ಆಚಾರ್ಯ ಜ್ಞಾನೇಶ್ವರ ಮಹಾರಾಜರಯಮ ಸಲ್ಲೇಖನ ವೃತ ಧಾರಣೆಯ ಏಳನೇ ದಿನ

Picture of RB NEWS

RB NEWS

Bureau Report

ಬೆಳಗಾವಿ: ವೃತಗಳಲ್ಲಿ ಅತ್ಯಂತ ಕಠಿಣ ವೃತವೆಂದೇ ಕರೆಯಲ್ಪಡುವ “ಯಮಸಲ್ಲೇಖನ” ವೃತ ಅತ್ಯಂತ ಮಹತ್ವಪೂರ್ಣವಾದದ್ದು. ತ್ಯಾಗಿಗಳು ಮಾತ್ರವೇ ಧಾರಣೆ ಮಾಡಲು ಸುಲಭ ಸಾಧ್ಯವಾಗಬಹುದಾದ, ಶರೀರ ಕೊನೆಗೊಳಿಸುವ ಇಂಥ ವೃತ ಸ್ವೀಕರಿಸುವದನ್ನು ಸಾಮಾನ್ಯರಿಗೆ ಊಹಿಸಲೂ ಸಾಧ್ಯವಿಲ್ಲ.

ಬೆಳಗಾವಿಯ ದೇವಲಾಪುರದ ಅಷ್ಟಮ ನಂದೀಶ್ವರ ಕ್ಷೇತ್ರದ ನಿರ್ಮಾತೃ ಈ ಕ್ಷೇತ್ರವನ್ನು ಅಜರಾಮರ ಗೊಳಿಸಿದ ಇದರ ಪ್ರವರ್ಥಕ ಪರಮ ಪೂಜ್ಯ ಆಚಾರ್ಯ ” ಶ್ರೀ ೧೦೮ ಜ್ಞಾನೇಶ್ವರ ಮುನಿ ಮಹಾರಾಜರು ” ಯಮಸಲ್ಲೇಖನ ವೃತದಲ್ಲಿ ನಿರತರಾಗಿ ಇಂದಿಗೆ ಒಂದು ವಾರ ಕಳೆದಿದೆ.

ಶರೀರದ ಮೇಲೆ ಕಿಂಚತ್ತೂ ಮೋಹವಿರದ ಆತ್ಮ ಕಲ್ಯಾಣ ಮತ್ತು ಮೋಕ್ಷಮಾರ್ಗದ ಸಾಧನೆಯಲ್ಲಿರುವ ಅವರ ಮುಖದಲ್ಲಿ ಯಾವದೇ ನೋವು ಇರದೇ ಪ್ರಸನ್ನತೆ ಎದ್ದುಕಾಣುತ್ತದೆ.

ಪೂಜ್ಯರ ಸಾಧನಾ ಮಾರ್ಗ ಸುಲಭವಾಗಲಿ ಮೋಕ್ಷಮಾರ್ಗದ ಪಾಲನೆ ಶೀಘ್ರವಾಗಿ ಮತ್ತು ಸರಳವಾಗಿ ಫಲಿಸಲಿ, ಅವರ ಕೃಪಾಶಿರ್ವಾದ ಸಕಲ ಭಕ್ತರಿಗೆ ನಿರಂತರವಾಗಿರಲಿ ಎಂದು ಪ್ರಾರ್ಥಿಸಿ ಭಕ್ತಿ ಪೂರ್ವಕ ತ್ರಿವಾರು ನಮೋಸ್ತುಗಳು.

ಅವರ ಅಂತರಾತ್ಮದಲ್ಲಿ ಸಾರ್ಥಕ ಭಾವವನ್ನು ಗಮನಿಸಬಹುದಾಗಿದೆ. ಪೂಜ್ಯರ ದರ್ಶನವನ್ನು ಪಡೆಯಲು ನಾನಾ ಊರುಗಳಿಂದ ಸಾಗರೋಪಾಧಿಯಲ್ಲಿ ಜನ ಹರಿದುಬರುತ್ತಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top