‘ಆರ್.ಬಿ. ನ್ಯೂಸ್ ‘ ವರದಿಯ ಫಲಶ್ರುತಿ : ಸಿಂಗಾರ ಗೊಳ್ಳುತ್ತಿರುವ ಮೂಡುಬಿದಿರೆ ಬಸ್ಸು ನಿಲ್ದಾಣ
RB NEWS
Bureau Report
‘ಆರ್.ಬಿ. ನ್ಯೂಸ್ ‘ ವರದಿಯ ಫಲಶ್ರುತಿ
ಸಿಂಗಾರ ಗೊಳ್ಳುತ್ತಿರುವ ಮೂಡುಬಿದಿರೆ ಬಸ್ಸು ನಿಲ್ದಾಣ
ವರದಿ : ರಾಯಿ ರಾಜಕುಮಾರ ಮೂಡುಬಿದಿ
ಮೂಡುಬಿದಿರೆ: ಶಿಕ್ಷಣ,ಧಾರ್ಮಿಕ ಕ್ಷೇತ್ರಗಳಲ್ಲಿ ಕೊಡುಗೆ ನೀಡಿದ ಕೀರ್ತಿ ಮೂಡುಬಿದಿರೆಗೆ ಸಲ್ಲುತ್ತದೆ. ದಿನ ಪ್ರತಿ ದೇಶದ ನಾನಾ ಕಡೆಗಳಿಂದ ಒಂದಲ್ಲ ಒಂದು ರೀತಿಯಲ್ಲಿ ಇಲ್ಲಿ ಅಗಮಿಸುವವರು ಬಹಳಷ್ಟು. ಇಂತಹ ಮೂಡುಬಿದಿರೆಯಲ್ಲಿ ಇರುವ ಬಸ್ ನಿಲ್ದಾಣದ ಸ್ಥಿತಿ-ಗತಿ ಗಮನಿಸಿದರೆ “ಆಯೋ” ಎನ್ನುವವರ ಸಂಖ್ಯೆ ಕಡಿಮೆ ಇಲ್ಲ.
ಪುರಸಭೆಯ ಆಧೀನಕ್ಕೊಳಪಡುವ ಬಸ್ ನಿಲ್ದಾಣ ಅಭಿವೃದ್ಧಿ ಹೊಂದ ಬೇಕೆಂಬ ಸದುದ್ದೇಶದಿಂದ ‘ಆರ್. ಬಿ.ನ್ಯೂಸ್‘ ಸಮಗ್ರ ವರದಿಗಳನ್ನು ಪ್ರಕಟಿಸಿತು.
ಅಡಿಪಾಯ ಇಲ್ಲದೇ ನೇತಾಡುತ್ತಿದ್ದ ಆಧಾರ ಸ್ತಂಭ, ಮೇಲ್ಚಾವಣೆ ಹಾರಿ ಹೋಗಿ ಪ್ರಯಾಣಿಕರು ಸುಡು ಬಿಸಿಲಿನ ಹಾಗೂ ಜಡಿ ಮಳೆ ಪಡಬಾರದಾದ ಸಂಕಷ್ಟಗಳ ಕುರಿತು ಬೆಳಕು ಚೆಲ್ಲಿತು.
ವರದಿಗೆ ಸ್ಪಂದಿಸಿರುವ ಮೂಡಬಿದಿರೆ ಪುರಸಭೆಯು ದುರಸ್ಥಿ ಕಾಮಗಾರಿ ನಡೆಸಲು ಮುಂದಾಗಿದೆ.
ಬಸ್ ನಿಲ್ದಾಣಕ್ಕೆ ಪೈಂಟ್ ಬಳಿಯುವ ಕಾಮಗಾರಿ ನಡೆಯುತ್ತಿದೆ. ಆದರೆ ನಿಲ್ದಾಣದೊಳಗೆ ತೆರೆದುಕೊಂಡ ಬೃಹತ್ ಹೊಂಡಗಳಿಗೆ ಮುಕ್ತಿ ದೊರೆತ್ತಿಲ್ಲ. ಬಸ್ ನಿಲ್ದಾಣ ಹಾಸು ನೆಲ ಕಿತ್ತು ಹೋಗಿದ್ದು ಅದರ ದುರಸ್ಥಿ ಬಾಕಿ ಉಳಿದಿದೆ.
ಪ್ರಯಾಣಿಕರ ಹಿತದೃಷ್ಟಿಯಿಂದ ರಾತ್ರಿ ವೇಳೆಗೆ ಅಗತ್ಯವಾಗಿ ವಿದ್ಯುತ್ ದೀಪಗಳನ್ನು ಅಳವಡಿಸಬೇಕು.
ರಿಂಗ್ ರಸ್ತೆಯ ಅವ್ಯವಸ್ಥೆ: ಅಲಂಗಾರಿನಿಂದ ಮೂಡುಬಿದರೆ ಮಂಗಳೂರಿಗೆ ಹೋಗಲು ಬರಲು ಇರುವ ರಿಂಗ್ ರಸ್ತೆ ಹೊಂಡ ಗುಂಡಿಗಳಿಂದ ಮತ್ತೆ ಉಪಯೋಗ ರಹಿತವಾಗಿ ಬದಲಾಗಿದೆ. ಮೂಡುಬಿದರೆಯ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಗಳು ಈ ಬಗ್ಗೆ ತಕ್ಷಣ ಮೂಡುಬಿದಿರೆಯನ್ನು ಸಂಪರ್ಕಿಸುವ ಎಲ್ಲ ರಸ್ತೆಗಳಲ್ಲಿ ಆಗಿರುವ ಹೋಂಡಗುಂಡಿಗಳನ್ನು ಉತ್ತಮ ಗುಣಮಟ್ಟದ ಡಾಮರ್ ಹಾಕಿ ಸರಿಪಡಿಸಬೇಕಾದ ಅಗತ್ಯವಿದೆ. ಏಕೆಂದರೆ ಕೆಲವಾರು ಕಡೆಗಳಲ್ಲಿ ಹಾಕಿದ ಒಂದೇ ವಾರಗಳಲ್ಲಿ ಪುನಃ ಗುಂಡಿ ರಚನೆಯಾಗಿದೆ. ಈ ಬಗ್ಗೆ ಶಾಸಕರು ಗಮನ ಹರಿಸಬೇಕೆಂದು ನಾಗರಿಕರು ಕೇಳಿಕೊಳ್ಳುತ್ತಿದ್ದಾರೆ.
ಫುಟ್ ಪಾತ್ ನಲ್ಲಿ ಬೀದಿ ವ್ಯಾಪಾರಿಗಳದೇ ದರ್ಬಾರ್ !
ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಬಹುತೇಕ ರಸ್ತೆಗಳ ಫುಟ್ ಪಾತ್ ಗಳನ್ನು ವ್ಯಾಪಾರಿಗಳು ಅಕ್ರಮಿಸಿಕೊಂಡಿದ್ದಾರೆ.
ಪಾದಚಾರಿಗಳ ಓಡಾಟಕ್ಕೆ ನಿರ್ಮಿಸಿರುವ ಫುಟ್ ಪಾತ್ ಬೀದಿ ವ್ಯಾಪಾರಿಗಳ ಪಾಲಾದರೆ, ಪಾದಚಾರಿಗಳು ರಸ್ತೆಯಲ್ಲಿ ನಡೆದಾಡುವ ಪ್ರಮೇದ ಎದುರಾಗಿದೆ. ಪುರಸಭಾ ಆಡಳಿತ ಈ ಕುರಿತು ಕಟ್ಟುನಿಟ್ಟನ ಕ್ರಮ ಕೈಗೊಳ್ಳಲು ಮುಂದಾಗಬೇಕೆ ಹೊರತು ಮೃಧು ಧೋರಣೆ ತಾಳಬಾರದೆಂಬುವುದು ನಾಗರಿಕ ಆಗ್ರಹವಾಗಿದೆ.