ಆಳೆತ್ತರದಲ್ಲಿ ಅಪಾಯಕಾರಿ ಬೃಹತ್ ಗಾತ್ರದ ಕಣಜಗೂಡು!

ಕಾರ್ಕಳ: ನಗರದ ತೆಳ್ಳಾರು ರಸ್ತೆಯಿಂದ ಸಾಯಿಬಾಬಾ ಮಂದಿರಕ್ಕೆ ಹೋಗುವ ರಸ್ತೆ ತಿರುವಿನಲ್ಲಿ ಆಳೆತ್ತರದಲ್ಲಿ ಬೃಹತ್ ಗಾತ್ರದ ಕಣಜದ ಗೂಡು ಕಂಡುಬರುತ್ತದೆ.
ದಾರಿಹೋಕರ ಮೇಲೆ ದಾಳಿ ನಡೆಸುವ ಸಂಭವದ ಆತಂಕ ಸ್ಥಳೀಯರಲ್ಲಿ ಕಾಡುತ್ತಿದೆ. ಕಳೆ ಗಿಡಗಳ ನಡುವೆ ಕಣಜ ಹುಳುಗಳು ಗೂಡು ಕಟ್ಟಿದ್ದು ಮೇಲ್ನೋಟಕ್ಕೆ ಕಂಡುಬರದಿದ್ದರೂ, ಕಣಜ ಹುಳುಗಳ ಹಾರಾಟ ಗಮನಿಸಿದಾಗ ಮಾತ್ರ ಗೂಡು ಇರುವುದು ತಿಳಿದುಬರುತ್ತದೆ.

ಇದೇ ರಸ್ತೆಯಾಗಿ ಪ್ರತಿದಿನ ಸ್ಥಳೀಯ ನಿವಾಸಿಗಳು ಹಾದು ಹೋಗುತ್ತಿದ್ದಾರೆ. ಮಾತ್ರವಲ್ಲದೇ ಕಾಲೇಜುವೊಂದಕ್ಕೆ ನಾನಾ ಕಡೆಗಳಿಂದಲೂ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಸಾಯಿಬಾಬ ಮಂದಿರಕ್ಕೆ ಅಸಂಖ್ಯಾತ ಭಕ್ತಾದಿಗಳು ಅಗಮಿಸುತ್ತಿದ್ದಾರೆ.
ಸುಮಾರು ೧೫ ಕೆ.ಜಿ ಅಕ್ಕಿ ಮುಡಿಯಂತೆ ಕಂಡುಬುತ್ತಿರುವ ಕಣಜದ ಗೂಡಿನಲ್ಲಿ ಹೂಳುಗಳು ಹಾರಾಟ ನಡೆಸುತ್ತಿದೆ. ಅಪ್ಪಿ ತಪ್ಪಿ ಗೂಡಿಗೆ ಹಾನಿಯಾದರೆ ಕಣಜ ಹುಳುಗಳು ಪ್ರತಿದಾಳಿ ನಡೆಸಬಹುದು. ಭಾರೀ ಪ್ರಮಾಣದಲ್ಲಿ ಇರುವ ಹುಳುಗಳು ಸಿಕ್ಕ ಸಿಕ್ಕವರ ಮೇಲೂ ದಾಳಿ ನಡೆಸಿದರೆ ಗಂಭೀರ ಸಮಸ್ಸೆ ಎದುರಾಗಲಿದೆ.
ವಿಷಕಾರಿ ಕಣಜಗಳು ಕಚ್ಚಿದಾಗ ಮಾನವನಿಗೆ ಸಾವು ಸಂಭವಿಸಬಹುದು.
ಕಾರ್ಕಳ ಪುರಸಭೆಯ ಆಡಳಿತ ವರ್ಗ ಇದರ ಬಗ್ಗೆ ಕ್ರಮ ಕೈಗೊಳ್ಳುವದೇ ಅಂತ ಕಾದು ನೋಡಬೇಕಾಗಿದೆ.
ಪುರಸಭೆ ಗಮನ ಹರಿಸಲಿದೆ

-ರೂಪಾ ಶೆಟ್ಟಿ, ಮುಖ್ಯಾಧಿಕಾರಿ ಕಾರ್ಕಳ ಪುರಸಭೆ
ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಕಣಜ ಗೂಡು ಇರುವ ವಿಚಾರ ಗಮನಕ್ಕೆ ಬಂದಿದೆ. ಅದರ ತೆರವು ಕಾರ್ಯ ಪುರಸಭೆ ನಡೆಸಲಿದೆ. ನಾಗರಿಕರು ಆತಂಕಕ್ಕೆ ಒಳಗಾಗುವುದು ಬೇಡ.






































