ಕಾರ್ಕಳ : ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ದಾರದ ಅಂಗವಾಗಿ ಅ. 20 ಅದಿತ್ಯವಾರ ಬೆಳಿಗ್ಗೆ 10 ಘಂಟೆಗೆ ಮಾಗಣೆ ಗ್ರಾಮದ ಎಲ್ಲಾ ಭಕ್ತರನ್ನು ಒಳಗೊಂಡಂತೆ ಬ್ರಹ್ಮಕಲಶೋತ್ಸವ ನೂತನ ಸಮಿತಿಯನ್ನು ರಚಿಸುವ ಬಗ್ಗೆ ಸಮಾಲೋಚನೆಗೆ ಸಭೆಯನ್ನು ಕರೆಯಲಾಗಿದೆ.
ಎಲ್ಲಾ ಮಾಗಣೆ, ಗ್ರಾಮದ ಊರ ಮತ್ತು ಪರವೂರ ಭಕ್ತಾಭಿಮಾನಿಗಳು ಸ್ವಯಂ ಪ್ರೇರಿತರಾಗಿ ಪಾಲ್ಗೊಳ್ಳಬೇಕಾಗಿ ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ದಾರ ಸಮಿತಿ ಪ್ರಕಟಣೆಯೊಂದರಲ್ಲಿ ತಿಳಿಸಿದೆ.































