ಆನ್ ಲೈನ್ ಟ್ರೇಡಿಂಗ್ ಮೋಸ 4 ಮಂದಿ ಆರೋಪಿಗಳ ಬಂಧನ ರೂ. 13,00,000- ನಗದು ವಶ
ಉಡುಪಿ: ಉಪೇಂದ್ರಭಟ್ ರವರಿಗೆ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ವಾಟ್ಸಪ್ ನಲ್ಲಿ ಮೋತಿಲಾಲ್ ಒಸ್ವಾಲ್ ಪ್ರೈವೇಟ್ ವೆಲ್ತ್ ಮ್ಯಾನೇಜ್ ಮೆಂಟ್ ಗ್ರೂಪ್ಗೆ ಸೇರಿಸಿದ್ದು, ಮೋತಿಲಾಲ್ ಬನ್ಹಾಲ್ ಪ್ರೈವೇಟ್ ವೆಲ್ತ್ ಮ್ಯಾನೇಜ್ ಮೆಂಟ್ ಗ್ರೂಪ್ ನ VIP-203-845 ಎಂಬ ಅಕೌಂಟ್ ನಂಬರನ್ನು ನೀಡಿರುತ್ತಾರೆ.
ಮೊ.ನಂ 7842874635 ಮತ್ತು 6391854496 ನೇದರಿಂದ ವಾಟ್ಸಪ್ ನಲ್ಲಿ ಟ್ರೇಡಿಂಗ್ ಬಗ್ಗೆ ಹಾಗೂ ಲಾಭಾಂಶಗಳ ಬಗ್ಗೆ ಮಾಹಿತಿ ತಿಳಿಸಿ ಪಿರ್ಯಾದಿದಾರರನ್ನು ನಂಬಿಸಿ, ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ ತೋರಿಸಿ,ಒಟ್ಟು ರೂ. 33,10,000 ಹಣವನ್ನು ಡಿಪಾಸಿಟ್ ಮಾಡಿಸಿಕೊಂಡಿರುತ್ತಾರೆ.
ಈ ಬಗ್ಗೆ ಉಪೇಂದ್ರಭಟ್ ರವರು ನೀಡಿದ ದೂರಿನಂತೆ ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಠಾಣಾ ಅ.ಕ್ರ 62/2024 ಕಲಂ: 66(C) 66(D) ಐ.ಟಿ. ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.




ಈ ಬಗ್ಗೆ ವಿಶೇಷ ತಂಡವನ್ನು ರಚಿಸಿ ಆರೋಪಿಗಳಾದ (1) ಮಹಮ್ಮದ್ ಮುಸ್ತಫಾ ಪಿ (36 ವರ್ಷ) ಅಮ್ಮುಂಜೆ ಮನೆ, ಕುರಿಯ ಗ್ರಾಮ ಪುತ್ತೂರು ತಾಲೂಕು. 2) ಖಾಲಿದ್, ಬಿ, (39 ವರ್ಷ) ಬತ್ತೇರಿ ಹೌಸ್, ಬೊಂಬ್ರಾಣ ಗ್ರಾಮ್, ಕುಂಬ್ಳೆ, ಮಂಜೇಶ್ವರ ತಾಲೂಕು, ಕಾಸರಗೋಡು. 3) ಮೊಹಮ್ಮದ್ ಸಫಾನ್ ಕೆ.ಎ, (22 ವರ್ಷ) ಬದ್ರಿಯಾ ಮಂಜಿಲ್, ಕನ್ಯಾಪಾಡಿ, ನೀರ್ಚಾಲ್ ಗ್ರಾಮ ಕಾಸರಗೋಡು 4) ಸತೀಶ್ ಶೇಟ್, (22 ವರ್ಷ) ಗಣೇಶ್ ಕುಂಜ್, ಪ್ರಗತಿ ಬಿಜೈ, ಮಂಗಳೂರು ಎಂಬುವರನ್ನು ದಸ್ತಗಿರಿ ಮಾಡಿ ಅವರಿಂದ 5 ಮೊಬೈಲ್ ಫೋನ್ ಗಳನ್ನು ಹಾಗೂ ರೂ, 13,00,000- ನಗದನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.

ಸದ್ರಿ ಪ್ರಕರಣದ ಪ್ರಮುಖ ಸೂತ್ರದಾರಿಗಳು ತಲೆಮರೆಸಿ ಕೊಂಡಿದ್ದು ಅವರ ದಸ್ತಗಿರಿಗೆ ಬಾಕಿ ಇರುತ್ತದೆ.
ಸಿದ್ದಲಿಂಗಯ್ಯ ಟಿ.ಎಸ್, ಪರಮೇಶ್ವರ ಹೆಗಡೆ ಮಾನ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರ ಮಾರ್ಗದರ್ಶನದಂತೆ ರಾಮಚಂದ್ರ ನಾಯಕ್ ಪಿ.ಐ CEN ಠಾಣೆ ರವರ ನೇತೃತ್ವದಲ್ಲಿ ಎ.ಎಸ್.ಐ ರಾಜೇಶ್ ಸಿಬ್ಬಂದಿಗಳಾದ ಹೆಚ್.ಸಿ ಪ್ರವೀಣ ಕುಮಾರ್, ಅರುಣ ಕುಮಾರ್, ವೆಂಕಟೇಶ್, ಯತೀನ್ ಕುಮಾರ್, ರಾಘುವೇಂದ್ರ, ಪ್ರಶಾಂತ್ ಪ್ರಸನ್ನ ಸಿ ಸಲ್ಮಾನ್, ಚಾಲಕ ಸುದೀಪ್ ರವರು ಸಹಕರಿಸಿರುತ್ತಾರೆ.
ಕಾರ್ಯಾಚರಣೆಯಲ್ಲಿ ಭಾಗವಹಿಸಿದ ತಂಡಕ್ಕೆ ಪೊಲೀಸ್ ಅಧೀಕ್ಷಕ ಡಾ. ಅರುಣ ಕೆ. ಐಪಿಎಸ್ ರವರು ಪ್ರಶಂಶಿಸಿರುತ್ತಾರೆ.
ಸಾರ್ವಜನಿಕರು ಅನ್ ಲೈನ್ ನಲ್ಲಿ ಯಾವುದೇ ಆಮಿಷಗಳಿಗೆ ಒಳಗಾಗಿ ಹಣ ಹೂಡಿಕೆ ಮಾಡಬಾರದಾಗಿ ಕೋರಿಕೆ.




































