ಅಲಂಗಾರು ಆಶ್ರಯ ಕಾಲೋನಿ ಕಾಂಕ್ರೀಟ್ ರಸ್ತೆ ಹೊಂಡಮಯ: ಮೂರು ವರ್ಷದಲ್ಲಿ ನೂರಾರು ಸಮಸ್ಸೆ!

Picture of RB NEWS

RB NEWS

Bureau Report

ಮೂಡುಬಿದಿರೆ: ಅಲಂಗಾರು ಆಶ್ರಯ ಕಾಲೋನಿ ಕಾಂಕ್ರೀಟ್ ರಸ್ತೆಯ ನಿರ್ಮಾಣವು ಅತ್ಯಂತ ಕಳಪೆ ಕಾಮಗಾರಿಯಾಗಿದೆ. ಇದಕ್ಕೆ‌ ಇಂಬು ನೀಡಿದಂತೆ‌ಟ ಕಾಮಗಾರಿ ನಡೆದು ವರ್ಷ ಮೂರು ಕಳೆಯುವ ಮುನ್ನವೇ ಕಾಂಕ್ರೀಟ್ ರಸ್ತೆಯಿಂದ ಬೇರ್ಪಟ್ಟಿದೆ. ರಸ್ತೆ ಪೂರ್ತಿ ಹೊಂಡವೇ ಕಾಣಸಿಗುತ್ತದೆ.

2019 ಏಪ್ರಿಲ್ ನಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಗೊಂಡಿದ್ದು, ಮಿತಿ ಮೀರಿ‌ ವಾಹನ ಸಂಚಾರ ಇಲ್ಲದಿರುವ ಈ ರಸ್ತೆಯೂ ಕನಿಷ್ಠ ವೆಂದರೆ 15 ವರ್ಷವಾದರೂ ಬಾಳಿಕೆ ಬರಬಹುದಿತ್ತು.

ದುರದೃಷ್ಟವೆಂದರೆ‌ ಮೂರು ವರ್ಷ ಕಳೆಯುತ್ತಿದ್ದಂತೆ‌ ನೂರಾರು ಸಮಸ್ಸೆ ಎದುರಾಗಿದೆ. ಕಾಮಗಾರಿ ಗುಣಮಟ್ಟ ಕ್ಷೀಣಿಸಿದ್ದು, ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಲ್ಷ್ಯ ಧೋರಣೆಯಿಂದಾಗಿ ಭಾರೀ ಮೊತ್ತದ ಅನುದಾನದಲ್ಲಿ ಭ್ರಷ್ಟಾಚಾರ ತಾಂಡವವಾಡಿದೆ.‌

ಈಗಗಾಲೇ ಕಾಂಕ್ರೀಟ್ ರಸ್ತೆಯ ಅಲ್ಲಲ್ಲಿ ಸುಮಾರು 20 ಕಡೆ ಗುಂಡಿಗಳು ಕಾಣಸಿಗುತ್ತದೆ. ವಾಹನದವರಿಗೆ ಯಾವುದೇ ರೀತಿಯಲ್ಲಿ ಗುಂಡಿಗಳನ್ನು ತಪ್ಪಿಸಲು ಸಾಧ್ಯವಾಗದ ರೀತಿಯಲ್ಲಿ ರಸ್ತೆಯ ಪರಿಸ್ಥಿತಿಯಾಗಿದೆ.

ರಸ್ತೆ ತಡೆಯ ಅಗತ್ಯ ಇಲ್ಲದೇ ಇರುವಲ್ಲಿಯೂ ಕೂಡ ರಸ್ತೆ ತಡೆಯನ್ನು ಹಾಕಿ ಅನಗತ್ಯ ತೊಂದರೆಯನ್ನು ವಾಹನ ಚಾಲಕರಿಗೆ ಉಂಟು ಮಾಡಲಾಗಿದೆ ಎನ್ನುವುದು ಸ್ಥಳೀಯರ ಆಕ್ರೋಶವಾಗಿದೆ.

ಮೂಡುಬಿದಿರೆ ಆಡಳಿತ ವರ್ಗವೂ ಈ ಕಡೆ ಗಮನ ಹರಿಸಬೇಕೆಂಬುವುದು ನಾಗರಿಕರ ಆಗ್ರಹವಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top