ಕಾರ್ಕಳ : ಶುಕ್ರವಾರ ಅವಿಭಜಿತ ದ.ಕ ಜಿಲ್ಲಾ ವ್ಯಾ ಪ್ತಿಯ ಹಲವೆಡೆಗಳಲ್ಲಿ ಗುಡುಗಿನಿಂದ ಕೂಡಿದ ಮಳೆ ಸುರಿದಿದೆ.
ತಲಪಾಡಿ,ತೊಕ್ಕೊಟ್ಟು ಮೊದಲಾದೆಡೆಗಳಲ್ಲಿ ಬೆಳಿಗ್ಗಿನಿಂದಲೇ ಕೆಲ ಗಂಟೆಗಳ ಕಾಲ ಮಳೆ ಸುರಿದಿದೆ.
ಸಂಜೆ ಹೊತ್ತಿಗೆ ಬಜಗೋಳಿ, ಕೆರ್ವಾಸೆ, ಮಾಳ, ನೆಲ್ಲಿಕಾರು, ಹೊಸ್ಮಾರು,ಶಿರ್ತಾಡಿ ಪರಿಸರದಲ್ಲಿ ಗುಡುಗಿನಿಂದ ಕೂಡಿದ ಮಳೆ ಸುರಿದಿದೆ.
ಪರಿಣಾಮವಾಗಿ ಪರಿಸರದಲ್ಲಿ ಕಾವು ಕ್ಷೀಣಿಸುತ್ತಾ ತಂಪಾದ ಗಾಳಿ ಬೀಸಲಾರಂಭಿಸಿದೆ.









































