ಆರ್ .ಬಿ.ನ್ಯೂಸ್ ವರದಿಗೆ ಸ್ಪಂದಿಸಿದ ಕುಲಾಲ್ ವರ್ಲ್ಡ್ ಡಾಟ್ ಕಾಮ್ ಮುಖ್ಯಸ್ಥ ದಿನೇಶ್ ಇರ್ವತ್ತೂರು

Picture of RB NEWS

RB NEWS

Bureau Report

ಉದ್ಘಾಟನೆಗೂ ಮುನ್ನ ಕಳ್ಳರು ಕೈ ಚಳಕ ಪ್ರದರ್ಶನ: ಡ್ರಾಯರ್ ಬಾಕ್ಸ್ ಕಿತ್ತು ಅದರಲ್ಲಿ ಇಟ್ಟಿದ್ದ ನಗದು ಕಳವು

ಆರ್ .ಬಿ.ನ್ಯೂಸ್ ವರದಿಗೆ ಸ್ಪಂದಿಸಿದ ಕುಲಾಲ್ ವರ್ಲ್ಡ್ ಡಾಟ್ ಕಾಮ್ ಮುಖ್ಯಸ್ಥ ದಿನೇಶ್ ಇರ್ವತ್ತೂರು

ಕಾರ್ಕಳ : ಹೊಸ್ಮಾರು ಈದು ಸ್ಮಶಾನ ಬಳಿಯಲ್ಲಿ ತಳ್ಳುಗಾಡಿಯ ಗೂಡು ಅಂಗಡಿಗಳ ಬೀಗ ತುಂಡರಿಸಿ ಬೆಲೆಬಾಳುವ ಪರಿಕರಗಳು ಸಹಿತ ನಗದು ಕಳವುಗೈದಿರುವ ಕುರಿತು ಆರ್. ಬಿ.ನ್ಯೂಸ್ ಸಮಗ್ರ ವರದಿ ಪ್ರಕಟಿಸಿದ್ದು, ಓರ್ವ ವ್ಯಾಪಾರಿಗೆ ಕುಲಾಲ್ ವರ್ಲ್ಡ್ ಡಾಟ್ ಕಾಮ್ ಮುಖ್ಯಸ್ಥ ದಿನೇಶ್ ಇರ್ವತ್ತೂರು ಅವರು ರೂ. 10 ಸಾವಿರ ಮೊತ್ತ ನೀಡಿ ಮಾನವೀಯತೆ ಮೆರೆದಿದ್ದಾರೆ.

ಈದು ಗ್ರಾಮದ ವಸಂತ ಕುಲಾಲ್ ಎಂಬವರು ಮಣ್ಣಿನಿಂದ ಸಿದ್ಧಪಡಿಸಿದ ಮಡಿಕೆ ಹಾಗೂ ಇತರ ಪರಿಕರಗಳನ್ನು ಮಾರಾಟ ಮಾಡುವ ಸಲುವಾಗಿ ತಳ್ಳುಗಾಡಿಯ ಗೂಡು ಅಂಗಡಿ ವ್ಯಾಪಾರ ಕೇಂದ್ರ ಆರಂಭಿಸಲು ಸಕಲ ಸಿದ್ಧತೆ ನಡೆಸಿದ್ದರು. ಅದರ ಉದ್ಘಾಟನೆಯ ಕಾರ್ಯವನ್ನು ಶುಕ್ರವಾರ ನಿಗದಿ ಪಡಿಸಿದ್ದು ಸಾಲ ಸೋಲ ಮಾಡಿ ಕೆಲವು ಪರಿಕರಗಳನ್ನು ಜೋಡಿಸಿ ಇಟ್ಟಿದ್ದರು. ಆದರೆ ಉದ್ಘಾಟನೆಗೂ ಮುನ್ನ ಕಳ್ಳರು ಕೈ ಚಳಕ ಪ್ರದರ್ಶಿಸಿ, ಡ್ರಾಯರ್ ಬಾಕ್ಸ್ ಕಿತ್ತು ಅದರಲ್ಲಿ ಇಟ್ಟಿದ್ದ ನಗದು ಹಾಗು ಗೂಡಂಗಡಿಯ ಬೀಗವನ್ನೂ ಎಗರಿಸಿಹೋಗಿದ್ದರು.

ಒಟ್ಟು ಮೂರು ಕಡೆ ಕಳವು ಕೃತ್ಯ


ದಿನೇಶ್ ಎಂಬವರ ಅಮ್ಮ ಕ್ಯಾಂಟೀನ್ ನ ಬೀಗ ಮುರಿದು ಗ್ಯಾಸ್ ಸಿಲಿಂಡರ್ ಹಾಗೂ ರೂ. 1000 ನಗದು ಕಳವು ಗೈಯಲಾಗಿದೆ.

ಮಹಾಬಲ ಪೂಜಾರಿ ಎಂಬವರ ಗೂಡುಅಂಗಡಿಯ ಬೀಗ ಮುರಿದು ಸುವಾಸನೆ ದ್ರವ್ಯದ ಬಾಟಲ್ ಹಾಗೂ ರೂ. 500 ನಗದು ಕಳವುಗೈಯಲಾಗಿದೆ.

ಇದರ ಕುರಿತು ಮೇ 24ರಂದು ಆರ್.ಬಿ.ನ್ಯೂಸ್ ವರದಿ ಪ್ರಕಟಿಸಿತು.

ಮಾಧ್ಯಮ ಕ್ಷೇತ್ರದಲ್ಲಿಆರ್ ಬಿ ನ್ಯೂಸ್ ಕನ್ನಡ ಈ ಕುರಿತು ಮೊಟ್ಟ ಮೊದಲಾಗಿ ವರದಿ ಪ್ರಕಟಿಸಿದ್ದು, ವಸಂತ ಕುಲಾಲ್ಅವರಿಗೆ ಆದ ನಷ್ಟವನ್ನು `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ಪ್ರಮುಖರಾದ ದಿನೇಶ್ ಬಂಗೇರ ಇರ್ವತ್ತೂರು ಭರಿಸುವ ವಾಗ್ದಾನ ನೀಡಿದ್ದರು.

ಅದರಂತೆ ವಸಂತ ಕುಲಾಲ್ ಅವರಿಗೆ ರೂ.10 ಸಾವಿರ ಮೊತ್ತವನ್ನು ನೀಡಿರುವ ಸತ್ಕಾರ್ಯಕ್ಕೆ ಆರ್.ಬಿ.ನ್ಯೂಸ್ ಕನ್ನಡ ಬಳಗ ಪ್ರಶಂಸೆ ವ್ಯಕ್ತಪಡಿಸಿದೆ.‌

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top