ರಾಜ್ಯ ಸರಕಾರ ಅನುಷ್ಠಾನಕ್ಕೆ ತಂದಿದ್ದ ಗ್ಯಾರಂಟಿ ಯೋಜನೆಯ ಜಿಲ್ಲಾ ಸಮಿತಿಗೆ ಅಧ್ಯಕ್ಷ ,ಉಪಾಧ್ಯಕ್ಷ ಮತ್ತು ಸದಸ್ಯರುಗಳ ನೇಮಕಾತಿಗಳು ಜಿಲ್ಲಾವಾರು ಸಮಿತಿಯಡಿಯಲ್ಲಿ ನಡೆಯುತ್ತಿದೆ.
ದ. ಕ. ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿ ಕಾಂಗ್ರೆಸ್ಸಿನ ಹಿರಿಯ ವ್ಯಕ್ತಿ ಭರತ್ ಮುಂಡೋಡಿಯವರನ್ನು ನೇಮಕ ಮಾಡಲಾಗಿದೆ.
ದ. ಕ. ಜಿಲ್ಲೆಯ ಮೂಡುಬಿದಿರೆ ವಲಯದ ಅಧ್ಯಕ್ಷನಾಗಿ ಅರುಣ್ ಕುಮಾರ್ ಶೆಟ್ಟಿಯನ್ನು ನೇಮಕ ಮಾಡಲಾಗಿದೆ.ಆತ ಕಳೆದೆರಡು ಅವಧಿಗಳಿಂದ ವಾಲ್ಪಾಡಿ ಗ್ರಾಮ ಪಂಚಾಯತು ಸದಸ್ಯನೂ ಆಗಿರುತ್ತಾನೆ. ಒಂದು ಅವಧಿಯಲ್ಲಿ ಉಪಾಧ್ಯಕ್ಷನಾಗಿಯೂ ಸೇವೆ ಸಲ್ಲಿಸಿದ್ದ.ಒಬ್ಬ ಸಮರ್ಥ ನಾಯಕನಿಗೆ ಆ ಹುದ್ಗೆ ದೊರಕಿದೆ ಎಂದರೆ ಹೊಗಳಿಕೆಯಾಗದು.
ಕಾಂಗ್ರೆಸ್ ಪಕ್ಷದ ಸದಸ್ಯನಾಗಿ ರಾಜಕೀಯಕ್ಕೆ ಸೇರಿಕೊಂಡಂದಿನಿಂದಲೇ ಜನ ಸೇವೆ ನೀಡಲು ತುದಿಗಾಲಲ್ಲಿ ಅಲೆದಾಡಿದ್ದಾನೆ. ಆತ ಅದೆಷ್ಟು ಜನಪ್ರಿಯನಾದನೆಂದರೆ ರಾತ್ರಿಯಲ್ಲೂ ಅವನಿಗೆ ಕರೆ ಮಾಡಿ ಆಸ್ಪತ್ತ್ರೆಗೆ ಕರೆದೊಯ್ಯಲಿಕ್ಕೆ,ಆ್ಯಂಬುಲೆನ್ಸ್ ತರಿಸುವುದಕ್ಕೆ ಎಂದು ಜನ ಆತನನ್ನೆ ಮುಂದಿಟ್ಟುಕೊಳ್ಳಲು ಶುರು ಮಾಡಿದರು.ಕಿಸೆಯಿಂದ ಹಣ ಖಾಲಿಯಾಗುತ್ತಿದೆಯಾದರೂ ಆತ ನಾಯಕತ್ವವನ್ನು ಬೆಳೆಸಿಕೊಳ್ಳುವುದಕ್ಕೆ ಜನರ ನೋವು ಸಂಕಟಗಳಿಗೆ ಅಹರ್ನಿಶಿ ಸ್ಪಂದಿಸತೊಡಗಿದ.
ಅಡುಗೆ ಅನಿಲ ಸಂಪರ್ಕ ಕೊಡಿಸುವುದು,ರೇಷನ್ ಕಾರ್ಡ್ ಮಾಡಿಸಿಕೊಡುವುದು,ಆಧಾರ್ ಕಾರ್ಡ್ ಬದಲಾವಣೆ ಹಾಗೇ ತಿದ್ಗುಪಡಿ ಮುಂತಾದ್ದಕ್ಕೆ ಸೂಕ್ತ ಸಲಹೆ ಇತ್ಯಾದಿಯನ್ನು ಆಯಾಸವಿಲ್ಲದೆ ಕೊಡುತ್ತ ಬಂದಿರುತ್ತಾನೆ.
ನನ್ನ ಮನೆಯ ಆಗ್ನೇಯ ದಿಕ್ಕಿನಲ್ಲಿಯೇ ಐನೂರು ಅಡಿಗಳ ಅಂತರ ದೂರದಲ್ಲಿ ಅವನ ಮನೆ.ಬೆಳಗಾತ ಜನ ಅವನ ಮನೆಗೆ ಬರುವುದನ್ನು ನಾನು ಬಸ್ ಕಾಯುವಾಗ ಗಮನಿಸುತ್ತಿರುತ್ತೇನೆ.
ಸ್ವಲ್ಪ ಕೃಷಿ ಉತ್ಪತ್ತಿಯ ಅನುಕೂಲಸ್ಥನೇ ಆಗಿದ್ದರಿಂದ ಈಗಿನ ಕಾಲದಲ್ಲಿ ಜನರ ಬೇಕು ಬೇಡಗಳಿಗೆ ಸ್ಪಂದಿಸುವಾತನಾಗುವುದಕ್ಕೆ ಸಾಧ್ಯ!ಮನೆಯಲ್ಲಿಯೇ ಇದ್ದು ಬಟ್ಟೆ ಹೊಲಿಯುವ ಸೂಜಿಯಿಂದ ಕಾಲಿನಲ್ಲಿ ಹುದುಗಿದ್ದ ಮುಳ್ಳು ತೆಗೆಯಬಹುದಾದರೂ ಕೂಡ,ಯಾರಾದರೂ ಲೀಡರ್ ಒಬ್ಬನ ಮನೆಗೆ ಹೋಗಿ ಮುಖ ಬಾಡಿಸಿ ಕಿಸೆ ಕತ್ತರಿಸದಿದ್ದರೆ ಈಗಿನ ಬಹುತೇಕ ಜನರಿಗೆ ನಿದ್ದೆಯಿಲ್ಲ! ಹಾಗೆ ಅರುಣ ಶೆಟ್ಟಿಯು ಕೂಡಾ ಜನರ ಸಂಕಟಕ್ಕೆ ಹೊಂದಿಕೊಂಡು, ಸಹಿಸಿಕೊಂಡು ಜನಸೇವೆ ಮಾಡಿ ಪ್ರೀತಿ ಗಳಿಸಿದ್ದಾನೆ.ಆ ವಿಷಯದಲ್ಲಿ ಎರಡು ಮಾತಿಲ್ಲ.ಅವನ ರೀತಿಯಲ್ಲಿ ಆಸುಪಾಸಿನಲ್ಲಿ ಕಾಂಗ್ರೆಸ್ಸಿನವರು ಬೇರೆ ಯಾರೂ ಇಲ್ಲವೆಂದೇ ಹೇಳಬಹುದು.
ವರ್ಷಗಳ ಹಿಂದೆ ಆತನನ್ನು ಸಮೀಪದ ಬೆಳ್ತಂಗಡಿ ತಾಲೂಕಿನ ಕೆಲವು ಬಡವರೂ ರಾತ್ರಿ ಕಾಲ್ ಮಾಡಿ ಮಂಗಳೂರು ಆಸ್ಪತ್ತ್ರೆಯಲ್ಲಿ ಸೇರಿಸುವುದಕ್ಕೆ ಸಹಾಯ ಯಾಚಿಸುತ್ತಿದ್ದುದು ಬಹಿರಂಗವೇ ಆಗಿತ್ತು.
ರಾತ್ರಿಯಾಗಲಿ ,ಹಗಲಲ್ಲಾಗಲಿ ಯಾರಿಗೆ ಏನೇ ಆಪತ್ತಾಗಿದೆ ಎಂದು ತಿಳಿದರೆ ಸಾಕು ಮಾಜಿ ಸಚಿವ ಅಭಯಚಂದ್ರ,ಯುವ ನಾಯಕ ಮಿಥುನ್ ರೈಯವರಿಗೆ ಫೋನ್ ಕರೆ ಮಾಡಿ ಯಾವುದಾದರೂ ಒಂದು ವ್ಯವಸ್ಥೆಯನ್ನು ಮಾಡಿಸುತ್ತಿದ್ದ ಅರುಣನ ಸಾಹಸವನ್ನು ನನ್ನಂಥವನೇ ಮೆಚ್ಚುತ್ತಾನೆಂದರೆ ಬೇರೆ ಯಾರೂ ಅಲ್ಲಗಳೆಯಲಾರರು.
ಆತನ ಒಂದು ವಿಶೇಷತೆ ಎಂದರೆ ಯಾರು ಯಾವ ವಾರ್ಡು,ಯಾವ ಗ್ರಾಮದವರು ಎಂದು ಪರಿಗಣಿಸದೆ ತನಗೆ ತಿಳಿದಿರುವ, ಸಾಧ್ಯವಿರುವ ಮಟ್ಚಿನಲ್ಲಿ ಕೆಲಸ ಮಾಡುವುದು. ಅದು ಆತನನ್ನು ಎತ್ತರಕ್ಕೆ ಕೊಂಡೊಯ್ಯುತ್ತಿದೆ.
ಕೃಷಿಕರಿಂದ ಹಿಡಿದು ಕೂಲಿ ಕಾರ್ಮಿಕ ವರ್ಗದವರ ತನಕ ಸರಕಾರದ ಸಹಾಯ ಧನ ಮುಂತಾದ್ದನು ಒದಗಿಸಿಕೊಡುವಲ್ಲಿ ಆತ ತುಂಬಾ ಕಾಳಜಿ ವಹಿಸುತ್ತ ಬಂದಿರುವುದು ಗ್ರೇಟ್! ತನ್ನ ಮೋಟಾರ್ ಸೈಕಲ್ ನಲ್ಲಿಯೆ ಕರೆದಲ್ಲಿಗೆ ಸುತ್ತಾಡುತ್ತ ಸಮಸ್ಯೆಗಳನ್ನು ತಿಳಿದುಕೊಂಡು ತಕ್ಕುದಾದ ಪರಿಹಾರಕ್ಕೆ ಮುಂದಾಗುತ್ತ ಬರುವ ಆತನ ಒಳ್ಳೆಯತನವನ್ನು ಗ್ರಾಮದ ಪ್ರತಿಯೊಬ್ಬರೂ ಕೂಡಾ ಒಗ್ಗಟ್ಟಿನಿಂದಲೇ ಹೇಳುವವರಾಗಿದ್ದಾರೆ.ಅವರ ಮತದಾನ ಯಾವ ಪಕ್ಷಕ್ಕೆ ಆಗಿದ್ದಿರಲಿ ಅದನ್ನೆಲ್ಲ ಯಾರೂ ಕಟ್ಚಿಕೊಳ್ಳದೆ ಜನರೊಂದಿಗೆ ಬೆರೆತುಕೊಳ್ಳುವುದು ಹಾಗೆನೆ ಜನರು ಕೂಡಾ ಆತನೊಂದಿಗೆ ಕೂಡಿಕೊಂಡಿರುವುದನ್ನು ಅಭಿನಂದಿಸಲೇಬೇಕು. ಶಹಬ್ಬಾಷ್ ಹೇಳಲೇಬೇಕು.
ಅರುಣ ಕುಮಾರ್ ಶೆಟ್ಟಿ ಜಿಲ್ಲಾ ಪಂಚಾಯತ್ ಸದಸ್ಯನಾಗುವುದಕ್ಕೂ ಅರ್ಹನೆಂದು ನಾನು ಶಿಫಾರಸ್ಸು ಮಾಡುತ್ತೇನೆ.ಈಗೆಲ್ಲ ಮೀಸಲಾತಿಯ ರಾಜಕೀಯ ಇರುವುದರಿಂದ ಯಾವನೇ ಒಬ್ಬನನನ್ನು ಇಂಥದ್ದೇ ಜಾಗಕ್ಕೆ ಗುರುತಿಸಿ ಕೊಡುವುದಕ್ಕೆ ತುಂಬಾ ಕಷ್ಟ.
ಯಾವುದೇ ಹುದ್ದೆ ದೊರೆತ ಕೂಡಲೆ ಹುದ್ದೆಯಡಿಯಲ್ಲಿಯೇ ಮುಂದುವರಿದರೆ ಮಾತ್ರ ಮತ್ತೊಂದಕ್ಕೆ ಸೇತುವೆಯಾಗುತ್ತದೆ,ಹುದ್ದೆಯನ್ನೆ ಅಂಗೈನಲ್ಲಿ ಮುದ್ದೆ ಮಾಡಿಕೊಂಡು ಕೆಲಸ ಮಾಡಿದರೆ ಅದುವೇ ಹೊರದಬ್ಬುತ್ತದೆ.
ಅರುಣ ಕುಮಾರ್ ಶೆಟ್ಟಿಗೆ ಹತ್ಪೂರ್ವಕ ಅಭಿನಂದನೆಗಳು.
-ವಿ. ಕೆ. ವಾಲ್ಪಾಡಿ





































