ಆ. 10ರಂದು ಪ್ರತಿಭಾ ಪುರಸ್ಕಾರ ಮತ್ತು ಆಟಿಡೊಂಜಿ ಕೆಸರ್ದಕೂಟ
ಕಾರ್ಕಳ: ಬಂಟರ ಯಾನೆ ನಾಡವರ ಮಾತೃ ಸಂಘ(ರಿ) ಮಂಗಳೂರು ಕಾರ್ಕಳ,ಹೆಬ್ರಿ ತಾಲೂಕು ಸಮಿತಿ, ಕಾರ್ಕಳ ತಾಲೂಕು ಬಂಟ ಮಹಿಳಾ ಸಂಘ ಹಾಗೂ ಯುವ ಬಂಟರ ಸಂಘ ಕಾರ್ಕಳ ಇದರ ಸಹಭಾಗಿತ್ವದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಆಟಿಡೊಂಜಿ ಕೆಸರ್ದಕೂಟವು ಆ. 1೦ರಂದು ಕಾರ್ಕಳ ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸಾನದ ವಠಾರದಲ್ಲಿ ಜರುಗಲಿರುವುದು.
ಮಂಗಳೂರು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ಕುಮಾರ್ ರೈ ಮಾಲಾಡಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಸಿ.ಎ.ಅಶೋಕ್ ಶೆಟ್ಟಿ ಎಂ ಉದ್ಘಾಟಿಸಲಿದ್ದಾರೆ.
ಸಾಧಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.
ಎಸ್ಎಸ್ಎಲ್ಸಿ ,ಪಿಯುಸಿಯಲ್ಲಿ ಶೇ.೯೦ ಮೇಲ್ಪಟ್ಟು ಅಂಕ ಪಡೆದವರಿಗೆ ಪ್ರತಿಭಾ ಪುರಸ್ಕಾರ ಮತ್ತು ೧೦ನೇ ರ್ಯಾಂಕ್ ಒಳಗೆ ಬಂದವರಿಗೆ ವಿಶೇಷ ರೀತಿಯಲ್ಲಿ ಸನ್ಮಾನಿಸಲಾಗುವುದು.
ಹೊರಾಂಗಣ ಕ್ರೀಡೆಗಳು ಬೆಳಿಗ್ಗೆ ೧೦.೦೦ರಿಂದ ಆರಂಭಗೊಳ್ಳಲಿರುವುದು.
ಪುರುಷರು ವಯಸ್ಸಿನ ಮಿತಿ ಇಲ್ಲದೆ ಆಡುವ ಆಟಗಳು ವಾಲಿಬಾಲ್ (ನಗದು ಟ್ರೋಫಿ)
ಹಗ್ಗ ಜಗ್ಗಾಟ (೭ ಜನರ ಗುಂಪು) (ನಗದು ಮತ್ತು ಟ್ರೋಫಿ)
ಮಹಿಳೆಯರು ವಯಸ್ಸಿನ ಮಿತಿ ಇಲ್ಲದೇ ಆಡುವ ಆಟಗಳು ತ್ರೋ ಬಾಲ್ (ನಗದು ಮತ್ತು ಟ್ರೋಫಿ) ಹಗ್ಗ ಜಗ್ಗಾಟ (೭ ಜನರ ಗುಂಪು) (ನಗದು ಮತ್ತು ಟ್ರೋಫಿ) ಮಕ್ಕಳಿಗೆ ಮತ್ತು ವಯಸ್ಕರಿಗೆ ಮನೋರಂಜನಾ ಕ್ರೀಡೆಗಳು ನಡೆಯಲಿದೆ.


ಈ ಕುರಿತು ಪ್ರಕಾಶ್ ಹೋಟೆಲ್ನಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಕಾರ್ಕಳ ಹೆಬ್ರಿಯ ಬಂಟರ ಯಾನೆ ನಾಡವರ ಸಂಘದ ಸಂಚಾಲಕ ವಿಜಯ ಶೆಟ್ಟಿ ತಿಳಿಸಿದ್ದಾರೆ.
ಕಾರ್ಕಳ ತಾಲೂಕು ಬಂಟ ಮಹಿಳಾ ಸಂಘದ ಅಧ್ಯಕ್ಷೆ ಪೂರ್ಣಿಮಾ ಎನ್ ಹೆಗ್ಡೆ, ಕಾರ್ಕಳ ಯುವ ಬಂಟರ ಸಂಘದ ಅಧ್ಯಕ್ಷ ಅನಿನಾಶ್ ಜಿ.ಶೆಟ್ಟಿ, ಸದಸ್ಯರಾದ ಕುಕ್ಕುಂದೂರು ರವಿ ಶೆಟ್ಟಿ, ಪ್ರಶಾಂತ ಶೆಟ್ಟಿ ಕಾರ್ಕಳ ನ್ಯಾಯವಾದಿ ಸುನೀಲ್ ಶೆಟ್ಟಿ, ಪುರಸಭಾ ನಿವೃತ್ತ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಕಾರ್ಕಳ ತಾಲೂಕು ಬಂಟ ಮಹಿಳಾ ಸಂಘದ ಕೋಶಾದಿಕಾರಿ ಶುಭ ಕಡಂಬ ಮೊದಲಾದವರು ಉಪಸ್ಥಿತರಿದ್ದರು.






































