ಅರೆಬರೆ ರಸ್ತೆ ಕಾಮಗಾರಿ ವಿರುದ್ಧ ಸಿಡಿದೆದ್ದ ಗ್ರಾಮಸ್ಥರು



ಹೆಬ್ರಿ ಮಾಂಡಿ ಮೂರ್ ಕೈ ಸಂಪರ್ಕಿಸುವ ಪ್ರಮುಖ ರಸ್ತೆಯ ಡಾಂಬರೀಕರಣ ನಡೆಯುತ್ತಿದ್ದು. ಇದು ಸಮರ್ಪಕವಾಗಿ ಆಗಲಿಲ್ಲ ಎಂದು ಇಂದು ಹೆಬ್ರಿ ಕುಚ್ಚೂರು ಭಾಗದ ಗ್ರಾಮಸ್ಥರು ಕಾಮಗಾರಿಯನ್ನು ತಡೆದು. ಅಧಿಕಾರಿಗಳು ಹಾಗೂ ಕಾಮಗಾರಿ ಗುತ್ತಿಗೆದಾರರು ಮೊದಲೇ ಹೇಳಿದ ಹಾಗೆ ರಸ್ತೆ ಅಗಲೀಕರಣ ಆಗಬೇಕು. ಇಲ್ಲದಿದ್ದರೆ ಡಾಂಬರೀಕರಣ ಬೇಡ. ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಆಗಮಿಸಿದ ಹೆಬ್ರಿ ಠಾಣಾಧಿಕಾರಿ ರವಿ ಬಿಕೆ, ಪಿಡಬ್ಲ್ಯೂಡಿ ಇಂಜಿನಿಯರ್ ತ್ರಿನೇಂದ್ರ, ಗುತ್ತಿಗೆದಾರ ವಾದಿರಾಜ ಶೆಟ್ಟಿ ಇವರು ಆಕ್ರೋಶಗೊಂಡ ಗ್ರಾಮಸ್ಥರನ್ನು ಮನವೊಲಿಸಿ ಮಳೆಗಾಲ ಕಳೆದ ನಂತರ ಡಿಸೆಂಬರಲ್ಲಿ ರಸ್ತೆಯ ಮರು ಡಾಂಬರೀಕರಣ ಅಗಲೀಕರಣ ಮಾಡಿಕೊಡುತ್ತವೆ ಎಂದು ಭರವಸೆ ನೀಡಿದರು. ಅರಣ್ಯ ಇಲಾಖೆಯವರ ಸಮಸ್ಯೆಯಿಂದ ರಸ್ತೆ ಅಗಲೀಕರಣಕ್ಕೆ ವಿಳಂಬವಾಗಿದೆ. ಅರಣ್ಯ ಇಲಾಖೆಯ ಎಫ್ ಸಿ ಸಿಕ್ಕಿದ ಕೂಡಲೇ ಕಾಮಗಾರಿ ನಡೆಸಲಾಗುವುದು ಎಂದು ಹೇಳಿದರು.
ಶಾಸಕ ವಿ.ಸುನಿಲ್ ಕುಮಾರ್ ಭೇಟಿ

ಕಳೆದ ಹಲವು ವರ್ಷಗಳಿಂದ ಹೆಬ್ರಿ,ಕುಚ್ಚೂರು ಮತ್ತು ಮಾಂಡಿಮೂರ್ ಕೈ ಗೆ ಸಂಪರ್ಕಿಸುವ ಪ್ರಮುಖ ರಸ್ತೆಯ ಅಗಲೀಕರಣಕ್ಕೆ ಅರಣ್ಯ ಇಲಾಖೆಯವರು ಅಡ್ಡಿಪಡಿಸುತ್ತಿದ್ದು. ಇದರಿಂದ ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಬಹಳ ತೊಂದರೆಯಾಗುತ್ತಿದ್ದು. ಈ ಹಿಂದೆ ಹಲವು ಬಾರಿ ಪ್ರತಿಭಟನೆ ನಡೆಸಿದರು ಯಾವುದೇ ಪ್ರಯೋಜನವಾಗಲಿಲ್ಲ. ನಿನ್ನೆ ಇದೇ ರಸ್ತೆಗೆ ಅಗಲಿಕರಣ ಮಾಡದೆ ಈಗಿರುವ ರಸ್ತೆ ಮೇಲೆ ಮರು ಡಾಂಬರೀಕರಣ ನಡೆಯುತ್ತಿರುವಾಗ ಅದು ಅಸಮರ್ಪಕವಾಗಿದೆ ಎಂದು ಗ್ರಾಮಸ್ಥರು ಕಾಮಗಾರಿಯನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಮಾಧ್ಯಮದಲ್ಲಿ ವರದಿಯಾಗಿತ್ತು. ಇಂದು ಬೆಳಿಗ್ಗೆ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ವಿ. ಸುನಿಲ್ ಕುಮಾರ್ ಅವರು ಭೇಟಿ ನೀಡಿ ಸಮಸ್ಯೆಯನ್ನು ಪರಿಶೀಲಿಸಿ. ನಾನು ಈಗಾಗಲೇ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಮುಂದಿನ ದಿನಗಳಲ್ಲಿ ಇದು ರಸ್ತೆ ಅಗಲೀಕರಣ ಆಗಲಿದೆ. ಈ ಬಗ್ಗೆ ಯಾರಿಗೂ ಗೊಂದಲ ಬೇಡ ಎಂದು ಶಾಸಕರು ಭರವಸೆ ನೀಡಿದರು. ಅವರೊಂದಿಗೆ ಸ್ಥಳೀಯ ಗ್ರಾಮಸ್ಥರು ಮುಖಂಡರು ಮತ್ತಿತರು ಉಪಸ್ಥಿತರಿದ್ದರು.
ಅಧಿಕಾರಿಗಳಿಗೆ ಕಾಂಗ್ರೆಸ್ ಮುಖಂಡ ಉದಯ್ ಕುಮಾರ್ ಶೆಟ್ಟಿ ಸೂಚನೆ

ಹೆಬ್ರಿ ಕುಚ್ಚೂರು ರಸ್ತೆ ಸರಿಯಾದ ರೀತಿಯಲ್ಲಿ ಅಗಲೀಕರಣ ಮಾಡುವುದಾದರೆ ಮಾತ್ರ ಮಾಡಿ. ಇಲ್ಲದಿದ್ದರೆ ಇಲ್ಲಿಗೆ ಡಾಂಬರೀಕರಣ ಕೆಲಸ ನಿಲ್ಲಿಸಿ ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಇಂದು ಸ್ಥಳಕ್ಕೆ ಭೇಟಿ ನೀಡಿ ಸಂಬಂಧಪಟ್ಟ ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸ್ಥಳೀಯರ ಗ್ರಾಮಸ್ಥರ ದೂರಿನ ಮೇರೆಗೆ ಉದಯಕುಮಾರ್ ಶೆಟ್ಟಿ ಅವರು ಕೂಡಲೆ ಸ್ಪಂದಿಸಿ ಸ್ಥಳಕ್ಕೆ ಆಗಮಿಸಿ ಅಧಿಕಾರಿಗೆ ದೂರವಾಣಿ ಕರೆ ಮಾಡಿ. ಸರಿಯಿದ್ದ ಡಾಂಬರು ರಸ್ತೆಗೆ ಪುನಃ ಡಾಂಬರೀಕರಣ ಏಕೆ ಮಾಡುತ್ತೀರಿ. ನೀವು ಫೈಲ್ ಕ್ಲೋಸ್ ಮಾಡ್ಲಿಕ್ಕೆ ಹೀಗೆ ಮಾಡುತ್ತಿದ್ದೀರಿ. ನೀವು ಈಗ ಮಾಡಿ ಹೋದರೆ ಪುನಃ ಅಗಲೀಕರಣ ಆಗುವುದಿಲ್ಲ. ಅದು ಅಲ್ಲದೆ ಈಗ ಮಳೆಗಾಲ ಸ್ಟಾರ್ಟ್ ಆಗಿದೆ. ಇನ್ನು ಮೂರು ನಾಲ್ಕು ತಿಂಗಳು ಕಾಯುವ ನಂತರ ಅರಣ್ಯ ಇಲಾಖೆಯ ಅನುಮತಿ ಪಡೆದು ನಂತರ ಸರಿಯಾಗಿ ಕಾಮಗಾರಿ ಮಾಡಿ ಎಂದು ಉದಯ್ ಕುಮಾರ್ ಶೆಟ್ಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸ್ಥಳೀಯ ಸಾಮಾಜಿಕ ಹೋರಾಟಗಾರ ಕುಚ್ಚೂರು ಶ್ರೀಕಾಂತ್ ಪೂಜಾರಿ, ಚಾರ ಗ್ರಾಮ್ ಪಂಚಾಯ್ತಿನ ಮಾಜಿ ಅಧ್ಯಕ್ಷ ದಿನೇಶ್ ಶೆಟ್ಟಿ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
[






































