


ಅಶಕ್ತರಿಗೆ ನೆರವು ನೀಡಿದ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘ
ಕಾರ್ಕಳ : ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘ ಉಡುಪಿ ಜಿಲ್ಲೆ ಹಾಗೂ ಕಾರ್ಕಳ ತಾಲೂಕು ಘಟಕದ ನೇತೃತ್ವದಲ್ಲಿ ಗ್ರಾಮ ಸಮಿತಿಗಳು ಒಟ್ಟು ಮಾಡಿದ ಸಹಾಯಧನವನ್ನು ನಂದಳಿಕೆ ಗ್ರಾಮದ ಕ್ಯಾನ್ಸರ್ ಗೆ ತುತ್ತಾಗಿರುವ ಕೆದಂಜೆ ಗ್ರಾಮದ ಅಧ್ಯಕ್ಷ ಸುಧಾಕರ್ ನಂದಳಿಕೆ ಹಾಗೂ ರವಿ ನಂದಳಿಕೆಯವರಿಗೆ ಸಹಾಯಧನವನ್ನು ಅವರ ನಿವಾಸದಲ್ಲಿ ಹಸ್ತಾಂತರಿಸಲಾಯಿತು.
ಇದೇ ಸಂದರ್ಭದಲ್ಲಿ ರಾಜ್ಯ ಕಾರ್ಯಾಧ್ಯಕ್ಷ ಶ್ರೀನಿವಾಸ್ ಕಾರ್ಲ, ಉಡುಪಿ ಜಿಲ್ಲಾಧ್ಯಕ್ಷ ಶೇಖರ್ ಕಂಪಾನ್, ತಾಲೂಕು ಅಧ್ಯಕ್ಷ ಹರೀಶ್ ಪಳ್ಳಿ, ಮಹಿಳಾ ಅಧ್ಯಕ್ಷೆ ಉಷಾ,ಜಿಲ್ಲಾ ಉಪಾಧ್ಯಕ್ಷ ಸಾಧು ಬೆಜಕಳ, ಸಂಜೀವ ಕೆದಿಂಜೆ, ಮೂಡುಬಿದಿರೆ ಗೌರವಾಧ್ಯಕ್ಷ ಆನಂದ್ ಕಾರ್ಲ,ಜಿಲ್ಲಾ ಕಾರ್ಯದರ್ಶಿ ರತ್ನಾಕರ ಪಳ್ಳಿ, ತಾಲೂಕು ಕಾರ್ಯದರ್ಶಿ ಹರೀಶ್ ಪಾಜೆಗುಡ್ಡೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಶಿ ರಂಗನ್ ಪಲ್ಕೆ, ತಾಲೂಕು ಉಪಾಧ್ಯಕ್ಷ ವಿಠ್ಠಲ ಅಯ್ಯಪ್ಪ ನಗರ,ಜೊತೆ ಕಾರ್ಯದರ್ಶಿ ಸುಧಾಕರ್ ಅಂಬಡೆಕಲ್ಲು, ತಾಲೂಕು ಕಾರ್ಯದರ್ಶಿ ಹರೀಶ್ ಪಾಜೆಗುಡ್ಡೆ, ಸಂಘಟನಾ ಕಾರ್ಯದರ್ಶಿ ರಾಜೇಶ್ ದಾನಶಾಲೆ, ಸುಕೇಶ್ ಬೋಳ ಹಾಗೂ ಕಾರ್ಕಳ ತಾಲೂಕಿನ ಗ್ರಾಮ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

































