







ಆರೋಗ್ಯ ಮತ್ತು ಯೋಗದ ಮಹತ್ವ ಅರಿವು


ಕಾರ್ಕಳ : ಉಡುಪಿ ಜಿಲ್ಲಾ ಪಂಚಾಯತ್ ಆಯುಷ್ ಇಲಾಖೆಯ ವತಿಯಿಂದ ಎಸ್ ಸಿ -ಎಸ್ ಟಿ ಮತ್ತು ಟಿ. ಎಸ್ . ಪಿ ಯೋಜನೆ ಅಡಿಯಲ್ಲಿ ವಿದ್ಯಾರ್ಥಿ ಯೋಗ ತರಬೇತಿದಾರರಾದ ಡಾ. ಮಾಲತಿ ಪೈ ಯೋಗ ತರಬೇತಿ ನೀಡಿದರು.
ಚೇತನ ಆಯುಷ್ಯ ಸೇವಾ ಕಾರ್ಯಕ್ರಮದಲ್ಲಿ ನಿರಂತರವಾಗಿ ಯೋಗ ತರಬೇತಿಯ ಮೂಲಕ ವಿದ್ಯಾರ್ಥಿಗಳಿಗೆ ಕಲರ್ ಥೆರಪಿ ಅಕ್ಯೂ ಪಂಚರ್ ಥೆರಪಿ ,ಕ್ಲಾ ಪಿಂಗ್ ಥೆರಪಿ ಪ್ರಾಣಾಯಾಮ, ಯೋಗ ಮುದ್ರೆ ಧ್ಯಾನ ತರಗತಿಯನ್ನು ನಡೆಸಿಕೊಟ್ಟಿರುವ ಡಾ. ಮಾಲತಿ ಪೈ ಅವರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿ ಗೌರವಿದಲಾಯಿತು.
ಕಾರ್ಕಳ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಧಿಕಾರಿ ಡಾ. ಶಶಿಕಲಾ ಹಾಗೂ ಆಯುಷ್ ಇಲಾಖೆಯ ಮುಖ್ಯ ವೈದ್ಯೆರಾದ ಡಾ. ಸುಜಾತ ಶೆಟ್ಟಿ ಮತ್ತು ಡಾ. ದೀಕ್ಷ ಡಾ. ರೇಷ್ಮಾ ಹಾಗೂ ವಿದ್ಯಾರ್ಥಿ ನಿಲಯದ ಅಧೀಕ್ಷಕಿ ಜಯಂತಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ಆರೋಗ್ಯ ಮತ್ತು ಯೋಗದ ಮಹತ್ವವನ್ನು ಕುರಿತು ಸಲಹೆ ಮಾರ್ಗದರ್ಶನವನ್ನು ನೀಡಿದರು.





































