ಇದು ಯೋಗದ ಭಂಗಿ ಅಲ್ಲ!
ಹೆಬ್ರಿ :ಕುಚ್ಚೂರು ರಸ್ತೆಯ ಸ್ಪಟಿಕ ಪ್ಲಾಜದ ಎದುರುಗಡೆ ಇರುವ ಸಾರ್ವಜನಿಕ ಬಸ್ಸು ತಂಗುದಾಣ ಇದಾಗಿದೆ.
ಇಲ್ಲಿ ಯೋಗಾಸನ ತರಬೇತಿಯಾಗುತ್ತದೆ ಎಂದು ಊಹಿಸಿಕೊಂಡರೆ ಅದು ತಪ್ಪಾಗುತ್ತದೆ.
ಹಿಂದಿನಿಂದಲೂ ಈ ಬಸ್ ತಂಗದಾಣವು ಕುಡುಕರ ತಾಣವಾಗಿ ಮಾರ್ಪಾಡಾಗುತ್ತಿದ್ದು ದುರಾದೃಷ್ಟಕರವಾಗಿದೆ
ಇಲ್ಲೊಬ್ಬ ಮದ್ಯಪಾನಪ್ರಿಯನೊಬ್ಬ ಮದ್ಯ ಸೇವನೆ ಗೈದು ಅಮಲಿನಲ್ಲಿ ನಿದ್ರೆಗೆ ಜಾರಿಗೊಂಡ ರೀತಿಯಲ್ಲಿ ಇದಾಗಿದ್ದು ಹೆಬ್ರಿಯ ಪತ್ರಕರ್ತ ರೊಬ್ಬರು ಆ ದೃಶ್ಯಾವಳಿಯನ್ನು ಸೆರೆ ಹಿಡಿದಿದ್ದಾರೆ.
ಸಂಬಂಧ ಪಟ್ಟ ಇಲಾಖಾಧಿಕಾರಿಗಳು ಇದರತ್ತ ಗಮನ ಹರಿಸುವುದು ಒಳಿತ್ತೆಂಬ ಆಗ್ರಹವು ಸಾರ್ವಜನಿಕ ವಲಯದಿಂದ ಕೇಳಿಬರುತ್ತದೆ.






































