ಆಹಾರ ಭದ್ರತೆಗಾಗಿ, ರಾಜ್ಯಗಳಿಗೆ ಅನುದಾನ ಹೆಚ್ಚಿಸಲು ಜನವಾದಿ ಮಹಿಳಾ ಸಂಘಟನೆ ಆಗ್ರಹ

Picture of RB NEWS

RB NEWS

Bureau Report

ಉಡುಪಿ : ದಿನನಿತ್ಯ ಆಹಾರ ಧಾನ್ಯ ಮತ್ತು ಅಗತ್ಯವಸ್ತುಗಳ ಬೆಲೆ ಹೆಚ್ಚಳ ಆಗುತ್ತಿದೆ. ಜನರ ಆದಾಯ ಕುಸಿಯುತ್ತಿದೆ. ಈ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನರ ಸಹಾಯಕ್ಕೆ ಧಾವಿಸಬೇಕಾಗಿದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳು ವಿಪರೀತ ತೆರಿಗೆಗಳನ್ನು ಹಾಕುತ್ತಿವೆ. ಕೇರಳದಲ್ಲಿ ನೀಡುತ್ತಿರುವಂತೆ 14 ಅಗತ್ಯ ವಸ್ತುಗಳನ್ನು ಮತ್ತು ಅಡುಗೆ ಗ್ಯಾಸ್ ಸಿಲಿಂಡರ್ ಗಳನ್ನು ಸಬ್ಸಿಡಿ ದರದಲ್ಲಿ ನೀಡಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ, ಉಡುಪಿ ಜಿಲ್ಲಾ ಘಟಕದ ನಿಯೋಗವು ರಾಜ್ಯದಾದ್ಯಂತ ನಡೆಯುತ್ತಿರುವ ಪ್ರತಿಭಟನೆ ಭಾಗವಾಗಿ ಉಡುಪಿ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಮನವಿ ನೀಡಿತು.

ನಿಯೋಗದಲ್ಲಿ ಬಲ್ಕಿಸ್, ನಾಗರತ್ನ ನಾಡಾ, ನಾಡಾ ಗ್ರಾಮ ಪಂಚಾಯತ್ ಸದಸ್ಯೆ ಶೋಭಾ ಮತ್ತಿತರರು ಭಾಗವಹಿಸಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top