ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪ್ರಶ್ನಾವಳಿ ಮುಂದಿಟ್ಟ ಶಾಸಕ ವಿ. ಸುನೀಲ್ ಕುಮಾರ್

Picture of RB NEWS

RB NEWS

Bureau Report

• ಸಿಎಂ ಸಿದ್ದರಾಮಯ್ಯನವರೇ, ಶಾಸನಸಭೆಯಲ್ಲಿ ಇಡಿ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡುವಾಗ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಗರಣ ನಡೆದಿದೆ ಎಂದು ನೀವು ಒಪ್ಪಿಕೊಂಡಿದ್ದು ಸುಳ್ಳೇ

• ನಿಗಮದಲ್ಲಿ ನಡೆದ ಅವ್ಯವಹಾರ ಸಂಬಂಧ ಸಚಿವ ನಾಗೇಂದ್ರ ಅವರಿಂದ ರಾಜೀನಾಮೆ ಪಡೆದಿದ್ದು ಸುಳ್ಳೇ ?

• ಅಕ್ರಮ ಹಣ ವರ್ಗಾವಣೆಯಾಗಿದೆ ಎಂದು ಜಾರಿ ನಿರ್ದೇಶನಾಲಯ ನಾಗೇಂದ್ರನನ್ನು ಬಂಧಿಸಿದ್ದು ಸುಳ್ಳೇ ?
ಎಲ್ಲವೂ ರಾಜ್ಯದ ಜನತೆಯ ಎದುರು ಮುಕ್ತವಾಗಿ ನಡೆದ ಘಟನಾವಳಿಗಳು. ಅಕ್ರಮದ ಸಂಬಂಧ ಜೈಲಿಗೆ ಹೋಗಿ ಬಂದ ಆರೋಪಿಯೊಬ್ಬ ಈಗ ನೇರಾನೇರ ನಿಮ್ಮ ನಿವಾಸಕ್ಕೆ ಬಂದು ವಿಜಯೋತ್ಸವ ನಡೆಸಿ ಬಂದವರಂತೆ ಸನ್ಮಾನ ಮಾಡುತ್ತಾರೆಂದರೆ ಏನರ್ಥ ? -ಈ ಅಕ್ರಮಕ್ಕೆ ನಿಮ್ಮ ಚಿತಾವಣೆ ಇತ್ತೆ ಹಾಗಾದರೆ ? ಆಂಧ್ರದ ಚುನಾವಣೆಗೆ ನಿಮ್ಮ ಬಾಬ್ತಿನಿಂದ ನಾಗೇಂದ್ರ ಎಷ್ಟು ಹಣ ವರ್ಗಾವಣೆ ಮಾಡಿದರು ?

  • ಮಹಾರಾಷ್ಟ್ರ ಚುನಾವಣಾ ಹೊತ್ತಿನಲ್ಲಿ ಇನ್ನು ಯಾವ ನಿಗಮಕ್ಕೆ ಕೊಳ್ಳೆ ಹೊಡೆಯೋಣ ಎಂದು ಚರ್ಚಿಸಲು ಆರೋಪಿ ನಾಗೇಂದ್ರನಿಂದ ಅಭಿನಂದನೆ ಹಾಗೂ ಸಲಹೆ ಪಡೆದಿರೇ ?
  • ವಾಲ್ಮೀಕಿ ಜನಾಂಗದ ಸಂವಿಧಾನ ಬದ್ಧ ಹಣವನ್ನು ನುಂಗಿ ನೀರು ಕುಡಿದ ಆರೋಪಿಯನ್ನು ವಾಲ್ಮೀಕಿ ಜಯಂತಿಯ ಹಿಂದಿನ ದಿನ ಆಲಂಘಿಸಿ ಅಕ್ಕರೆ ಸುರಿಸಿದ್ದು ಎಷ್ಟು ಸರಿ ಸಿದ್ದರಾಮಯ್ಯನವರೇ ?

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top