

ಅಶಕ್ತ ಕುಟುಂಬಕ್ಕೆ ನೆರವಾದ ಅಂಚೆ ಇಲಾಖೆ
ಕಾರ್ಕಳ : ಮರ್ಣೆ ಗ್ರಾಮದ ಎಣ್ಣೆಹೊಳೆ ಅಂಚೆ ಡೊಂಬರಪಲ್ಕೆ ನಿವಾಸಿ ದಿನೇಶ್ ಮತ್ತು ಉಷಾ ದಂಪತಿಯ 10 ವರ್ಷದ ಪುತ್ರಿ ಕುಮಾರಿ ತೃಷಾ ದಿನೇಶ್ ಪೂಜಾರಿ ಇವರು ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿದ್ದು , ತಾಯಿಯೂ ತೀವ್ರವಾದ ಕಾಯಿಲೆಯಿಂದ ಬಳಲುತ್ತಿದ್ದು , ತೀರಾ ಬಡ ಕುಟುಂಬದವರಾದವರಾಗಿದ್ದಾರೆ.


ಇವರ ಆಧಾರ್ ಬಯೋಮೆಟ್ರಿಕ್ ಅಪ್ಡೇಟ್ ಮತ್ತು ವಿಳಾಸ ತಿದ್ದುಪಡಿ ಮಾಡಬೇಕಾಗಿದ್ದು , ಇದರ ಅಪ್ಡೇಟ್ ಅಂಚೆ ಕಚೇರಿಗೆ ಭೇಟಿ ನೀಡಿ ಮಾಡಿಸಲು ಅಸಾಧ್ಯವಾಗಿತ್ತು.
ಈ ಹಿನ್ನಲೆಯಲ್ಲಿ ಕಾರ್ಕಳ ಪ್ರಧಾನ ಅಂಚೆ ಕಚೇರಿಗೆ ಮಾಹಿತಿಯನ್ನು ತಿಳಿಸಿ , ಮನೆಗೆ ತೆರಳಿ ಅಪ್ಡೇಟ್ ಮಾಡಲು ಮನವಿಯನ್ನು ಸಲ್ಲಿಸಲಾಗಿತ್ತು.
ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಪುತ್ತೂರು ಅಂಚೆ ವಿಭಾಗದ ಮಾರ್ಕೆಟಿಂಗ್ ತಂಡವು ಎಣ್ಣೆಹೊಳೆಯ ದಿನೇಶ್ ಅವರ ಮನೆಗೆ ತೆರಳಿ ಆಧಾರ್ ಬಯೋಮೆಟ್ರಿಕ್ ಅಪ್ಡೇಟ್ ಮತ್ತು ವಿಳಾಸ ತಿದ್ದುಪಡಿಯನ್ನು ಮಾಡಿಸಿಕೊಡಲಾಯಿತು .



































