ಆಳ್ವಾಸ್ ನಲ್ಲಿ ಜವಾಬ್ದಾರಿಯುತ ಸಂಸ್ಕೃತಿ ನಿರ್ಮಾಣ ಕಾರ್ಯಗಾರ
ವರದಿ : ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಸ್ಥಳೀಯ ಆಳ್ವಾಸ್ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಮೌಲ್ಯಮಾಪನ ಘಟಕ, ಲೈಂಗಿಕ ದೌರ್ಜನ್ಯ ತಡೆ ಘಟಕ, ಹಾಗೂ ಸಮಾಜಕಾರ್ಯ ವಿಭಾಗ ಬೋಧನಾಂಗ ಅಭಿವೃದ್ಧಿ ಕಾರ್ಯಕ್ರಮದ ಅಂಗವಾಗಿ ನವೆಂಬರ್ 16 ರಂದು ಜವಾಬ್ದಾರಿಯುತ ಸಂಸ್ಕೃತಿ ನಿರ್ಮಾಣ ಕಾರ್ಯವನ್ನು ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ನೊಂದ ಮಹಿಳೆ ಮಾತ್ರವಲ್ಲ ಅವರ ಪರವಾಗಿ ಯಾರು ಬೇಕಾದರೂ ದೂರು ದಾಖಲಿಸಬಹುದು.

ಮಾನಸಿಕ ಸುರಕ್ಷತೆ ಮುಖ್ಯ. ಭೌತಿಕ ಸಂಪರ್ಕ, ಗಾಸಿಪ್, ಭಾವನಾತ್ಮಕ ನೋವು ನೀಡುವುದು ಎಲ್ಲವೂ ಅಪರಾಧವೇ. ಮಹಿಳೆಯ ಮೇಲೆ ಮಹಿಳೆಯೇ ದೌರ್ಜನ್ಯ ಎಸಗಿದರೂ ಅಪರಾಧ ಎಂದು ಹೊಳ್ಳ ಆಂಡ್ ಹೊಳ್ಳ ಅಸೋಸಿಯೇಟ್ ನ ಮೇಘನಾ ಆರ್ ಬಲ್ಲಾಳ್ ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಅಧ್ಯಕ್ಷತೆ ವಹಿಸಿದ್ದು ಪುರುಷರಿಗೆ ಸಮಾನವಾಗಿ ಮಹಿಳೆಯರು ದುಡಿಯುತ್ತಿದ್ದಾರೆ.
ದೇಶೀಯ ಉತ್ಪಾದನೆಯಲ್ಲಿ ಮಹಿಳೆಯರ ಕೊಡುಗೆ ಅಪಾರ ಎಂದು ವೇದಿಕೆಯಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಕುರಿಯನ್ ಹೇಳಿದರು.
ಕಾಲೇಜಿನ ಆಡಳಿತ ಅಧಿಕಾರಿ ಬಾಲಕೃಷ್ಣ ಶೆಟ್ಟಿ ಹಾಜರಿದ್ದರು. ಘಟಕದ ಸಂಯೋಜಕ ಡಾ. ಸ್ವಪ್ನ ಆಳ್ವ ವಾಸ್ತವಿಕವಾಗಿ ಮಾತನಾಡಿದರು. ಅಬ್ದುಲ್ ರಹಮಾನ್ ಸ್ವಾಗತಿಸಿದರು.
ಲೂಯಿಸ್ ಕಾರ್ಯಕ್ರಮ ನಿರೂಪಿಸಿದರು. ಇಂಶಾ ವಂದಿಸಿದರು.




































