ಇಂದು ನಮಗೆ ಮಹೋತ್ಸವವು

Picture of RB NEWS

RB NEWS

Bureau Report

ಇಂದು ನಮಗೆ ಮಹೋತ್ಸವವು
(ಹರಿಗುರು ಗುಣಗಾನ)

ನಗುಮೊಗದ ಆ ! ಸುಂದರ ರೂಪ!
ಮಗು ಮನಸಿನ ! ಹೃದಯದಾ ದೀಪ!
ದಣಿವರಿಯದೆ ಸೇವೆಯ ನಡೆಸಿದ! ಸಮಾಜೋದ್ಧಾರಕ!
ಗುರು ಶ್ರೀ ಸುಧೀಂದ್ರರೇ ! ನೀವೇ ನಮಗೆ! ಆದರ್ಶ ಪ್ರೇರಕ!! ಪಲ್ಲವಿ!!

ಪ್ರಜ್ವಲಿಸಲಿ ಗುರುವೇ ನಿಮ್ಮ! ಮಾರ್ಗದರ್ಶನಗಳು!
ಉಜ್ವಲವಾಗುತಲೇ ಬೆಳಗಲಿ !ನಿಮ್ಮ ಪ್ರೀತಿಯ ಶಿಷ್ಯ ವೃಂದವು!! ಅನು ಪಲ್ಲವಿ!!

ಧರೆಗೆ ಇಳಿದು ಬಂದು! ಅರಿತು ಧರಿಸಿದ ಜ್ಞಾನವನು!
ಹರಿಯ ಸೇವೆಯೆಂದೆಣಿಸಿ ನಮಗೆ! ಹರಸಿ ಹರಿಸಿದವರು ನೀವು!
ಪರಿಪರಿಯ ಸಂಕಷ್ಟಗಳ! ಸುಳಿಯೊಳಗೆ ಸಿಲುಕಿದವಗೆ!
ಸರಿ ಮಾರ್ಗದರ್ಶನವ ಕರುಣಿಸುತಲಿ! ಬದುಕ ನಡೆಸಲು ಕಲಿಸಿದವರು ನೀವು!! ೧ !!

ಗೌಡ ಸಾರಸ್ವತರು ನಾವೆಲ್ಲಾ ! ಏರಿರುವೆವು ಉನ್ನತಿಯ ಶಿಖರಕೆ !
ಪ್ರೌಢರಾದೆವು ನಾವು! ನಿಮ್ಮ ಮಾರ್ಗದರ್ಶನದಿಂದಲಿ!
ಜಡತೆ ತ್ಯಜಿಸಿ ! ಭಕುತಿಮಾರ್ಗವ! ಕಲಿಸಿದ ನಮಗೆ!
ಗುರುವೇ ನೀವೇ ಶಕ್ತಿಯು! ನೀವೇ ನಮಗೆ ಭಕ್ತಿಯು!! ೨ !!

ಹೇಗೆ ಮರೆಯಲಿ ನಾವು! ನಿಮ್ಮ ಆ ಸುಂದರ ಒಡನಾಟವ!
ಬಾಗಿ ನಮಿಸುವೆವು ನಾವು! ನಿಮ್ಮ ಪಾದಾರವಿಂದವ!
ಮರಳಿ ಬನ್ನಿರಿ ಗುರುವೇ ! ಮರು ಜನುಮವೆತ್ತು!
ಕಾಯುವೆವು ನಾವೆಲ್ಲಾ! ಆ ಅಂದದಾ ಚಂದದ ಹೊತ್ತು!! ೩ !!

ಇಂದು ನಿಮ್ಮ ಜನ್ಮ ಶತಾಬ್ದಿ ಸಂಭ್ರಮವು!
ವಂದಿಸುವೆವು ನಿಮ್ಮ ದಿವ್ಯ! ಪಾದಾರವಿಂದಕೆ ನಾವು!
ಬಂದು ಸೇರಿದೆವು ಮಂದಿಗಳು ನಾವೆಲ್ಲಾ! ಹರಿಗುರು ಶ್ರೀ ಸಂಯಮೀಂದ್ರರ ಕರೆಗಿಂದು!
ಒಂದಾಗಿ ಸಂಭ್ರಮಿಸುವೆವು ಗುರುವೇ! ಇಂದು ನಮಗೆ! ದಿವ್ಯ ಮಹೋತ್ಸವವು!! ೪ !!

 *ಭಕ್ತಿ ಪೂರ್ವಕ ರಚನೆ*

ಕಾಂತಾವರ ಶಿವಾನಂದ ಶೆಣೈ ಕಾರ್ಕಳ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top