ಆಲಿಂಗಿಸದಿರು ಕೋಪವ! ಬಾಳು ಗೋಳಾಗುವುದು!

Picture of RB NEWS

RB NEWS

Bureau Report

ಅರಿಯದೆ ಮಾಡಿದ ತಪ್ಪಿನ ಜ್ಞಾನ!
ಅರಿತ ಮೇಲೆ ಜನ! ಅಳುವುದಲ್ಲ ಹೇ ಮನ!
ಪ್ರತೀ ಜನರ ನಡೆಗಳದು! ಹಲವು ರೀತಿಯ ಕಥನ!
ಮತಿ ಹೀನನಾಗಲು ಎಂದೂ! ಕೋಪವೇ ಮಾಪನ!! ಪಲ್ಲವಿ!!

ಕೋಪಿಸದಿರು ಮನುಜ! ಕೋಪವೆಂದರೆ ಪಾಪಕೆ ಸಮಾನ!!ಅ.ಪ!!

ಕೋಪದಿ ನೆತ್ತರ ! ಒತ್ತಡವು ಎತ್ತರ!
ಕೋಪದಿಂದಲಿ! ಆರೋಗ್ಯವೇ ತತ್ತರ!
ಕೋಪದ ಸಮಯ! ನಯನ ಕುರುಡಾದಾಗ!
ಬುದ್ಧಿಬ್ರಮಣವಾಗಿ! ಸರಿವುದು ಗೆಳೆತನ!!೧!!

ಕೋಪಕೆ ಮದ್ದು! ಮಲಕ್ಕೋ ನೀ ಹೊದ್ದು!
ತಾಪ ಇಳಿದಾಗ ಅರಿವಾಗುವುದು! ಜೀವನ!
ಭೂಪನೇ ಕೇಳಯ್ಯ! ಪುರಾಣಗಳ ಕಥನ!
ಕೋಪದ ಗಂಡಾಂತರ! ಕಥೆ ಏನಾಯ್ತು ನಂತರ!!೨!!

ಕೋಪದಿ ಸರ್ವನಾಶವನ್ನ ! ಪಡೆದ ಸುಯೋಧನ!
ಕೋಪದಿಂದ ನಶಿಸಿತು! ದಶಕಂಠನ ಜೀವನ!
ಪಾಪನಾಶಕ ನಮ್ಮ ಪಡುತಿರುಪತೀಶನ ಭಜಿಸಿದರೆ!
ಕೋಪತಾಪವು ಮಾಯವಾಗುವುದು ಮನುಜ!!೩!!

ಕಾಂತಾವರ ಶಿವಾನಂದ ಶೆಣೈ ಕಾರ್ಕಳ, ಇವರ
ಸ್ವರಚಿತ ಕವನ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top