ಆರೋಗ್ಯ ಕವಚ 108 ಈ ಎಂ ಆರ್ ಐ ಗ್ರೀನ್ ಹೆಲ್ತ್ ಸಂಸ್ಥೆಯ ರಾಜ್ಯ ಮುಖ್ಯಸ್ಥ ಹನುಮಂತಪ್ಪ ಆರ್ ಜಿ ಅವರಿಗೆ ಕರ್ನಾಟಕ ಸೇವಾ ರತ್ನ ಪ್ರಶಸ್ತಿ
RB NEWS
Bureau Report
ಆರೋಗ್ಯ ಕವಚ 108 ಈ ಎಂ ಆರ್ ಐ ಗ್ರೀನ್ ಹೆಲ್ತ್ ಸಂಸ್ಥೆಯ ರಾಜ್ಯ ಮುಖ್ಯಸ್ಥ ಹನುಮಂತಪ್ಪ ಆರ್ ಜಿ ಅವರಿಗೆ ಕರ್ನಾಟಕ ಸೇವಾ ರತ್ನ ಪ್ರಶಸ್ತಿ
ಉಡುಪಿ : ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಈ ಎಂ ಆರ್ ಐ ಗ್ರೀನ್ ಹೆಲ್ತ್ ಸರ್ವಿಸಸ್ 108 ಆರೋಗ್ಯ ಕವಚ ಅಂಬುಲೆನ್ಸ್ ತುರ್ತು ಆರೋಗ್ಯ ಸೇವೆಗಳನ್ನು ಸತತವಾಗಿ ಬಡ ಜನರಿಗೆ ಮತ್ತು ಸಾರ್ವಜನಿಕರಿಗೆ ತಲುಪಿಸಿರುವುದನ್ನು ಗುರುತಿಸಿ ಮತ್ತು ಈ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿ ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ ವತಿಯಿಂದ ಜಿ.ವಿ.ಕೆ.ಇ.ಎಂ.ಆರ್.ಐ.ಸಂಸ್ಥೆ 108 ಅಂಬುಲೆನ್ಸ್ ನ ರಾಜ್ಯ ಮುಖ್ಯಸ್ಥ ಹನುಮಂತಪ್ಪ ರವರಿಗೆ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ 2025 ರ ಕರ್ನಾಟಕ ಸೇವಾ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.
ನವಂಬರ್ 22 ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ. ಜಿ.ವಿ.ಕೆ.ಇ.ಎಂ.ಆರ್.ಐ.ಸಂಸ್ಥೆ 108 ಆರೋಗ್ಯ ಕವಚದ ಅಧಿಕಾರಿಗಳು, ಪ್ರಾದೇಶಿಕ ಅಧಿಕಾರಿ ಸದಾನಂದ, ಜಿಲ್ಲಾ Program Manager Mr.munish, ಜಿಲ್ಲಾ ವ್ಯವಸ್ಥಾಪಕರು Mr. Mahabala ಮತ್ತು 108 ಎಲ್ಲಾ ಸಿಬ್ಬಂದಿಗಳು ಅಭಿನಂದನೆಗಳು ತಿಳಿಸಿದರು.