ಆಳ್ವಾಸ್ನಲ್ಲಿ 2000ನೇ ಮದ್ಯವರ್ಜನ ಶಿಬಿರ

ಮೂಡುಬಿದಿರೆ: ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ, ಮಿಜಾರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಮೂಡುಬಿದಿರೆ ತಾಲೂಕು ಆಳ್ವಾಸ್ ಪುನರ್ಜನ್ಮ ಮಾನಸಿಕ ಆರೋಗ್ಯ ಮತ್ತು ಮದ್ಯವಿಮುಕ್ತಿ ಚಿಕಿತ್ಸಾ ಕೇಂದ್ರ, ಮಿಜಾರು ಹಾಗೂ ಇನ್ನಿತರ ಸಂಘಸಂಸ್ಥೆಗಳ ಸಹಕಾರದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನೆ ಕೇಂದ್ರ ಲಾಯಿಲಾ, ಬೆಳ್ತಂಗಡಿ ಇದರ ವಿಸ್ತರಣಾ ಕಾರ್ಯಕ್ರಮದ ಅಂಗವಾಗಿ 2000ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಮಿಜಾರಿನ ಆಳ್ವಾಸ್ ಪುನರ್ಜನ್ಮ ಮಾನಸಿಕ ಆರೋಗ್ಯ ಕೇಂದ್ರದಲ್ಲಿ ಜರುಗಿತು.
ಕಾರ್ಯಕಮವನ್ನು ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ, ನಾನೇ ಸ್ವತಃ ಮದ್ಯವ್ಯಸನದ ವಿರುದ್ಧ ಸದಾ ಹೋರಾಡುತ್ತ ಬಂದವನು. ಸುಖದಲ್ಲಾಗಲಿ ದುಃಖದಲ್ಲಾಗಲಿ ನಾನು ಎಂದಿಗೂ ಮದ್ಯವನ್ನು ಸ್ಪರ್ಶಿಸಿದವನಲ್ಲ. ಮದ್ಯಪಾನ ಮಾಡಿದವನ ಮನಸ್ಸು ಅವನ ಸ್ವಾಧೀನದಲ್ಲಿರುವುದಿಲ್ಲ. ನಮ್ಮ ರಾಜ್ಯದಲ್ಲಿ 11,700 ಕ್ಕೂ ಹೆಚ್ಚು ಮದ್ಯದಂಗಡಿಗಳು ಇರುವುದೇ ಒಂದು ವಿಷಾದಕರ ಸ್ಥಿತಿ.
ನಮ್ಮನ್ನು ಆಳುವ ಸರ್ಕಾರಗಳು ಮಧ್ಯಪಾನ ಅಥವಾ ದುಶ್ಚಟಗಳನ್ನು ನಿರ್ಭಂಧಿಸಲು ಟಿವಿ ಅಥವಾ ಪತ್ರಿಕೆಗಳಲ್ಲಿ ಡಿಸ್ಕೆ÷್ಲöÊಮರ್ ಹಾಕುದರಿಂದ ಏನೂ ಪ್ರಯೋಜನ ಇಲ್ಲ. ಪಾನ ಮುಕ್ತ ಮಾಡುತ್ತೇವೆ ಎಂಬುದು ಸ್ಲೋಗನ್ಗಳಿಗೆ ಮಾತ್ರ ಸೀಮಿತವಾಗಬಾರದು. ಪೂಜ್ಯರ ಮಾರ್ಗದರ್ಶನದಲ್ಲಿ ರಾಜ್ಯವ್ಯಾಪಿ ನಡೆಯುತ್ತಿರುವ ಮದ್ಯವರ್ಜನ ಶಿಬಿರಗಳಿಂದ ಮದ್ಯವ್ಯಸನಿಗಳ ಕುಟುಂಬಗಳಲ್ಲಿ ಹೊಸ ಭರವಸೆ ಮೂಡಿದೆ ಎಂದರು.








