- ವರದಿ : ಆರ್.ಬಿ.ಜಗದೀಶ್
ಇದು ಅಪಾಯಕಾರಿ ರಸ್ತೆ ! ಎಚ್ಚರ ಕಟ್ಟೆಚ್ಚರ !!
ಇದು ಸ್ಮಾರ್ಟ್ ಸಿಟಿ ಮಂಗಳೂರಿನ ಕರ್ಮಕಾಂಡ
ಮಂಗಳೂರು: ಒOದು ಯೋಜನೆ ಪರಿಪೂರ್ಣವಾಗುವ ಮೊದಲೇ ನೂರಾರು ವಿಘ್ನುಗಳು ಎದುರಾಗುತ್ತಿದೆ. ರಸ್ತೆಯಲ್ಲಿ ಹೋಗಬೇಕಾದರೆ ಜೀವಕ್ಕೂ ಸಂಚಕಾರ ಎದುರಾಗುವುದು ಗ್ಯಾರೆಂಟಿ.
-ಹೌದು ಈ ರಸ್ತೆಯಲ್ಲಿ ಪ್ರತಿದಿನ ಹಲವು ಮಂದಿ ಸ್ಕಿಡಾಗಿ ಬೀಳುತ್ತಾರೆ. ಗಾಯಗೊಳ್ಳುತ್ತಿರುವುದು ಸರ್ವೇ ಸಾಮಾನ್ಯ.
ಮಂಗಳೂರು ಬಿಜೈ ಕಾಪಿಕಾಡು ೩ನೇ ರಸ್ತೆಯಾಗಿ ಲೇಡಿಹಿಲ್ ಅಥವಾ ಚಿಲಿಂಬಿ ಸಂಪರ್ಕಿಸುವ ಕುದ್ಮಲ್ ರಸ್ತೆಯ ಸ್ಥಿತಿ-ಗತಿ ಇದಾಗಿದೆ.
ದಲಿತೋದ್ಧಾರ ಕುದ್ಮಲ್ ರಂಗರಾವ್ ಅವರ ಸ್ಮರಣಾರ್ಥವಾಗಿ ಮಹಾನಗರ ಪಾಲಿಕೆ ಈ ರಸ್ತೆಗೆ ನಾಮಕರಣ ಗೊಳಿಸಿ ವರ್ಷಗಳೇ ಸಂದಿದೆ. ಇದೇ ಪರಿಸರದಲ್ಲಿ ದಲಿತ ಸಮುದಾಯದ ಮನೆಗಳು ಗಣನೀಯ ಸಂಖ್ಯೆಯಲ್ಲಿ ಇವೆ.
ಕೂಡು ರಸ್ತೆಯಾಗಿರುವುದರಿಂದಾಗಿ ಇದೇ ರಸ್ತೆಯಾಗಿ ಪ್ರತಿದಿನ ದ್ವಿಚಕ್ರ, ಲಘುವಾಹನಗಳ ಓಡಾಟ ನಡೆಯುತ್ತಿದೆ. ಒಂದೆಡೆ ತಿರುವು ಮುರುವು ಮತ್ತೊಂದೆಡೆಯಲ್ಲಿ ಇಳಿಜಾರಿನಿಂದ ಕೂಡಿದ ಕುಡ್ಮಲ್ ರಸ್ತೆಯಲ್ಲಿ ಪೈಪ್ ಅಳವಡಿಸಲು ಹಲವು ತಿಂಗಳ ಹಿಂದೆ ರಸ್ತೆಯನ್ನು ಅಗೆಯಲಾಗಿತ್ತು. ಬೃಹತ್ ಗಾತ್ರದ ಪೈಪ್ ಅಳವಡಿಸಿ ತಿಂಗಳು ಹಲವು ಸಂದಿದೆ. ತೆಗೆಯಲಾಗಿದ್ದ ಹೊಂಡಕ್ಕೆ ಸಮರ್ಪಕವಾಗಿ ಮಣ್ಣು ತುಂಬಿಸದೇ ಹೋದುದರಿಂದ ಮಳೆಗಾಲದಲ್ಲಿ ರಸ್ತೆ ಪೂರ್ತಿ ಹೊಂಡಮಯವಾಗಿದೆ.
ಇಳಿಜಾರು ಪ್ರದೇಶದಲ್ಲಿ ಪ್ರತಿದಿನ ವಾಹನಗಳು ಅಘಘಾತವಾಗಿತ್ತಿದ್ದು, ಅದರ ಪ್ರಯಾಣಿಕರು ಗಾಯಗೊಳ್ಳುತ್ತಿದ್ದಾರೆ. ಗಾಯಾಳುಗಳನ್ನು ಉಪಚರಿಸುವುದೇ ಸ್ಥಳೀಯರ ದಿನಚರಿಯೂ ಆಗಿದೆ.


ಅಶಕ್ತರಿಗೆ ತೀರಾಭಂಗ…
ಪರಿಸರದಲ್ಲಿ ಹಲವು ಮಂದಿ ಅಶಕ್ತರು ವಾಸವಾಗಿದ್ದಾರೆ. ಅವರಲ್ಲಿ ವೃದ್ಧರು, ರೋಗಿಸ್ಥರು ಒಳಗೊಂಡಿದ್ದು, ತುರ್ತು ಸಂದರ್ಭದಲ್ಲಿ ಅವರಿಗೆ ಆಸ್ಪತ್ರೆಗೆ ಅಥವಾ ಸ್ಥಳೀಯವಾಗಿ ಹೋಗಿ ಬರಲು ತ್ರಾಸದಾಯವಾಗಿದೆ.
ಕುದ್ಮಲ್ ರಸ್ತೆಯ ಸಮಸ್ಸೆಯಿಂದಾಗಿ ಹಲವಾರು ಮಂದಿ ಸಂಕಷ್ಟಕ್ಕೊಳಗಾಗಿರುವುದರಿಂದ ಮಂಗಳೂರು ಮಹಾನಗರ ಪಾಲಿಕೆಯ ಆಡಳಿತ ವರ್ಗವು ರಸ್ತೆ ದುರಸ್ಥಿಗೆ ಮಂದಾಗಬೇಕಾಗಿದೆ ಎಂದು ಆಗ್ರಹವು ಕೇಳಿಬರುತ್ತಿದೆ.
ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಅದ್ಯತೆ
-ಸುಧೀರ್ ಶೆಟ್ಟಿ ಕಣ್ಣೂರು ಮೇಯರ್ ಮಂಗಳೂರು ಮಹಾ ನಗರ ಪಾಲಿಕೆ

ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಆಗಿರುವ ಸುಧೀರ್ ಶೆಟ್ಟಿ ಕಣ್ಣೂರು ಅವರು ಇದೇ ವಾಡ್ ೯ ಪ್ರತಿನಿಧಿಸಿದ್ದಾರೆ. ಅವರನ್ನು ಮಾಧ್ಯಮವು ಸಂಪರ್ಕಿಸಿದ್ದು, ಈ ಕುರಿತು ಅವರು ಹೇಳಿಕೆಯೊಂದನ್ನು ನೀಡಿ, ಕುದ್ಮಲ್ ರಸ್ತೆಯ ಕುರಿತು ಈಗಾಗಲೇ ಹಲವು ದೂರುಗಳು ಬಂದಿರುವುದಂತು ನಿಜ. ದೂರಾದೃಷ್ಠಿ ಇಟ್ಟುಕೊಂಡು ಕುದ್ಮಲ್ ರಸ್ತೆಯನ್ನು ಕಾಂಕ್ರೀಟ್ ಕರಣ ಮಾಡುವುದಕ್ಕೆ ಯೋಜನೆ ಹಮ್ಮಿ ಕೊಳ್ಳಲಾಗಿದೆ. ಮಳೆಗಾಲ ಮುಗಿದ ಬಳಿಕ ಕಾಮಗಾರಿ ಶುರುಮಾಡುವುದಾಗಿದೆ ಮಾಹಿತಿ ನೀಡಿದ್ದಾರೆ.





















