ಆ. 10 ರಂದು ಬೆಳುವಾಯಿಯಲ್ಲಿ ರೋಟರಿ ಜಿಲ್ಲೆಯ ವಿಸ್ತಾರ ಸೆಮಿನಾರ್
ವಿದ್ಯಾಭ್ಯಾಸ, ಆರೋಗ್ಯ, ಪ್ರಕೃತಿ ಸಂಬಂಧಿತ ಅಭಿವೃದ್ಧಿಗಾಗಿ- ರೋಟರಿ ನಿರಂತರ ಪ್ರಯತ್ನ
ಮೂಡುಬಿದಿರೆ: ಬೆಳುವಾಯಿಯ ಖಂಡಿಗೆ ಗ್ರೀನ್ಸ್, ಹಾಲ್ ನಲ್ಲಿ ರೋಟರಿ ಅಂತರಾಷ್ಟ್ರೀಯ ಸೇವಾ ಸಂಸ್ಥೆಯ ವಿಸ್ತಾರ ಸೆಮಿನಾರ್ ಆಗಸ್ಟ್ 10 ರಂದು ನಡೆಯಲಿದೆ.
ರೋಟರಿ ವಲಯ ಒಂದರಿಂದ ಐದರ ತನಕದ 44 ಕ್ಲಬ್ ಗಳು ಭಾಗವಹಿಸುತ್ತಿರುವ । ಈ ಸೆಮಿನಾರ್ ರನ್ನು ಮುಂಬೈಯ ಖ್ಯಾತ ಎಲುಬು ತಜ್ಞ 2018 ಪೋಲಿಯೋ ಪೀಡಿತ ರಿಗೆ ಸರ್ಜರಿ ಮಾಡಿದ ಡಾಕ್ಟರ್ ದೀಪಕ್ ಪುರೋಹಿತ್ ನಿರ್ವಹಿಸಲಿದ್ದಾರೆ.

ಪ್ರಸ್ತುತ ಜಿಲ್ಲೆಯ ಹಲವಾರು ಆಸ್ಪತ್ರೆಗಳನ್ನು ಮೂರುವರೆ ಕೋಟಿಗೂ ಅಧಿಕ ಸಹಾಯಧನದಲ್ಲಿ ಬ್ಲಡ್ ಬ್ಯಾಂಕ್, ಡಯಾಲಿಸಿಸ್ ಇತ್ಯಾದಿ ಉಪಕರಣದ ಮೂಲಕ ಅಭಿವೃದ್ಧಿಪಡಿಸಲಾಗಿದೆ. ಜಿಲ್ಲೆಯ ಕ್ಲಬ್ ಗಳ ಸಂಖ್ಯೆಯನ್ನು ಹೆಚ್ಚಿಸಿ ಸುಮಾರು ನಾಲ್ಕು ಸಾವಿರಕ್ಕೆ ಸದಸ್ಯರನ್ನು ಮುಟ್ಟಿಸುವ ಗುರಿ ಹೊಂದಲಾಗಿದೆ ಎಂದು ರೋಟರಿ ಜಿಲ್ಲೆ 31 81ರ ಡಿಸ್ಟ್ರಿಕ್ಸ್ ಗವರ್ನರ್ ವಿಕ್ರಮ ದತ್ತ ಅಗಸ್ಟ್ ಏಳರಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.






































