ಇಡೀ ವಿಶ್ವಕ್ಕೆ ಸಂಸ್ಕೃತಿ, ಸಂಸ್ಕಾರದ ರಾಯಭಾರಿ ಭಾರತ: ಇಮ್ಮಡಿ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ; ಹಿಂದು ಯುವತಿಗೆ ಅಮಲು ಪದಾರ್ಥ ನೀಡುವ ಧೈರ್ಯದ ಹಿಂದಿರುವ ಶಕ್ತಿ ಯಾವುದು?-ಶಾಸಕ ವಿ.ಸುನೀಲ್ ಕುಮಾರ್

Picture of RB NEWS

RB NEWS

Bureau Report

ಕಾರ್ಕಳ: ಇಡೀ ವಿಶ್ವಕ್ಕೆ ಸಂಸ್ಕೃತಿ, ಸಂಸ್ಕಾರದ ರಾಯಭಾರಿಯಾಗಿದ್ದ ಭಾರತದಲ್ಲಿ ಪ್ರಸಕ್ತ ಕಾಲಘಟ್ಟದಲ್ಲಿ ಅತ್ಯಾಚಾರ ಪ್ರಕರಣಗಳು ಎಗಿಲ್ಲದೇ ನಡೆಯುತ್ತಿರುವುದು ದುರದೃಷ್ಟಕರವಾಗಿದೆ. ನಾಗರಿಕರಲ್ಲಿ ಸಂಸ್ಕಾರ,ಸಂಸ್ಕೃತಿ ಕ್ಷೀಣಿಸುತ್ತಿರುವುದು ಇದಕ್ಕೆಲ್ಲ ಕಾರಣವಾಗಿದೆ. ಪ್ರತಿಯೊಬ್ಬ ಭಾರತೀಯ ನಾಗರಿಕನು ಸಂಸ್ಕಾರ, ಸಂಸ್ಕೃತಿಯನ್ನು ಮನೆಯಿಂದಲೇ ಕಲಿತುಕೊಳ್ಳಬೇಕು. ಭಾರತೀಯ ಸಂಸ್ಕೃತಿಯಲ್ಲಿ ಅನಾದಿ ಕಾಲದಿಂದಲೂ ಮಾತೃಶಕ್ತಿಗೆ ಗೌರವ ನೀಡುತ್ತಾ ಬಂದಿದೆ. ಮಾತೃಪ್ರಧಾನ ಕುಟುಂಬ ದೇಶ ಇದಾಗಿದೆ. ಮೊದಲ ದೇವತೆ ಸ್ತ್ರೀ ಆಗಿದ್ದಾಳೆ. ಕಣ್ಣಿಗೆ ಕಾಣುವ ದೇವತೆ ಅಂದರೆ ತಾಯಿಯಾಗಿದ್ದಾಳೆ. ತ್ಯಾಗಮೂರ್ತಿಗಳೆಂದರೆ ಅದು ಭಾರತೀಯ ನಾರಿಯರು. ಶ್ರೀ ಕೃಷ್ಣನು ಇಡೀ ಸ್ತ್ರೀ ಕುಲದ ರಕ್ಷಕ. ಆತನ ಜನ್ಮಾಷ್ಟಮಿ ದಿನದಂದು ಸ್ತ್ರೀಯ ಮಾನ ಕಾಪಾಡಲು ಹೋರಾಟ ನಡೆಸಬೇಕಾಗಿರುವುದು ನಮ್ಮೆಲ್ಲರ ದುರ್ದೈವವಾಗಿದೆ ಎಂದು ಚಿತ್ರದುರ್ಗ ಭೋವಿ ಮಠದ ಇಮ್ಮಡಿ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.

ಕಾರ್ಕಳದ ಯುವತಿಯೊಬ್ಬಳ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಹಿಂದು ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಮಂಜುನಾಥ ಪೈ ಸಭಾಂಗಣದಲ್ಲಿ ಆಯೋಜಿಸಿದ ಖಂಡನಾ ನಿರ್ಣಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು, ಪೂಜ್ಯನೀಯ ಸ್ಥಾನದಲ್ಲಿ ಇರುವ ಮಹಿಳೆಯರ ಮೇಲೆ ಅತ್ಯಾಚಾರಗೈಯುವ ವ್ಯಕ್ತಿಗಳ ವಿರುದ್ಧ ಸರಕಾರ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲೇ ಬೇಕು. ಸಂಸ್ಕಾರದ ಕೊರತೆಯಿಂದಾಗಿ ಸಮಾಜವು ಹೆಣ್ಣನ್ನು ಕೇವಲ ಭೋಗದ ವಸ್ತುವಾಗಿ ನೋಡಿಕೊಳ್ಳುತ್ತಿಳ್ಳುತ್ತಿದೆ. ಭಯ,ಭಕ್ತಿ ಒಂದೆಡೆಯಲ್ಲಿ ಇರಬೇಕು. ಆದರೆ ಭಯ ಮಾಯವಾಗಿದೆ. ಯಾಂತ್ರಿಕ ಭಕ್ತಿ ಹೆಚ್ಚಾಗಿದೆ. ಕಾನೂನು ಪರಿಪಾಲನೆ ಪ್ರತಿಯೊಬ್ಬ ನಾಗರಿಕನ ಹೊಣೆಗಾರಿಕೆಯಾಗಿದೆ. ಆ ಮೂಲಕ ಶಾಂತಿ,ಸೌಹಾರ್ದತೆ ನೆಲೆಗೊಳ್ಳಲು ಸಾಧ್ಯವಾಗುತ್ತದೆ. ಡ್ರಗ್ಸ್ ಮಾಫಿಯಾ ರಾಜ್ಯದಲ್ಲಿ ಅವ್ಯಾಹತವಾಗಿ ಬೇರೂರಿ ನಿಂತಿರುವುದು ಆತಂಕಕಾರಿಯಾಗಿದೆ ಎಂದರು.

ಶಾಸಕ ವಿ.ಸುನೀಲ್ ಕುಮಾರ್ ಮಾತನಾಡಿ, ಇತ್ತೀಚಿಗೆ ಕಾರ್ಕಳದಲ್ಲಿ ಯುವತಿಯ ಮೇಲೆ ನಡೆದಿರುವ ಪೈಶಾಚಿಕ ಕೃತ್ಯದಿಂದ ನಾಗರಿಕ ಸಮಾಜವನ್ನೇ ತಲೆ ತಗ್ಗಿಸುವಂತೆ ಮಾಡಿದೆ. ಹಿಂದುಗಳ ಮೇಲೆ ದೇಶ, ವಿದೇಶಗಳಲ್ಲಿ ದೌರ್ಜನ್ಯ ನಡೆಯುತ್ತಿದ್ದಾಗ ಜನಜಾಗೃತಿ ಸಭೆ ನಡೆಯುತ್ತಿತ್ತು. ದುರದೃಷ್ಟಕರವಾಗಿ ಈ ಘಟನೆಯು ಈಗ ಕಾರ್ಕಳದಲ್ಲಿ ನಡೆದಿದೆ. ಲವ್ ಜಿಹಾದ್, ಡ್ರಗ್ಸ್ ಬಗ್ಗೆ ಸರಕಾರ ಮೃಧು ಧೋರಣೆ ನಡೆಸಿದ ಪರಿಣಾಮ ಇಂತಹ ಘಟನೆಗಳು ಮರುಕಳಿಸುತ್ತಿದೆ. ಮುಂದೆ ಗ್ರಾಮ ಗ್ರಾಮಗಳಿಗೆ ನಡೆದರೂ ಅಚ್ಚರಿ ಪಡಬೇಕಿಲ್ಲ. ಮುಸ್ಲಿಂ ಯುವಕರೊಂದಿಗೆ ನಡೆಯುತ್ತಿರುವ ಲವ್ ಪ್ರಕರಣದಲ್ಲಿ ಒಳಗಾದ ಯುವತಿಯರ ಶವಗಳು ಫಿಡ್ಜ್ ನೊಳಗೆ ಕಾಣುತ್ತಿದೆ. ಲವ್ ಜಿಹಾದ್ ಕುರಿತು ಕೇರಳ ನ್ಯಾಯಾಲಯವೇ ಸಂದೇಶ ನೀಡಿದೆ. ಹಿಂದು ಯುವತಿಗೆ ಅಮಲು ಪದಾರ್ಥ ನೀಡುವ ಧೈರ್ಯದ ಹಿಂದಿರುವ ಶಕ್ತಿ ಯಾವುದು? ಇದು ಆ ಸಮಾಜಕ್ಕೂ ಮುಂದಿನ ದಿನಗಳಲ್ಲಿ ಅಪಾಯದ ಕರೆಗಂಟೆಯಾದಿತ್ತು. ಘಟನೆಯ ಬಳಿಕೆ ಹೇಳಿಕೆ ನೀಡುವ ಮುಸ್ಲಿಂ ಮುಖಂಡರು ಅದಕ್ಕೂ ಮುನ್ನ ಎಚ್ಚೆತ್ತುಕೊಳ್ಳಬೇಕು. ನಿಮ್ಮ ಸಮಾಜದ ಯುವಕರನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಿ ಎಂದು ಶಾಸಕ ವಿ.ಸುನೀಲ್ ಕುಮಾರ್ ಎಚ್ಚರಿಕೆ ನೀಡಿದರು

ಶಾಲಾ ಸಮವಸ್ತ್ರವನ್ನು ದಿಕ್ಕರಿಸಿ ಹಿಜಾಬ್ ವಿಚಾರದಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿಯರು ಸುಪ್ರೀಂ ಕೋರ್ಟ್ ನಲ್ ಅರ್ಜಿ ಹಾಕುತ್ತಾರೆ ಎಂದರೆ ಅದರ ಹಿಂದಿರುವ ಆರ್ಥಿಕ ಶಕ್ತಿಯ ನೆರವು ನೀಡಿದವರು ಯಾರು ಎಂಬುವದನ್ನು ಅರಿತುಕೊಳ್ಳಲೇ ಬೇಕು. ಷರಿಯತ್ ಕಾನೂನೇ ಬೇಕು ಎಂದು ವಾದಿಸುವ ನೀವುಗಳು ಮೊನ್ನೆ ನಡೆದ ಘಟನೆಯ ಆರೋಪಿಯನ್ನು ಬಂಗ್ಲೆಗುಡ್ಡೆ ಜಂಕ್ಷನ್‌ನಲ್ಲಿ ಹೊಡೆಯಲು ಸಿದ್ಧರಿದ್ದೀರಾ ಎಂದು ಸವಾಲು ಹಾಕಿದರು. ನೀವುಗಳು ನಂಬಿರುವ ಷರಿಯತ್ ನಲ್ಲಿ ಏನಿದೆ ಎಂತಾ ನಿಮಗೆ ಗೊತ್ತಿದೆಯಾ? ಕಳವುಗೈದವರ ಕೈ ಕಡಿಯ ಬೇಕು. ಅತ್ಯಾಚಾರಿಗಳನ್ನು ಕಲ್ಲು ಹೊಡೆದು ಸಾಯಿಸಬೇಕು ಎಂದು ತಿಳಿಸಿದೆ. ಮೊದಲಾಗಿ ದೇಶದ ಸಂವಿಧಾನ ಒಪ್ಪಿ ಬದುಕು ನಿರ್ವಹಿಸಿ ಎಂದು ಸಲಹೆ ನೀಡಿದರು.

ಮಂಗಳೂರಿನ ಪೊಲೀಸ್ ಠಾಣೆಯನ್ನು ಹೊತ್ತಿಸುವ ಪ್ರಯತ್ನ ನಡೆದಾಗ, ಬೆಂಗಳೂರಿನ ದಲಿತ ಶಾಸಕನ ಮನೆಗೆ ಬೆಂಕಿ ಹಚ್ಚಿದಾಗ ಮೊದಲಿಗೆ ಧ್ವನಿ ಎತ್ತಿದವರು ಹಿಂದು ಪರ ಸಂಘಟನೆಗಳು. ಖಾಕಿಗೆ ಖಾಕಿಯಾಗಿ ಕೆಲಸ ಮಾಡಬೇಕು. ಪೊಲೀಸರ ಕರ್ತವ್ಯಕ್ಕೆ ಸರಕಾರ ಹಸ್ತಕ್ಷೇಪ ಮಾಡಬಾರದು ಎಂದರು.

ಮುಂಬಯಿ ಉದ್ಯಮಿ, ಜನಪರ ಹೋರಾಟಗಾರ ಮಹೇಶ್ ಕುಡುಲ್ಪಾಜೆ ಮಾತನಾಡಿ, ಕಾರ್ಕಳ ಹಿಂದುಗಳ ನೆಲೆಬೀಡಾಗಬೇಕು. ಮುಂದೆ ಇಂತಹ ಘಟನೆಗಳು ಮರುಕಳುಹಿಸಿದರೆ ತಕ್ಕ ಉತ್ತರ ನೀಡುತ್ತೇವೆ, ತಾಳ್ಮೆ ಪರೀಕ್ಷೆ ಬೇಡ, ಧೈರ್ಯಕುಂದದೇ ಹಿಂದು ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ ಎಂದರು.

ಬಜರಂಗದಳ ರಾಜ್ಯ ಸಂಚಾಲಕ ಕೆ.ಆರ್. ಸುನೀಲ್ ಕುಮಾರ್ ಮಾತನಾಡಿ, ಕೃಷ್ಣ ದ್ರೌಪದಿಯ ರಕ್ಷಣೆ ಮಾಡಿರುವುದು ನಮಗೆಲ್ಲರಿಗೂ ಗೊತ್ತೇ ಇದೆ. ಯುವತಿಯ ಅತ್ಯಾಚಾರಕ್ಕೂ ಮುನ್ನ ಆಕೆಗೆ ಡ್ರಗ್ಸ್ ನೀಡಿರುವುದು ಬಯಲಾಗಿದೆ. ಹಿಂದು ಹಿತ ರಕ್ಷಣೆಗಾಗಿ ನಾವೆಲ್ಲರೂ ಒಂದು ಸಂಕಲ್ಪ ಮಾಡಬೇಕು. ಲವ್ ಜಿಹಾದ್, ಮಾದಕ ದ್ರವ್ಯದ ವಿರುದ್ಧ ಹೋರಾಟಕ್ಕೆ ಮುಂದಾಗಬೇಕು. ಪೊಲೀಸ್ ಇಲಾಖೆಯೂ ಇದಕ್ಕಾಗಿ ವಿಶೇಷ ತಂಡ ರಚನೆಯಾಗಬೇಕು ಎಂದರು.

ಮಿತ್ರಪ್ರಭಾ ಹೆಗ್ಡೆ, ಮುನಿಯಪ್ಪ ದೊಡ್ಡಮಣಿ, ಶಂಕರ ಕೋಟ ಉಪಸ್ಥಿತರಿದ್ದರು.
ಬಜರಂಗದಳ ಸಂಚಾಲಕ ಮನೀಷ್ ಸ್ವಾಗತಿಸಿದರು. ಶೈಲೇಶ್ ನಿರೂಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top