ಇಂಧನ ತುಂಬಿಸಿ ಧನ ನೀಡದೇ ವಂಚನೆ: ಕಾರಿನ ಮಾಹಿತಿ ಕಲೆ ಹಾಕಿದ ಪೊಲೀಸರು
RB NEWS
Bureau Report
ಇಂಧನ ತುಂಬಿಸಿ ಧನ ನೀಡದೇ ವಂಚನೆ: ಕಾರಿನ ಮಾಹಿತಿ ಕಲೆ ಹಾಕಿದ ಪೊಲೀಸರು
ಕಾರ್ಕಳ : ತಾಲೂಕು ಕಚೇರಿ ಜಂಕ್ಷನ್ ಬಳಿಯ ಅನು ಫಿಲ್ ಎಂ ಆರ್ ಪಿ ಎಲ್ ಪೆಟ್ರೋಲ್ ಬಂಕ್ ನಲ್ಲಿ ಮಹೇಂದ್ರ XUV 300 ನೇ ಕಾರಿಗೆ ಟ್ಯಾಂಕ್ ತುಂಬ ಪೆಟ್ರೋಲ್ ತುಂಬಿಸಿ ನಗದು ಪಾವತಿಸದೇ ವಂಚಿಸಿ ಪರಾರಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಪತ್ತೆ ಹಚ್ಚುವಲ್ಲಿ ನಗರ ಪೊಲೀಸರು ಯಶಸ್ಸು ಕಂಡಿದ್ದಾರೆ.
2024 ಅಗಸ್ಟ್ 29 ರಂದು ಬೆಳಗಿನ ಜಾವ 2:50 ಗಂಟೆಗೆ ಈ ಘಟನೆ ನಡೆದಿತ್ತು.
ಆರೋಪಿಯ ಕೆವಿ 20 ಎಮ್ ಇ 8212 ನೇ ನಂಬ್ರದ ಮಹೇಂದ್ರ XUV 300 ನೇ ಕಾರಿಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಬಂದಿದ್ದರು. 4253.88 ರೂಪಾಯಿ ಪೆಟ್ರೋಲ್ ಹಾಕಿಸಿಕೊಂಡ ಬಳಿಕ ಪೆಟ್ರೋಲ್ ಹಾಕಿಸಿದರು. ಅಲ್ಲಿನ ಸಿಬ್ಬಂದಿ ಆಕಾಶ್ ಅವರಲ್ಲಿ ಯುಪಿಐ ಸ್ಕ್ಯಾನರ್ ತರುವಂತೆ ಹೇಳಿದ್ದು ಅದರಂತೆ ಯುಪಿಐ ಸ್ಕ್ಯಾನರ್ ಅನ್ನು ತರಲು ಹೋದಾಗ ಆರೋಪಿ ಕಾರನ್ನು ಚಲಾಯಿಸಿಕೊಂಡು ಹೋಗಿದನು. ಪೆಟ್ರೋಲ್ ಹಾಕಿದ ರೂ 4253.88 ರೂಪಾಯಿ ಹಣವನ್ನು ನೀಡದೇ ಮೋಸ ಮಾಡಿದ್ದನು.
ನಗರ ಠಾಣಾಧಿಕಾರಿ ನಾಗೇಶ್
ಸಿಸಿ ಕ್ಯಾಮರದಿಂದ ಮಾಹಿತಿ
ಆರೋಪಿ ಚಲಾಯಿಸಿದ ಕಾರು ಪೆಟ್ರೋಲ್ ಬಂಕ್ ಎದುರುಗಡೆಯ ರಸ್ತೆಯಾಗಿ ಸ್ವಲ್ಪ ಮುಂದಕ್ಕೆ ಹೋಗಿದ್ದು, ಕೆಲವೇ ಕ್ಷಣದಲ್ಲಿ ಮತ್ತೇ ಹಿಂತಿರುಗಿದೆ. ಆ ವೇಳೆಗೆ ನಾಯಿಗಳು ಕಾರನ್ನು ಹಿಂಮೆಟ್ಟಿಸಲು ಮುಂದಾಗಿ ಬೊಗಳಿರುವ ದೃಶ್ಯಾವಳಿ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಪೆಟ್ರೋಲ್ ಹಾಕಿ ಹಣ ಪಾವತಿಸದೇ ಕುಕ್ಕುಂದೂರು ಗಣಿತ ನಗರದ ಮೂಲಕವಾಗಿ ಹಿರಿಯಡ್ಕ ಮಾರ್ಗವಾಗಿ ಹಾದು ಹೋದ ಕಾರಿನ ಕುರಿತು ಎರಡು ಕಡೆಗಳಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರದಲ್ಲೂ ಸೆರೆಯಾಗಿತ್ತು. ಕಾರು ಹೊರಟು ಹೋದ ವೇಳೆ ಹಾಗೂ ಗಣಿತ ನಗರ ಮತ್ತು ಹಿರಿಯಡ್ಕ ಮಾರ್ಗವಾಗಿ ಹಾದೂ ಹೋದ ವಾಹನಗಳ ವಿವರ ಪಡೆದ ಪೊಲೀಸರು ಆರೋಪಿ ಚಲಾಯಿಸಿ ವಾಹನ ಪತ್ತೆ ಹಚ್ಚಲು ಸಹಕಾರಿಯಾಗಿತ್ತು. ಬಂಟಕಲ್ಲು ವ್ಯಕ್ತಿಯ ಅಧೀನದಲ್ಲಿ ಇರುವ ವಾಹನವೆಂಬ ಮಾಹಿತಿ ಲಭಿಸಿದೆ.