ಆರ್ ಎಸ್ ಎಸ್ ಪ್ರಮುಖ, ಜವಳಿ ಉದ್ಯಮಿ ಉಮಾನಾಥ ಪ್ರಭು ನಿಧನ
ಕಾರ್ಕಳ : ಆರ್ ಎಸ್ ಎಸ್ ಪ್ರಮುಖರಾಗಿದ್ದು, ಜವಳಿ ಉದ್ಯಮಿ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ಉಮಾನಾಥ ಪ್ರಭು (91) ಅವರು ಅ. 17ರಂದು ಪೆರ್ವಾಜೆಯ ಕೇಶವ ಕೃಪಾ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಪೂರ್ಣಿಮಾ ಸಮೂಹ ಸಂಸ್ಥೆಗಳ ಸ್ಥಾಪಕರಲ್ಲಿ ಉಮಾನಾಥ ಪ್ರಭು ಒಬ್ಬರು.




































