ಆಗಸ್ಟ್ 17 : ಜಿಎಸ್ಬಿ ಸಮಾಜ ಹಿತರಕ್ಷಣಾ ವೇದಿಕೆ (ರಿ.) ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿ ವೇತನ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ
ಉಡುಪಿ : ಜಿಎಸ್ಬಿ ಸಮಾಜ ಹಿತ ರಕ್ಷಣಾ ವೇದಿಕೆ (ರಿ.) ಮತ್ತು ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ( ರಿ.), ಮುದರಂಗಡಿ ಸಂಯುಕ್ತ ಆಶ್ರಯದಲ್ಲಿ 11ನೇ ವರ್ಷದ ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿವೇತನ ವಿತರಣೆ, ಶೈಕ್ಷಣಿಕ ಪ್ರೇರಣಾ ಕಾರ್ಯಾಗಾರ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉಡುಪಿಯ ಅಂಬಾಗಿಲಿನಲ್ಲಿರುವ ಅಮೃತ ಗಾರ್ಡನ್ ಆಡಿಟೋರಿಯಂ ನಲ್ಲಿ ಆಗಸ್ಟ್ 17 ಆದಿತ್ಯವಾರದಂದು ಜರುಗಲಿರುವುದು.
ಉದ್ಘಾಟನಾ ಸಮಾರಂಭ
ಬೆಳಿಗ್ಗೆ 9: 45 ಗಂಟೆಗೆ ಉದ್ಘಾಟನಾ ಸಮಾರಂಭವು ಪ್ರಾರಂಭವಾಗಲಿದ್ದು
ಕಾರ್ಯಕ್ರಮದ ಉದ್ಘಾಟನೆಯನ್ನು ನಿಟ್ಟೆ ವಿಶ್ವವಿದ್ಯಾನಿಲಯದ ನಿರ್ದೇಶಕ ಎ. ಯೋಗೀಶ್ ಹೆಗ್ಡೆ ನೆರವೇರಿಸಲಿದ್ದು,
ಮುಖ್ಯ ಅತಿಥಿಗಳಾಗಿ ಬಂಟ್ವಾಳ ಶ್ರೀ ತಿರುಮಲ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿರುವ ಅಶೋಕ ಶೆಣೈ, ಬೆಂಗಳೂರಿನ ಉದ್ಯಮಿ ಬೇಲಾಡಿ ಜಯವಂತ ಕಾಮತ್, ಸಾಗರದ ಕೈಗಾರಿಕೋದ್ಯಮಿ ಗಿರೀಶ್ ಪ್ರಭು, ಶಿವಮೊಗ್ಗದ ಸಾಮಾಜಿಕ ಮುಂದಾಳು ರೀತಾ ಪ್ರಕಾಶ್ ಪ್ರಭು ವಹಿಸಲಿದ್ದಾರೆ.
ಶೈಕ್ಷಣಿಕ ಪ್ರೇರಣ ಕಾರ್ಯಾಗಾರ :
ಅಪರಾನ 12 :00 ಗಂಟೆಯಿಂದ 1:15 ಗಂಟೆಯವರೆಗೆ ತ್ರಿಷಾ ವಿದ್ಯಾ ಸಮೂಹ ಸಂಸ್ಥೆಗಳ ಸಂಸ್ಥಾಪಕ ಸಿಎ ಗೋಪಾಲಕೃಷ್ಣ ಭಟ್ ಮತ್ತು ಉಡುಪಿಯ ಸರ್ಜನ್ ಸುರೇಶ್ ಶೆಣೈ ಯವರಿಂದ ” ಶೈಕ್ಷಣಿಕ ಪ್ರೇರಣ ಕಾರ್ಯಗಾರ “ ನಡೆಯಲಿರುವುದು.
” ಮಾತ್ರವಂದನ” : ಹಿತರಕ್ಷಣ ವೇದಿಕೆಯ ಆರಂಭದ ದಿನಗಳಿಂದ ಮಾರ್ಗದರ್ಶಕರಾಗಿರುವ ಬೆಂಗಳೂರಿನ ಹಿರಿಯ ಸಾಮಾಜಿಕ ಕಾರ್ಯಕರ್ತೆಯಾಗಿರುವ ಸತ್ಯಭಾಮ ಕಾಮತ್ ರವರಿಗೆ ವಿಶೇಷ ಅಭಿನಂದನೆ ಮತ್ತು ” ಮಾತ್ರವಂದನ ಗೌರವ ಪುರಸ್ಕಾರ” ನೀಡಲಾಗುವುದು.
ವಯೋವಂದನ : ಹಿರಿಯರಿಗೆ ವಿಶೇಷ ಆರೈಕೆಯ ಆಶ್ರಯ ಧಾಮ “ವಯೋವಂದನ ಆತಿಥ್ಯಗ್ರಹ”ದ ಯೋಜನೆ ಹಾಗೂ ವೇದಿಕೆಯ ವೆಬ್ಸೈಟ್ ಮತ್ತು ಸಾಮಾಜಿಕ ಜಾಲತಾಣಗಳ ಲೋಗೋ ಬಿಡುಗಡೆ ಮಾಡಲಾಗುವುದು.
ಸಮಾರೋಪ ಸಮಾರಂಭ :
ಅಪರಾಹ್ನ 1:30 ಗಂಟೆಯಿಂದ ಪ್ರತಿಭಾ ಪುರಸ್ಕಾರ, ವಿದ್ಯಾ ಪೋಷಕ ವಿದ್ಯಾರ್ಥಿ ವೇತನ, ಶೈಕ್ಷಣಿಕ ದತ್ತು ಸ್ವೀಕಾರ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ನಡೆಯಲಿದ್ದು ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾರ್ಕಳದ ನಿವೃತ್ತ ಲೆಕ್ಕಪರಿಶೋಧಕರಾದ ಕೆ. ಕಮಲಾಕ್ಷ ಕಾಮತ್ ರವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಾಗರದ ಕೈಗಾರಿಕೋದ್ಯಮಿ ಶಿವಾನಂದ ಭಂಡಾರ್ಕರ್, ಉಡುಪಿಯ ಅನಂತ ವೈದಿಕ ಕೇಂದ್ರದ ವೇದಮೂರ್ತಿ ಚೇಂಪಿ ರಾಮಚಂದ್ರ ಅನಂತ ಭಟ್, ಮಂಗಳೂರಿನ ಕುಡ್ತರಿ ಮಹಮ್ಮಾಯ ದೇವಸ್ಥಾನದ ವೇದಮೂರ್ತಿ ವಿಠಲ್ ಭಟ್, ಬೆಂಗಳೂರಿನ ಉದ್ಯಮಿ ಸಿಎ ಸುಧೀರ್ ಪ್ರಭು ಹಾಗೂ ಆಂಧ್ರಪ್ರದೇಶದ ಉದ್ಯಮಿ ನಂದ್ಯಾಲ ರಘುವೀರ್ ಶೆಣೈ ಭಾಗವಹಿಸಲಿದ್ದಾರೆ
ಎಂದು ಜಿಎಸ್ಬಿ ಸಮಾಜ ಹಿತರಕ್ಷಣಾ ವೇದಿಕೆ (ರಿ.) ಇದರ ಸಂಚಾಲಕ ಆರ್ .ವಿವೇಕಾನಂದ ಶೆಣೈ, ಅಧ್ಯಕ್ಷ ಜಿ. ಸತೀಶ್ ಹೆಗ್ಡೆ, ಕೋಟ ಮತ್ತು ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಮತ್ತು ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿವೇತನದ ಅಧ್ಯಕ್ಷರಾಗಿರುವ ಸಿಎ ಎಸ್ಎಸ್ ನಾಯಕ್ ರವರು ಜಂಟೀಯಾಗಿ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.





































