ಹೆಬ್ರಿ: ಓಂ ಶ್ರೀ ಮಂಜುನಾಥಾಯ ನಮಃ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಹೆಬ್ರಿ ತಾಲೂಕು, ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದನ್ವಯ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ 26 ಮಂದಿಗೆ ಕನ್ನಡಕ ವಿತರಣಾ ಕಾರ್ಯಕ್ರಮ ಜರುಗಿತು.
ಲಯನ್ಸ್ ಕ್ಲಬ್ ಮುನಿಯಾಲು, ಪಾರ್ವತಿ ಚಾರಿಟೇಬಲ್ ಟ್ರಸ್ಟ್ ಶೀರೂರು ಮುದ್ದುಮನೆ , ಹಾಲು ಉತ್ಪಾದಕರ ಸಹಕಾರಿ ಸಂಘ ಪಡುಕುಡೂರು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಪಡುಕುಡೂರು , ಅಧ್ಯಕ್ಷರು ಸದಸ್ಯರು ಗ್ರಾಮ ಪಂಚಾಯತ್ ವರಂಗ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ಮುನಿಯಾಲು ಇದರ ಕಾರ್ಯದರ್ಶಿ ಅಶೋಕ ಶೆಟ್ಟಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು .
ಹೆಬ್ರಿ ತಾಲೂಕಿನ ಯೋಜನಾಧಿಕಾರಿ ಲೀಲಾವತಿ ಯೋಜನೆ ಕಾರ್ಯಕ್ರಮಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಉದ್ಘಾಟಕರಾದ ಅಶೋಕ ಶೆಟ್ಟಿ ಮಾತನಾಡುತ್ತಾ ಇನ್ನು ಮುಂದೆಯು ಹೆಚ್ಚು ಹೆಚ್ಚು ಇಂಥ ಕಾರ್ಯಕ್ರಮ ನಡೆಯಲು ಸಹಕಾರ ನೀಡುವುದಾಗಿ ವ್ಯಕ್ತ ಪಡಿಸಿದರು.
ಒಕ್ಕೂಟದ ಅಧ್ಯಕ್ಷ ಹೃದಯಶೆಟ್ಟಿ ಶೆಟ್ಟಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಎಲ್ಲಾ ಕಾರ್ಯಕ್ರಮಗಳು ಪಡುಕುಡೂರು ಭಾಗದಲ್ಲಿ ಅತ್ಯುತ್ತಮವಾಗಿ ಜನರಿಗೆ ತಲುಪುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಾರ್ವತಿ ಮಹಾಬಲ ಚಾರಿಟೇಬಲ್ ಟ್ರಸ್ಟ್ ನ ಆಪ್ತೊ ಮೆಟ್ರಿಕ್ಸ್ ರವಿಶೆಟ್ಟಿ, ಪಂಚಾಯತ್ ಸದಸ್ಯರುಗಳಾದ ಸಂತೋಷ್ ನಾಯ್ಕ, ತಾರಾವತಿ, ಪಡುಕುಡೂರು ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಆಚಾರ್ಯ ,ಮುದ್ರಾಡಿ ವಲಯದ ಶೌರ್ಯ ವಿಪತ್ತು ಘಟಕದ ಅಧ್ಯಕ್ಷರಾದ ಶಂಕರ ಶೆಟ್ಟಿ , ಎಸ್ ಡಿ ಎಂ ಸಿ ಅಧ್ಯಕ್ಷ ರವಿಶೆಟ್ಟಿ, ಒಕ್ಕೂಟದ ಪದಾಧಿಕಾರಿಯವರು, ಸದಸ್ಯರು ಉಪಸ್ಥಿತರಿದ್ದರು.
ಹೆಬ್ರಿ ತಾಲೂಕಿನ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಚಂದ್ರವತಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು.
ಸೇವಾ ಪ್ರತಿನಿಧಿ ಶ್ರೀಮತಿ ಚಿತ್ರಾ ರವರು ಧನ್ಯವಾದ ನೀಡಿದರು.

































