜಯ ಎಂದು ತಿಳಿಸಿದ್ದಾರೆ.


ಈ ಯೋಜನೆಯನ್ನು ವಿರೋಧಿಸಿ ಅಹೋ ರಾತ್ರಿ ಹೋರಾಟವನ್ನು ರೈತರೊಂದಿಗೆ ಸೇರಿ ಮಾಡಿದ್ದೆವು. ಈ ಹೋರಾಟಕ್ಕೆ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿಯವರು ಮತ್ತಷ್ಟು ಬಲ ನೀಡಿರುವುದು ಹೋರಾಟಗಾರರಿಗೆ ಸಿಕ್ಕ ಮೊದಲ ಜಯ ಎಂದು ಬಣ್ಣಿಸಿದ್ದಾರೆ.





































