ಆರೋಗ್ಯ ಮತ್ತು ಶುಚಿತ್ವ ಒಂದೇ ನಾಣ್ಯದ ಎರಡು ಮುಖಗಳು
ಕಾರ್ಕಳ : ಆರೋಗ್ಯ ಮತ್ತು ಶುಚಿತ್ವ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಶುಚಿತ್ವ ಇರುವಲ್ಲಿ ಆರೋಗ್ಯ ಇರುತ್ತದೆ. ಮೂಡನಂಬಿಕೆಯಿಂದ ವಿದ್ಯಾರ್ಥಿನಿಯರು ದೂರವಿದ್ದು, ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳುವ ಮೂಲಕ ಆರೋಗ್ಯ ಕಾಯ್ದುಕೊಳ್ಳಬೇಕು ಎಂದು ಡಾ. ಅಕ್ಷತಾ ನಾಯಕ್ ಹೇಳಿದರು.
ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಮಹಿಳಾ ಕಲ್ಯಾಣ ಸಂಘದ ವತಿಯಿಂದ ಮಹಿಳಾ ಆರೋಗ್ಯ ಮತ್ತು ಶುಚಿತ್ವ ಎಂಬ ಕಾರ್ಯಕ್ರಮದಡಿ ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿ ಮಾತನಾಡಿದರು.
ಉಪನ್ಯಾಸಕಿಯರಾದ ರಶ್ಮಿ ರಾವ್, ಮನಿಷಾ, ಜ್ಯೋತಿ, ಸ್ಮಿತಾ, ಸುದೀಕ್ಷಾ ಶೆಣೈ ರವರು, ವಸತಿ ನಿಲಯ ಪಾಲಕರು ಹಾಗೂ ಮೇಲ್ವಿಚಾರಕರು, ಇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಆಂಗ್ಲ ಭಾಷಾ ಉಪನ್ಯಾಸಕಿ ರಶ್ಮಿ ರಾವ್ ನಿರೂಪಿಸಿ ವಂದಿಸಿದರು.






































