ಆಳ್ವಾಸ್ ವಿದ್ಯಾಗಿರಿಯ ಒಂದೇ ಕ್ಯಾಂಪಸ್ಸಿನ ಎಲ್ಲಾ ಕೋರ್ಸುಗಳಿಗೂ ಪೂರಕ-ಕಳಸಪ್ರಾಯದ ಕಾನೂನು ಮಹಾವಿದ್ಯಾಲಯ ಆರಂಭ
ಐದು ವರ್ಷದ ಬಿಕಾಂ ಎಲ್ ಎಲ್ ಬಿ, ಮೂರು ವರ್ಷದ ಎಲ್ ಎಲ್ ಬಿ ಪದವಿ
ವರದಿ : ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮನ್ನಣೆ ಇರುವ ಸಂಸ್ಥೆಗಳಿಗೆ ಅತ್ಯಂತ ಉತ್ತಮ ಸ್ಪರ್ಧಾತ್ಮಕ ತರಬೇತಿಯನ್ನು ನೀಡುತ್ತಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ತನ್ನ 19 ವಿವಿಧ ಶಿಕ್ಷಣ ಸಂಸ್ಥೆಗಳ ಜೊತೆಗೆ ಅವೆಲ್ಲವೂ ಗಳಿಗೂ ಪೂರಕವಾದ, ಕಳಸ ಪ್ರಾಯದ ಕಾನೂನು ಮಹಾವಿದ್ಯಾಲಯವನ್ನು ಆರಂಭಿಸುತ್ತಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಕಟಿಬದ್ಧವಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವಾ ತಿಳಿಸಿದರು.
ಈ ಮಹಾವಿದ್ಯಾಲಯ ಆಳ್ವಾಸ್ ಒಂದೇ ಕ್ಯಾಂಪಸ್ಸಿನ ಎಲ್ಲಾ ಕೋರ್ಸುಗಳಿಗೂ ನಡುವಿನಲ್ಲಿರುವ ಕಟ್ಟಡದಲ್ಲಿ ಪ್ರಾರಂಭಗೊಳ್ಳುತ್ತಿದೆ. ಮಧ್ಯಮ, ಕೆಳ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣದ ಹೊಸ ಸಾಧ್ಯತೆಗಳನ್ನು ಪರಿಚಯಿಸಿದಂತೆ ಈ ಕಾನೂನು ಮಹಾವಿದ್ಯಾಲಯವು ಕೂಡ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ಸಂಯೋಜನೆಗೊಂಡಿದ್ದು ಬಾರ್ ಕೌನ್ಸಿಲ್ ಆಫ್ ಇಂಡಿಯಾದಿಂದ ಇಂದು ಅನುಮೋದನೆಯನ್ನು ಪಡೆದಿರುತ್ತದೆ.
ಜಿಲ್ಲೆಯಲ್ಲಿ ಈಗಾಗಲೇ ಇರುವ ಐದು ಕಾನೂನು ಮಹಾವಿದ್ಯಾಲಯಗಳೊಂದಿಗೆ ಈ ಆರನೇ ಕಾನೂನು ಮಹಾವಿದ್ಯಾಲಯ ಪ್ರಾರಂಭವಾಗುತ್ತಿರುವುದು ಬಹಳ ಸಂತಸ ಕರ ಸಂಗತಿ. ಐದು ವರ್ಷದ ಬಿಕಾಂ ಎಲ್ಎಲ್ ಬಿ ಪದವಿಯಲ್ಲಿ 60 ವಿದ್ಯಾರ್ಥಿಗಳನ್ನು ಹಾಗೂ ಮೂರು ವರ್ಷದ ಎಲ್ ಎಲ್ ಬಿ ಪದವಿಯನ್ನು 60 ವಿದ್ಯಾರ್ಥಿಗಳ ಮಿತಿಯೊಂದಿಗೆ ಈ ವರ್ಷದಿಂದಲೇ ಆರಂಭಿಸಲು ಅನುಮತಿ ದೊರಕಿರುತ್ತದೆ. ಕಾನೂನು ಶಿಕ್ಷಣದಲ್ಲಿ ಉತ್ತಮ ಅನುಭವ ಹೊಂದಿರುವ ಶಿಕ್ಷಕರನ್ನು ಈಗಾಗಲೇ ನೇಮಿಸಿದ್ದು ಗುಣಾತ್ಮಕ ಶಿಕ್ಷಣಕ್ಕೆ ಮತ್ತೊಮ್ಮೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಕಟಿಬದ್ಧವಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವಾ ತಿಳಿಸಿದರು.

ಪದವಿಯನ್ನು ಪೂರ್ಣಗೊಳಿಸಿದವರು ಮೂರುವರೆಗಳ ಎಲ್ ಎಲ್ ಬಿಗೆ ಹಾಗೂ ದ್ವಿತೀಯ ಪಿಯುಸಿ ವಾಣಿಜ್ಯ ಅಥವಾ ವಿಜ್ಞಾನ ಪೂರೈಸಿದ ವಿದ್ಯಾರ್ಥಿಗಳು 5 ವರ್ಷದ ಬಿಕಾಂ ಎಲ್ ಎಲ್ ಬಿ ಪ್ರವೇಶಕ್ಕೆ ಅರ್ಹರಿರುತ್ತಾರೆ. ಈಗಾಗಲೇ ಸ್ವಸಜ್ಜಿತವಾದ ಕಾನೂನು ಗ್ರಂಥಾಲಯ, ಮೂಟ್ ಕೋರ್ಟ್, ಹಾಗೂ ಇತರ ಎಲ್ಲ ಸೌಕರ್ಯಗಳೊಂದಿಗೆ ಕಾಲೇಜು ಸಜ್ಜಾಗಿದೆ. ಕಾನೂನು ಪದವೀಧರರು ನ್ಯಾಯವಾದಿಗಳಾಗಿ, ಕಂಪನಿಗಳಲ್ಲಿ ಸಲಹೆಗಾರರಾಗಿ, ವ್ಯವಹಾರ ಆಡಳಿತಾಧಿಕಾರಿಗಳಾಗಿ, ನ್ಯಾಯಾಂಗದ ವಿವಿಧ ಹುದ್ದೆಗಳಲ್ಲಿ, ಶಾಸನ ರೂಪಿಸುವ ಪ್ರತಿನಿಧಿಗಳಾಗಿ, ಇನ್ನಿತರ ಹಲವಾರು ಅವಕಾಶಗಳು ದೊರೆಯುತ್ತವೆ. ಸಮಾಜ ಕಾರ್ಯ, ಪತ್ರಿಕೋದ್ಯಮ, ಎಂಬಿಎ, ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್, ಸಿ ಎ, ಸಿ ಎಸ್ ಇತ್ಯಾದಿ ಎಲ್ಲಾ ಪದವಿಗಳಿಗೂ ಕಾನೂನು ಶಿಕ್ಷಣದ ನೈಪುಣ್ಯತೆ ಪಡೆಯುವುದರಿಂದ ಇನ್ನೂ ಹೆಚ್ಚಿನ ಅತ್ಯುತ್ತಮ ಉದ್ಯೋಗದ ಅವಕಾಶಗಳನ್ನು ಪಡೆಯಲು ಸಹಕಾರಿಯಾಗಲಿದೆ ಎಂದು ಕಾಲೇಜಿನ ಪ್ರಾಚಾರ್ಯ ಕುರಿಯನ್ ಅವರು ತಿಳಿಸಿದರು.




































