ಕಾರ್ಕಳ: ಆಯುರ್ವೇದ ಚಿಕಿತ್ಸೆ ಪ್ರಾಚೀನ ಪರಂಪರೆ ಹೊಂದಿದೆ. ಆ ಮೂಲಕ ಮಾನವನ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿಕೊಂಡಿದೆ ಎಂದು ಡಾ.ಹರ್ಷ ಕಾಮತ್ ಹೇಳಿದರು.
ಕಾರ್ಕಳದ ಸರಕಾರಿ ಪದವಿ ಪೂರ್ವ ಕಾಲೇಜಿನ ಹೈಸ್ಕೂಲ್ ವಿಭಾಗದಲ್ಲಿ ಆಯೋಜಿಸಲಾಗಿದ್ದ ಜಾಗೃತಿ ಸಾಹಿತ್ಯಾಸಕ್ತ ಮಹಿಳೆಯರ ಸಂಘಟನೆಯ ತಿಂಗಳ ಕಾರ್ಯಕ್ರಮದ ಅಂಗವಾಗಿ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಮ್ಮ ಆಹಾರ -ವಿಹಾರ, ಆಚಾರ ವಿಚಾರಗಳು ಪರಿಪೂರ್ಣವಾಗಿದ್ದರೆ ಮನುಷ್ಯನು ಆರೋಗ್ಯದಿಂದಿರಲು ಸಾಧ್ಯ ಎಂದರು.
ಆಯುರ್ವೇದ ವೈದ್ಯ ಪದ್ದತಿಯ ಕುರಿತು ಜನರಲ್ಲಿರುವ ತಪ್ಪು ಕಲ್ಪನೆಗಳ ಕುರಿತು ,ಮಧ್ಯ ವಯಸ್ಸಿನ ಮಹಿಳೆಯರ ಆರೋಗ್ಯ ಸಮಸ್ಯೆಗಳ ಮಾಹಿತಿ ನೀಡಿದರು .ಬಳಿಕ ನಡೆದ ಸಂವಾದದಲ್ಲಿ ಜಾಗೃತಿಯ ಸದಸ್ಯೆಯರು ಪಾಲ್ಗೊಂಡರು.ಶೈಲಜಾ ಹೆಗ್ಡೆ ಪ್ರಾರ್ಥನೆಗೈದರು. ಜಾಗೃತಿ ಅಧ್ಯಕ್ಷೆ ಮಿತ್ರಪ್ರಭಾ ಹೆಗ್ಡೆ ಸ್ವಾಗತಿಸಿದರು. ಶ್ಯಾಮಲಾ ಕುಮಾರಿ ಬೇವಿಂಜಿ ಧನ್ಯವಾದವನಿತ್ತರು. ಮಾಲತಿ ವಸಂತರಾಜ್ ನಿರೂಪಿಸಿದರು.






































