ಅಶ್ಲೀಲ ಕರೆ : ಪೊಲೀಸ್ ಸಿಬ್ಬಂದಿಯ ಬಂಧನ

ಆರೋಪಿಯಾಗಿರುವ ಪೊಲೀಸ್ ಸಿಬ್ಬಂದಿ ಶಾಂತಪ್ಪ
ಮೂಡಬಿದಿರೆ : ದಾಂಪತ್ಯ ವಿರಸದ ಹಿನ್ನಲ್ಲೆಯಲ್ಲಿ ಪತಿಯ ವಿರುದ್ಧ ಠಾಣೆಗೆ ದೂರು ನೀಡಿದ ಮಹಿಳೆಯೊಬ್ಬರನ್ನು ತನ್ನ ಗಾಳಕ್ಕೆ ಹಾಕಿಕೊಂಡು ಅಶ್ಲೀಲವಾಗಿ ಸಂಭಾಷಣೆ ನಡೆಸಿ ಕರ್ತವ್ಯ ಲೋಪ ಎಸಗಿದ ಆರೋಪದ ಹಿನ್ನಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯೋರ್ವನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ ಘಟನೆ ಬೆಳಕಿಗೆ ಬಂದಿದೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿಯ ಶಾಂತಪ್ಪ(28) ಪ್ರಕರಣದ ಆರೋಪಿ. ಈತ ಮೂಡುಬಿದಿರೆ ಠಾಣೆಯ ಪೊಲೀಸ್ ಸಿಬ್ಬಂದಿ. ಅವಿವಾಹಿನಾಗಿದ್ದಾನೆ.
ಘಟನೆಯ ಕುರಿತು….
ಕಳೆದ ಕೆಲ ದಿನಗಳ ಹಿಂದೆ ಮದ್ಯವಯಸ್ಸಿನ ಮಹಿಳೆಯೊಬ್ಬರು ತನ್ನ ಗಂಡ ವಿರುದ್ಧ ದೂರು ನೀಡಲು ಮೂಡುಬಿದಿರೆ ಠಾಣೆಗೆ ಬಂದಿದ್ದರು.
ದಾಂಪತ್ಯ ವಿರಸವೇ ದೂರಿಗೆ ಕಾರಣವಾದ ಹಿನ್ನಲೆಯಲ್ಲಿ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ಸಮಕ್ಷಮದಲ್ಲಿ ದೂರುದಾರ ಮಹಿಳೆಯ ಗಂಡನನ್ನು ಠಾಣೆಗೆ ಕರೆಯಿಸಿ, ಕಾನೂನು ರೀತಿಯಲ್ಲಿ ಬುದ್ದಿವಾದ ಹೇಳಿ ದಂಪತಿಯನ್ನು ಒಂದುಗೂಡಿಸಿ ಠಾಣೆಯಿಂದ ಕಳುಹಿಸಿ ಕೊಟ್ಟಿದ್ದರು.
ಆ ವೇಳೆಗೆ ಠಾಣೆಯ ಹೆಬ್ಬಾಗಿಲಲ್ಲಿ ಕರ್ತವ್ಯ ನಿರ್ವಹಿಸಿದ ಪೊಲೀಸ್ ಸಿಬ್ಬಂದಿ ಶಾಂತಪ್ಪ, ಸಂದರ್ಶಕರ ಪುಸ್ತಕದಲ್ಲಿ ದಾಖಲಾಗಿದ್ದ ಮಹಿಳೆಯ ಫೋನ್ ನಂಬ್ರ ಸಂಗ್ರಹಿಸಿದನು.
ಠಾಣೆಯಿಂದ ಗಂಡನೊಂದಿಗೆ ತೆರಳಿದ ಮಹಿಳೆಗೆ ಫೋನ್ ಕರೆ ಮಾಡಿ ತನ್ನ ಪರಿಚಯಿಸಿಕೊಂಡ ಶಾಂತಪ್ಪ, ತಾನೊಬ್ಬ ಅವಿವಾಹಿತ… ಎನ್ನುತ್ತಾ ಅಶ್ಲೀಲವಾಗಿ ಮಾತನಾಡಲು ಶುರುವಾಡಿದನು.
ಆ.25ರಿಂದ ಸೆ.1ರ ವರೆಗೂ ಆಕೆಗೆ ನಿರಂತರ ಮೆಸೇಜ್ ಮತ್ತು ಕರೆ ಮಾಡಿ ಅಶ್ಲೀಲವಾಗಿ ಮಾತನಾಡುತ್ತಾ, ತನ್ನೊಂದಿಗೆ ಬರುವಂತೆ ಕರೆ ಮಾಡುತ್ತಿದ್ದ ಎಂದು ಮಹಿಳೆ ಸೆ.1ರಂದು ಮೂಡುಬಿದಿರೆ ಠಾಣೆಗೆ ಬಂದು ಶಾಂತಪ್ಪನ ವಿರುದ್ಧ ಕಾಲ್ ರೆಕಾರ್ಡ್ ಸಹಿತ ದೂರು ನೀಡಿದ್ದಳು.




































