‘ಆರ್.ಬಿ.ನ್ಯೂಸ್ ‘ ವರದಿಗೆ ಕಾಂಗ್ರೆಸ್ ಮುಖಂಡ ಸ್ಪಂದನೆ : ಈದು ಎನ್ ಕೌಂಟರ್ ನಡೆದ ಮನೆಗೆ ಭೇಟಿ ; ಪರಿಹಾರದ ಭರವಸೆ

Picture of RB NEWS

RB NEWS

Bureau Report

ಈದು : ನಕ್ಸಲ್ ಪ್ರದೇಶ ಈದು ಬೊಲ್ಲೊಟ್ಟುಗೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯ ೫೦:೫೪ರ ಅಡಿಯಲ್ಲಿ ೪ ಕೋಟಿ ರೂ. ಮಂಜೂರಾಗಿದ್ದು, ಸೇತುವೆ ನಿರ್ಮಾಣಗೊಳ್ಳಲಿರುವ ಪ್ರದೇಶಕ್ಕೆ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಶೆಟ್ಟಿ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

೨೦೦೩ರ ನ.೧೭ರಂದು ಈದು ಬೊಲ್ಲೊಟ್ಟುನಲ್ಲಿ ರಾಜ್ಯದ ಪ್ರಥಮ ನಕ್ಸಲ್ ಎನ್‌ಕೌಂಟರ್ ನಡೆದಿತ್ತು. ಪಲ್ಗುಣಿ ನದಿ ದಾಟಲು ಸೇತುವೆಯ ಬೇಡಿಕೆಯನ್ನು ಆ ಭಾಗದ ಜನತೆ ಮುಂದಿಟ್ಟಿದ್ದರು. ಆದರೆ ಎನ್‌ಕೌಂಟರ್ ನಡೆದ ೨೧ ವರ್ಷಗಳಿಂದ ಆ ಬೇಡಿಕೆ ಈಡೇರಲಿಲ್ಲ. ಸ್ಥಳೀಯ ಕುಟುಂಬಗಳು ಪ್ರತೀ ವರ್ಷ ಮಳೆಗಾಲದಲ್ಲಿ ಸುತ್ತುವರೆದು ಅತ್ತಿತ್ತ ಸಂಪರ್ಕ ಕಲ್ಪಿಸುತ್ತಿದ್ದರು. ಆದರೆ ಈ ಬಾರಿ ಸೇತುವೆ ನಿರ್ಮಾಣಕ್ಕೆ ಸರಕಾರ ಹಣ ಮಂಜೂರಾತಿಗೊಳಿಸಿದೆ.

ಆರ್.ಬಿ.ನ್ಯೂಸ್ ‘ ವರದಿಗೆ ಕಾಂಗ್ರೆಸ್ ಮುಖಂಡ ಸ್ಪಂದನೆ

ಪ್ರಯತ್ನ ನಡೆಸುತ್ತೇನೆ:

-ಮುನಿಯಾಲು ಉದಯಕುಮಾರ್ ಶೆಟ್ಟಿ


ಈದು ಬೊಲ್ಲೊಟ್ಟು ಕುಗ್ರಾಮವಾಗಿಯೇ ಉಳಿಯಬಾರದು. ಅಲ್ಲಿನ ಮೂಲಸೌಕರ್ಯ ಬೇಡಿಕೆಗಳನ್ನು ಈಡೇರಿಸುವಲ್ಲಿ ಪ್ರಯತ್ನ ನಡೆಸುತ್ತೇನೆ. ಪ್ರಸಕ್ತ ಸಾಲಿನಲ್ಲಿ ಸೇತುವೆ ನಿರ್ಮಾಣಕ್ಕೆ ಸರಕಾರ ಅನುದಾನ ಮಂಜೂರು ಮಾಡಿದೆ. ಮುಂದಿನ ದಿನಗಳಲ್ಲಿ ರಸ್ತೆ ಅಭಿವೃದ್ಧಿಗೂ ಸರಕಾರದಿಂದ ಅನುದಾನ ಒದಗಿಸುವ ಪ್ರಯತ್ನ ನಡೆಸುತ್ತೇನೆ.

ಬೊಲ್ಲೊಟ್ಟು ಪ್ರಶಾಂತ ಪೂಜಾರಿ ಅವರ ಮನೆಯಲ್ಲಿ ನಕ್ಸಲ್ ಎನ್‌ಕೌಂಟರ್ ನಡೆದು ೨೧ ವರ್ಷ ಸಂದರೂ, ಸರಕಾರದಿಂದ ಮನೆ ನಿರ್ಮಾಣಕ್ಕೆ ಪರಿಹಾರ ಸಿಕ್ಕಿಲ್ಲ. ಅವರು ಸಾಲ ಮಾಡಿಕೊಂಡು ಮನೆ ನಿರ್ಮಾಣ ಮಾಡಿದ್ದಾರೆ. ಅವರಿಗೆ ಪರಿಹಾರ ಧನ ಒದಗಿಸಿಕೊಡಬೇಕೆನ್ನುವ ಬೇಡಿಕೆಯನ್ನು ಅವರು ಈ ಸಂದರ್ಭ ಇಟ್ಟಿದ್ದಾರೆ. ಅವರ ಬೇಡಿಕೆಗೆ ಅನುಗುಣವಾಗಿ ಸರಕಾರದಿಂದ ಅಥವಾ ನನ್ನ ವೈಯಕ್ತಿಕ ನೆಲೆಯಲ್ಲಿ ಸಹಕರಿಸುವ ಪ್ರಯತ್ನ ಮಾಡುತ್ತೇನೆ ಎಂದು ಈ ಸಂದರ್ಭ ಭರವಸೆ ನೀಡಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top