ಆಹಾರ ಪದ್ಧತಿಯ ವ್ಯತ್ಯಾಸವೇ ಆರೋಗ್ಯ ಸಮಸ್ಯೆಗೆ ಕಾರಣ

Picture of RB NEWS

RB NEWS

Bureau Report

ಬಂಟ್ವಾಳ : ಆಹಾರ ಪದ್ಧತಿಯ ವ್ಯತ್ಯಾಸವೇ ನಮ್ಮ ಆರೋಗ್ಯ ಸಮಸ್ಯೆಗೆ ಕಾರಣವಾಗಿದೆ. ಸರಿಯಾದ ಆಹಾರ ಪದ್ಧತಿಯ ಜೊತೆಗೆ ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡುತ್ತಾ, ನಮ್ಮ ಪರಿಸರದ ಸ್ವಚ್ಛತೆ ಕಾಪಾಡುವಲ್ಲಿ ಗಮನಹರಿಸೋಣ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಹೇಳಿದರು .

ಉದ್ಘಾಟನೆಯನ್ನು ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ( ರಿ)ಸಿದ್ದಕಟ್ಟೆ ಇದರ ಗೌರವಾಧ್ಯಕ್ಷ ಗೋಪಾಲ್ ಬಂಗೇರ ಮಾಡಿ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪ್ರಸಿದ್ಧ ಆಸ್ಪತ್ರೆಗಳ ವೈದ್ಯರುಗಳನ್ನು ಗ್ರಾಮೀಣ ಪ್ರದೇಶಕ್ಕೆ ಕರೆಸಿ ಜನರ ಆರೋಗ್ಯ ತಪಾಸಣೆ ಮಾಡುವಂತಹ ಕಾರ್ಯ ಮೆಚ್ಚುವಂತದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಹೇಳಿ ಶುಭ ಹಾರೈಸಿದರು.

ಈ ಸಂಧರ್ಭದಲ್ಲಿ ಬಂಟ್ವಳ ತಾಲೂಕಿನಲ್ಲಿ 25 ಕೇಂದ್ರಗಳನ್ನು ಒಳಗೊಂಡಿದ್ದು ಈ ಎಲ್ಲ ಕೇಂದ್ರಗಳ ಧಾಖಲಾತಿ ಒಂದೇ ರೀತಿ ಬೈಂಡ್ ನ್ನು ನೇಸರ ಸಮೃದ್ಧಿ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ಸಾಂಕೇತಿಕ ವಾಗಿ ಜಿಲ್ಲಾ ನಿರ್ದೇಶಕರು ಮಹಾಬಲ ಕುಲಾಲ್ ರವರು ಹಸ್ತಾಂತರ ಮಾಡಿದರು.

  ಕೇಂದ್ರದ ಸದಸ್ಯೆ ವನಿತಾ ಪ್ರಾರ್ಥಿಸಿ,  ಸಿದ್ದಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷರು ರೊ, ಶಿವಯ್ಯ ಎಸ್ ಎಲ್ ಸ್ವಾಗತಿಸಿದರು. 

      ಜ್ಞಾನ ವಿಕಾಸ ಸಮ್ಮನ್ವಾಧಿಕಾರಿ ಶೃತಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.      

  ಕಾರ್ಯಕ್ರಮದಲ್ಲಿ ಸಾಮಾನ್ಯ ರೋಗ ತಪಾಸಣೆ , ಕ್ಯಾನ್ಸರ್ ರೋಗ ತಜ್ಞರು, ಮೂತ್ರ ಶಾಸ್ತ್ರಜ್ಞರು, ಹೃದ್ರೋಗ ತಜ್ಞರು, ಕಿವಿ ಮೂಗು ಮತ್ತು ಗಂಟಲು ತಜ್ಞರು,ಚರ್ಮರೋಗ ತಪಾಸಣೆ ,   ಸ್ತ್ರೀರೋಗ ತಪಾಸಣೆ, ಇ ಸಿ ಜಿ ಚಿಕಿತ್ಸೆ   ಮಾಡಲಾಯಿತು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top