ಕಾರ್ಕಳ : ಶ್ರೀ ಕ್ಷೇತ್ರ ಧರ್ಮಸ್ಥಳದ 800ವರ್ಷಗಳ ಇತಿಹಾಸವನ್ನು ತಿಳಿಸುತ್ತಾ ಧರ್ಮಸ್ಥಳದಲ್ಲಿ ಧರ್ಮ ಧರ್ಮಸ್ಥಳಕ್ಕೆ ಬಂದ ಅಣ್ಣಪ್ಪ ಎಂಬ ಸೇವಕನಿಂದ ಆರಂಭಗೊಂಡು ಅಣ್ಣಪ್ಪ ಸ್ವಾಮಿಯಿಂದ ಧರ್ಮಸ್ಥಳದಿಂದ ಇಡೀ ಜಗಕ್ಕೆ ಸತ್ಯ ಧರ್ಮ ನ್ಯಾಯ ನೀತಿ ಸಂದೇಶ ಸಾರಿತು ಇದನ್ನು ಪೂಜ್ಯ ಹೆಗ್ಗಡೆ ದಂಪತಿಗಳು ಇದೀಗ ಪ್ರತಿ ಮನೆಯಲು ದಾನ ಧರ್ಮದೊಂದಿಗೆ ಪ್ರತಿಯೊಬ್ಬರಿಗೂ ಆಶಾ ಕಿರಣ ಆಗೀದ್ದಾರೆ ಎಂದು ಪ್ರಾದೇಶಿಕ ನಿರ್ದೇಶಕ ದುಗ್ಗೆ ಗೌಡ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ. ಸಿ ಟ್ರಸ್ಟ್ ರಿ. ಕಾರ್ಕಳ ತಾಲೂಕು ಮಹಿಳಾ ಜ್ಞಾನ ವಿಕಾಸ ವಿಚಾರಗೋಷ್ಠಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
*✨ ಜ್ಞಾನ ವಿಕಾಸ . ಕಾರ್ಯಕ್ರಮದಿಂದ ಮಹಿಳೆಯರು ಮುಖ್ಯವಾಹಿನಿಗೆ ಬಂದು,ವ್ಯವಹಾರ, ಸ್ವ ಉದ್ಯೋಗ, ಉನ್ನತ ಹುದ್ದೆಗಳನ್ನು ಅಲಂಕಾರಿಸಿದ್ದಾರೆ ಇದು ಮಾತೃಶ್ರೀ ಹೇಮಾವತಿ ಅಮ್ಮನವರ ಕನಸಿನ ಕೂಸು ಅದು ನನಸಾಗಿದೆ…..* *ಯೋಜನೆಯ ಹಿನ್ನೆಲೆಯನ್ನು ಮೆಲುಕು ಹಾಕುಲಾಯಿತು.
*✨ಕಾರ್ಕಳದಲ್ಲಿ ಯೋಜನೆಯನ್ನು ಜನತೆ ಬೆಳೆಸಿದ ರೀತಿಯನ್ನು ನೆನಪು ಮಾಡಿದರು.
*✨ಕಾರ್ಯಕ್ರಮದಲ್ಲಿ ಸ್ವ ಉದ್ಯೋಗ ಮಾಡುತ್ತಿರುವ ಜ್ಞಾವಿಕಸದ ಸದಸ್ಯರು* *ಹಾಕಿದ 25ಕ್ಕೂ ಹೆಚ್ಚಿನ ಸ್ಟಾಲ್ ಗಳನ್ನು ನೋಡಿ ಸಂತಸ ವ್ಯಕ್ತಪಡಿಸುತ್ತಾ,
ಸ್ವ ಉದ್ಯೋಗ ಹೇಗೆ ಲಾಭದಾಯಕ ಹಾಗೂ ವ್ಯಾಪಾರದ ಪರಿಯ ಬಗ್ಗೆ ಮಾಹಿತಿಯನ್ನು ನೀಡಿದರು.
✨ಹದಿಹರೆಯದ ಮಕ್ಕಳನ್ನು ಸಮಾಜದ ಸಭ್ಯ *ನಾಯಕರನ್ನಾಗಿ ಬೆಳೆಸುವಲ್ಲಿ ಮಾತೆಯರ ಪಾತ್ರ ಎನ್ನುವ ವಿಷಯ ಇಂದಿನ ದಿನಗಳಲ್ಲಿ ಅತೀ ಅವಶ್ಯಕ ಮನೆಯೇ ಮೊದಲ ಪಾಠ ಶಾಲೆ* ಆಗಬೇಕೆಂದು ಕರೆ ಕೊಟ್ಟರು.
⭐ ಪುರಸಭೆ ಮುಖ್ಯಾಧಿಕಾರಿ ರೂಪ ಶೆಟ್ಟಿ ರವರು ಯೋಜನೆಯ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಹೇಳಿ ಯೋಜನೆ ಆರಂಭದಲ್ಲಿ ಸಂಘ ಕಟ್ಟಿದ ಪರಿಯನ್ನು ನೆನಪಿಸಿಕೊಂಡರು.
ದೇವಸ್ಥಾನ , ದೈವಸ್ಥಸನಗಳಿಗೆ ಹೋಗುವಾಗ ಮಕ್ಕಳನ್ನು ಜೊತೆ ಕರೆದುಕೊಂಡು ಹೋಗುವುದು ಕೂಡ ಸಂಸ್ಕಾರ ಕಲಿಸುವ ಒಂದು ವಿಧಾನ ಎಂಬುದನ್ನು ತಾಯಂದಿರಿಗೆ ತಿಳಿ ಹೇಳಿದರು.
⭐ಕಾರ್ಯಕ್ರಮದಲ್ಲಿ ರೇಣುಕಾ ಕಣಿಯೂರು ಆರೋಗ್ಯ ನಿರ್ದೇಶಕರುಬಯುವವಾಹಿನಿ ಘಟಕ ಮಾಣಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾಹಿತಿ ನೀಡಿದರು.
⭐ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ 24 ವರ್ಷದ ಕೇಂದ್ರದ ಸಕ್ರೀಯ ಸದಸ್ಯೆ ಸುಮತಿ ಕಾರ್ಯಕ್ರಮದಲ್ಲಿ ತಮ್ಮ ಅನುಭವ ಹಂಚಿಕೊಂಡರು.
⭐ಕಾರ್ಯಕ್ರಮದಲ್ಲಿ ರಮಿತಾ ಶೈಲೇಂದ್ರ ರಾವ್ ಉದ್ಯಮಿ ಹಾಗೂ ಸ್ಥಾಪಕರು ಕರುಣಾಳು ಬಾ ಬೆಳಕು ಪ್ರತಿಷ್ಠನ, ಕುಮುದಾ ಆರೋಗ್ಯ ಸಹಾಯಕರು ಕುಕ್ಕುಂದೂರು, ರಂಗಕಲಾ ನಿರ್ದೇಶಕರಾದ ಸಂದೀಪ್ ಬಾರಡಿ ರವರು ಸ್ಪರ್ಧೆಗಳ ತೀರ್ಪುಗಾರರಾಗಿ ಆಗಮಿಸಿದ್ದರು.
⭐ಕಾರ್ಯಕ್ರಮದಲ್ಲಿ ರಂಗೋಲಿ ಸ್ಪರ್ಧೆ, ಪುಷ್ಪಗುಚ್ಛ ಪ್ರದರ್ಶನ , ಪೌಷ್ಠಿಕ ಆಹಾರ ಪ್ರದರ್ಶನ ಸ್ಪರ್ಧೆ , ಸಾಂಸ್ಕೃತಿಕ ಕಾರ್ಯಕ್ರಮ ಸ್ಪರ್ಧೆ ಏರ್ಪಡಿಸಲಾಗಿತ್ತು ಇದು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನೂ ಆಕರ್ಷಿಸುವಂತೆ ಇತ್ತು.
ವಿಜೇತರಿಗೆ ಪ್ರಾದೇಶಿಕ ನಿರ್ದೇಶಕರು ಬಹುಮಾನ ವಿತರಿಸಿದರು.
⭐ ಉತ್ತಮ ಕೇಂದ್ರ ಗುರುತಿಸಲಾಯಿತು.
⭐ಟೈಲರಿಂಗ್ ತರಬೇತಿ ಪಡೆದ ಸದಸ್ಯರಿಗೆ ಹಾಗೂ ಆಟೋ ತರಬೇತಿ ಪಡೆದ ಸದಸ್ಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು….*
⭐ಜನಮಂಗಳ ಕಾರ್ಯಕ್ರಮದಡಿಯಲ್ಲಿ ವಿಕಲಚೇತನರಿಗೆ ಅವಶ್ಯಕ ಪರಿಕರಗಳನ್ನು ಮಾನ್ಯ ಪ್ರಾದೇಶಿಕ ನಿರ್ದೇಶಕರು ಶ್ರೀಯುತ ದುಗ್ಗೆ ಗೌಡ ಸರ್ ರವರು ಹಸ್ತಾಂತರಿಸಿದರು.
⭐ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಹೇಮಲತಾ , ಜ್ಞಾನ ವಿಕಾಸ ಯೋಜನಾಧಿಕಾರಿ ಅಮೃತ , ಜ್ಞಾನ ವಿಕಾಸ ಸಮನ್ವಯಧಿಕಾರಿ ಸವಿತಾ, ಮೇಲ್ವಿಚಾರಕರಾದ ಮನೋಜ್ ಹೆಗ್ಡೆ , ಗೀತಾ, ತಾಲೂಕಿನ ಜ್ಞಾನ ವಿಕಾಸ ಸೇವಾ ಪ್ರತಿನಿಧಿ ಯವರು ಉಪಸ್ಥಿತಿ ಇದ್ದರು.



































