ಆರ್. ಬಿ. ನ್ಯೂಸ್ ವರದಿಯ ಫಲಶ್ರುತಿ ಸ್ವಚ್ಛಗೊಳ್ಳುತ್ತಿರುವ ಮೂಡುಬಿದಿರೆ!

Picture of RB NEWS

RB NEWS

Bureau Report

ಮೂಡುಬಿದಿರೆ: ಸ್ವಚ್ಚತೆ, ಅಭಿವೃದ್ಧಿಯಲ್ಲಿ ಮೂಡುಬಿದಿರೆ ಬಲುದೂರ ಎಂಬ ಶೀರ್ಷಿಕೆಯಡಿ ಆರ್.ಬಿ.ನ್ಯೂಸ್ ಸಚಿತ್ರ ವರದಿ ಪ್ರಕಟಿಸಿ ಮೂಡುಬಿದಿರೆ ಆಡಳಿತವನ್ನು ಎಚ್ಚರಿಸಿತು. ವರದಿಗೆ ಸಕರಾತ್ಕಕವಾಗಿ ಸ್ಪಂದಿಸಿದ ಪುರಸಭೆ ಆಡಳಿತ ವರ್ಗವು ಸ್ವಚ್ಚತೆ ಒತ್ತು ನೀಡಿ ಕಾಮಗಾರಿ ಕೈ ಗೊಂಡಿದೆ.

ಇನ್ನೆರಡು ದಿನಗಳಲ್ಲಿ ಮೂಡುಬಿದಿರೆಯ ಮುಖ್ಯ ರಸ್ತೆ ಹಾಗೂ ಆಳ್ವಾಸ್ ರಸ್ತೆಯ ಹೊಂಡ ಗುಂಡಿಗಳನ್ನು ನಿವಾರಿಸುವ ಕೆಲಸ ಪ್ರಾರಂಭವಾಗಲಿದೆ ಎಂದು ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ್ , ಉಪಾಧ್ಯಕ್ಷ ನಾಗರಾಜ ಪೂಜಾರಿ, ಮುಖ್ಯಾಧಿಕಾರಿ ಗೋಪಾಲಕೃಷ್ಣ ಅವರು ಆರ್.ಬಿ.ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.

(ಕ್ಲಿಕ್ ಮಾಡಿ ನೋಡಿ)

ಸ್ವಚ್ಚತೆ, ಅಭಿವೃದ್ಧಿಯಲ್ಲಿ ಮೂಡುಬಿದಿರೆ ಪುರಸಭೆ ಬಲುದೂರ !

ವರದಿ ರಾಯಿ ರಾಜಕುಮಾರ ಮೂಡುಬಿದಿರೆ

ಮೂಡುಬಿದಿರೆ: ಸ್ವಚ್ಚತೆ, ಅಭಿವೃದ್ಧಿಯಲ್ಲಿ ಮೂಡುಬಿದಿರೆ ಬಲುದೂರ ಎಂಬ ಶೀರ್ಷಿಕೆಯಡಿ ಆರ್.ಬಿ.ನ್ಯೂಸ್ ಸಚಿತ್ರ ವರದಿ ಪ್ರಕಟಿಸಿ ಮೂಡುಬಿದಿರೆ ಆಡಳಿತವನ್ನು ಎಚ್ಚರಿಸಿತು. ವರದಿಗೆ ಸಕರಾತ್ಕಕವಾಗಿ ಸ್ಪಂದಿಸಿದ ಪುರಸಭೆ ಆಡಳಿತ ವರ್ಗವು ಸ್ವಚ್ಚತೆ ಒತ್ತು ನೀಡಿ ಕಾಮಗಾರಿ ಕೈ ಗೊಂಡಿದೆ.

ಇನ್ನೆರಡು ದಿನಗಳಲ್ಲಿ ಮೂಡುಬಿದಿರೆಯ ಮುಖ್ಯ ರಸ್ತೆ ಹಾಗೂ ಆಳ್ವಾಸ್ ರಸ್ತೆಯ ಹೊಂಡ ಗುಂಡಿಗಳನ್ನು ನಿವಾರಿಸುವ ಕೆಲಸ ಪ್ರಾರಂಭವಾಗಲಿದೆ ಎಂದು ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ್ , ಉಪಾಧ್ಯಕ್ಷ ನಾಗರಾಜ ಪೂಜಾರಿ, ಮುಖ್ಯಾಧಿಕಾರಿ ಗೋಪಾಲಕೃಷ್ಣ ಅವರು ಆರ್.ಬಿ.ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.

ವರದಿ ಹೀಗಿತ್ತು.

ಸ್ವಚ್ಚತೆ, ಅಭಿವೃದ್ಧಿಯಲ್ಲಿ ಮೂಡುಬಿದಿರೆ ಪುರಸಭೆ ಬಲುದೂರ !

ವರದಿ ರಾಯಿ ರಾಜಕುಮಾರ ಮೂಡುಬಿದಿರೆ

ಕಾರ್ಕಳ : ಶಿಕ್ಷಣ ಕಾಶಿ ಎಂದು ಕರೆಯಲ್ಪಡುವ ಮೂಡುಬಿದಿರೆ ತಾಲೂಕು ಕೇಂದ್ರ ಭಾಗದಲ್ಲಿ ಸ್ವಚ್ಚತೆಗಿಲ್ಲ ಒತ್ತು. ಹೀಗಾಗಿ ಯಾವುದೇ ಪ್ರಮುಖ ಭಾಗದ ರಸ್ತೆಯ ಇಕ್ಕೆಲೆಗಳಲ್ಲಿ ಒಳಭಾಗದ ರಸ್ತೆಯ ಅಸುಪಾಸುಗಳಲ್ಲಿ ತ್ಯಾಜ್ಯದ ಕೊಂಪೆ ಕಾಣ ಸಿಗುತ್ತದೆ. ಚೆಲ್ಲಪಿಲ್ಲಿಯಾಗಿ ಬಿದ್ದುಕೊಂಡಿರುವ ಈ ತ್ಯಾಜ್ಯವು ಪರಿಸರಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ಪುರಸಭ ಕಚೇರಿಯ ಫ್ಯಾನ್ ನಡಿಯಲ್ಲಿ ಕುಳಿತು ಕರ್ತವ್ಯ ನಿಷ್ಠೆ ತೋರದ ಅಧಿಕಾರಿಗಳು ಇದಕ್ಕೆ ಕ್ಯಾರೇ ಅನ್ನುತ್ತಿಲ್ಲ.

ಮೂಡುಬಿದಿರೆ ಬಸ್ಸು ನಿಲ್ದಾಣ- ಕಸ, ಕೊಳಕು, ಕಶ್ಮಲ, ಅವ್ಯವಸ್ಥೆಗಳ ಮಹಾಕೂಪ

ಮೂಡುಬಿದಿರೆ ಬಸ್ಸು ನಿಲ್ದಾಣ ಇಡೀ ನಗರಕ್ಕೆ ಕಳಶಪ್ರಾಯವಾಗಿ ಮೆರೆಯಬೇಕಿತ್ತು. ಆದರೆ ರಾಜ್ಯ ಹೊರರಾಜ್ಯಗಳ ಅಸಂಖ್ಯಾತ ಪ್ರಯಾಣಿಕರು ಇದೇ ಭಾಗವಾಗಿ ಹಾದು ಹೋಗುತ್ತಿದ್ದಾರೆ.

ದೇಶ, ವಿದೇಶಗಳಲ್ಲಿ ಖ್ಯಾತಿ ಪಡೆದಿರುವ ಮೂಡುಬಿದಿರೆ ಬಸ್ ನಿಲ್ದಾಣಕ್ಕೆ ಒಮ್ಮೆ ಕಾಲಿಟ್ಟರೆ ಇಲ್ಲಿನ ಸಮಗ್ರ ಚಿತ್ರಣ ಬಣ್ಣಬಯಲಾಗುತ್ತದೆ.

ಮೂಡುಬಿದಿರೆ ಪುರಸಭೆಯ ಕೂಗಳತೆ ದೂರದಲ್ಲಿ ಬಸ್ ನಿಲ್ದಾಣ ಇದ್ದರೂ ಸ್ವಚ್ಚತೆ ಕಂಡುಬರುತ್ತಿಲ್ಲ. ಕಸ, ಕೊಳಕು, ಕಶ್ಮಲ, ಅವ್ಯವಸ್ಥೆಗಳನ್ನು ಕಂಡು ಮಮ್ಮಲಮರುಗುತ್ತಿದ್ದಾರೆ.

ಹಳೆಯ ಬಸ್ಸು ನಿಲ್ದಾಣದಿಂದ ಮೆಟ್ಟಿಲುಗಳ ಮೂಲಕ ಮೇಲೆ ಬರುವಾಗಲೇ ಎಲ್ಲರಿಗೂ ನರಕ ಸದೃಶವಾದ ಪೂರ್ವ ಭಾಗದ ಪ್ರದೇಶ ಗೋಚರಿಸುತ್ತದೆ.

ಇದನ್ನು ಸರಿಪಡಿಸಲು ಸಾಕಷ್ಟು ಬಾರಿ ಪುರಸಭೆಗೆ ತಿಳಿಸಿದರೂ ಅದಾವುದು ಕಾರ್ಯರೂಪಕ್ಕೆ ಬಂದಿರುವುದಿಲ್ಲ.

ಬಸ್ಸು ನಿಲ್ದಾಣದ ಪಶ್ಚಿಮ ಭಾಗದ ಹಾಗೂ ಪೂರ್ವಭಾಗದ ಜನರು ಕುಳಿತು ನಡೆದಾಡುವ ಪ್ರದೇಶದ ಸಿಮೆಂಟುಗಳು ಎದ್ದು ಹೋಗಿ ದೊಡ್ಡ ದೊಡ್ಡ ಹೊಂಡಗಳು ಬಸ್ಸು ನಿಲ್ದಾಣದ ಒಳಗೆ ರೂಪಿತವಾಗಿದೆ.

ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಜಾಗದಲ್ಲಿ (ಮಂಗಳೂರು ಕಡೆ ಬಸ್ ತೆರಳುವ) ನಿರ್ಮಿಸಲಾಗಿರುವ ಮೇಲ್ಚಾಣಿ ಕುಸಿತಕೊಂಡರೂ ಅಚ್ಚರಿ ಇಲ್ಲ. ಮೇಲ್ಚಾವಣೆಗೆ ಅಳವಡಿಸಲಾಗಿರುವ ಆಧಾರಸ್ತಂಭ ತುಂಡಾಗಿ ನೇತಾಡುತ್ತಿದೆ.

ಇದನ್ನು ಸಂಬಂಧಪಟ್ಟ ಪುರಸಭಾ ಸದಸ್ಯರು ಕೂಡ ಗಮನ ಹರಿಸಿದಂತೆ ಕಂಡುಬರುತ್ತಿಲ್ಲ.

ಪಶ್ಚಿಮ ಭಾಗದ ಪ್ರದೇಶದಲ್ಲಿ ಚಿತ್ರದಲ್ಲಿ ಕಾಣುತ್ತಿರುವಂತೆ ಸಾಕಷ್ಟು ಕಸ, ಕೊಳಕು, ಕಶ್ಮಲಗಳು ತಿಂಗಳಾನುಗಟ್ಟಲೆಯಿಂದ ಹಾಗೆ ಬಿದ್ದಿದ್ದು ಅದನ್ನು ನಿವಾರಿಸುವ ಕ್ರಮವನ್ನು ಕೈಗೊಂಡಿರುವುದಿಲ್ಲ. ಪಶ್ಚಿಮ ಬದಿಯಲ್ಲಿರುವ ಎಂದೋ ಹಾಳು ಬಿದ್ದಿರುವ ನೀರಿನ ಘಟಕವನ್ನು ಕೂಡ ನಿವಾರಿಸಿರುವುದಿಲ್ಲ. ಮಾತ್ರವಲ್ಲ ಬಸ್ಸು ನಿಲ್ದಾಣದ ಹಿಂಬದಿಯಲ್ಲಿ ಶೌಚಾಯವಿದ್ದರೂ ಕೂಡ ಅತ್ಯಂತ ಅವಸರದ ಚಾಲಕ, ನಿರ್ವಾಹಕರುಗಳು ಅಲ್ಲಿಯ ತನಕ ಹೋಗಲು ಸಮಯವಿಲ್ಲದೆ ಪಶ್ಚಿಮದ ಈ ಪ್ರದೇಶದಲ್ಲಿಯೇ ಮೂತ್ರ ವಿಸರ್ಜನೆ ಮಾಡುತ್ತಿರುವುದು ಪರಿಸರಕ್ಕೆ ಹೋದವರಿಗೆ ಕಂಡು ಬರುತ್ತದೆ.

ಕನಿಷ್ಠಪಕ್ಷ ಸಿಮೆಂಟನ್ನು ಹಾಕಿ ಈ ಪ್ರದೇಶವನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸಿದ್ದಲ್ಲಿ ಬಸ್ಸು ನಿಲ್ದಾಣದ ಪಶ್ಚಿಮ ಬದಿಯು ಕೂಡ ಬಹಳ ಉತ್ತಮವಾಗಿ ಕಂಡುಬರುತ್ತಿತ್ತು.

ಮೂಡುಬಿದಿರೆಯ ಮುಖ್ಯ ಕೇಂದ್ರ ಸ್ಥಾನ. ಈ ಪ್ರದೇಶ ಬಿ ಇ ಓ ಕಚೇರಿಯ ಎದುರುಗಡೆ ನಿಶ್ಮಿತಾ ಟವರ್ಸ್, ನವಮಿ ಲೈಫ್ ಸ್ಟೈಲ್ ಇತ್ಯಾದಿಗಳಿಂದ ಕೂಗಳತೆಯ ದೂರದಲ್ಲಿರುವ ಸರ್ಕಲ್ ನ ಒಂದು ಮಗ್ಗುಲು.

ವಾಹನದಲ್ಲಿ ಮದ್ಯಸೇವನೆ.‌..

ರಾತ್ರಿಯ ಹೊತ್ತು ಈ ಪ್ರದೇಶ ಕತ್ತಲೆಯಿಂದ ಆವರಿಸಿದ್ದು ಕೆಲವಾರು ಕಾರುಗಳನ್ನು ಅಡ್ಡವಾಗಿರಿಸಿ ಕುಡಿತವನ್ನು ಪೂರೈಸಿ, ಬಾಟಲಿಗಳನ್ನು ಬದಿಗೆ ಎಸೆದು, ಬಹಿರ್ದೆಸೆಯನ್ನೂ ಮಾಡಿ ಅಲ್ಲಿಂದ ತೆರಳುವವರ ಬಗೆಗೆ ನಾಗರಿಕ ಸಮಾಜ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದೆ.

ಪುರಸಭೆ ಆಡಳಿತ ವರ್ಗವು ಪುರಸಭೆ ವ್ಯಾಪ್ತಿಯಲ್ಲಿ ಸ್ವಚ್ಚತೆಗೆ ಒತ್ತು ನೀಡಿ, ಸಮಗ್ರ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂಬುವುದು ಪ್ರಜ್ಞಾವಂತ ನಾಗರಿಕರ ಆಗ್ರಹವೂ ಆಗಿದೆ.

ಬಸ್ ನಿಲ್ದಾಣ ಪರಿಸರದಲ್ಲಿ ಕಾನೂನು ಬಾಹಿರ ಕೃತ್ಯ ಎಸಗುವವರ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಆಗ್ರಹವೂ ಕೇಳಿಬರುತ್ತಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top